Advertisement
ಕುಂದಾಪುರದ ಕೋಡಿ ಕಡಲತಡಿಯಲ್ಲಿ ಸೀವಾಕ್ ನಿರ್ಮಾಣವಾಗಿ ಸಾವಿರಾರು ಜನ ಪ್ರವಾಸಿಗರು ಬರುತ್ತಿದ್ದರೂ ಪ್ರವಾಸೋದ್ಯಮದ ನಿಟ್ಟಿನಲ್ಲಿ ನಡೆದ ಅಭಿವೃದ್ಧಿ ಕಾರ್ಯ ಶೂನ್ಯವೇ ಸರಿ. ಪಂಚ ಗಂಗಾವಳಿ ಎಂಬ ಹೆಸರಿಗೆ ತಕ್ಕಂತೆ ಐದು ನದಿಗಳು ಒಟ್ಟು ಸೇರಿ ಸಮುದ್ರವನ್ನು ಸೇರುವ ನಯನ ಮನೋಹರ ದೃಶ್ಯ ಗಂಗೊಳ್ಳಿಯಲ್ಲಿ ಕಾಣಬಹುದು. ಸೂರ್ಯೋದಯ ಹಾಗೂ ಸೂರ್ಯಾಸ್ತಮಾನವನ್ನು ಒಂದೇ ಸ್ಥಳದಲ್ಲಿ ನಿಂತು ನೋಡಬಹುದಾದ ಸ್ಥಳ ಗಂಗೊಳ್ಳಿ.
Related Articles
Advertisement
ಕಡಲ ತೀರದಲ್ಲಿ ತ್ಯಾಜ್ಯ ವಿಸರ್ಜನೆಗೆ ಅಂಕುಶ ಹಾಕದಿದ್ದಲ್ಲಿ ಮತ್ತೂಂದು ಬೀಡಿನಗುಡ್ಡೆ ಆಗಿ ಮಾರ್ಪಡುವುದರಲ್ಲಿ ಸಂಶಯವಿಲ್ಲ. ಇನ್ನಾದರೂ ಸಂಬಂಧಪಟ್ಟ ಇಲಾಖೆ, ಗ್ರಾ.ಪಂ. ಸೂಕ್ತ ಕಠಿನ ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಗಂಗೊಳ್ಳಿಯನ್ನು ಪ್ರವಾಸೋದ್ಯಮ ತಾಣವನ್ನಾಗಿ ಗುರುತಿಸಿ ಅಭಿವೃದ್ಧಿಪಡಿಸಿದರೆ ತ್ಯಾಜ್ಯ ವಿಲೇವಾರಿಗೆ ಬ್ರೇಕ್ ಬೀಳಲಿದೆ. ಖಾಲಿ ಜಾಗ ನೋಡಿ ಜನರು ತ್ಯಾಜ್ಯ ಎಸೆಯುತ್ತಿದ್ದು, ತ್ಯಾಜ್ಯ ಎಸೆಯುವವರನ್ನು ಗುರುತಿಸಿ ಅವರಿಗೆ ಕಠಿನ ಶಿಕ್ಷೆ ನೀಡಬೇಕು. ಗಂಗೊಳ್ಳಿ ಬೀಚ್‌ನಲ್ಲಿ ಸ್ವತ್ಛತೆ ಕಾಪಾಡಲು ಸಾರ್ವಜನಿಕರು ಸಹಕಾರ ನೀಡಬೇಕು. ಸ್ಥಳೀಯಾಡಳಿತ ಬೀಚ್‌ನಲ್ಲಿ ಎಸೆಯಲಾಗಿರುವ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು ಎನ್ನುತ್ತಾರೆ ಸ್ಥಳೀಯರಾದ ಕೃಷ್ಣ ಖಾರ್ವಿ.
ಗಂಭೀರ ಪರಿಗಣನೆ ಇಲ್ಲಪ್ರವಾಸೋದ್ಯಮಕ್ಕೆ ಪೂರಕವಾಗಿರುವ ಗಂಗೊಳ್ಳಿ ಕಡಲ ತೀರ ತ್ಯಾಜ್ಯ ವಿಸರ್ಜನೆಯ ಕೇಂದ್ರವಾಗಿ ಮಾರ್ಪಾಟಾಗುತ್ತಿರುವುದರ ಬಗ್ಗೆ ಸ್ಥಳೀಯಾಡಳಿತ ಗಂಭೀರವಾಗಿ ಪರಿಗಣಿಸಿಲ್ಲ. ಪ್ರವಾಸೋದ್ಯಮ ಇಲಾಖೆ ಹಾಗೂ ಅರಣ್ಯ ಇಲಾಖೆ ಕೂಡ ತ್ಯಾಜ್ಯ ವಿಸರ್ಜನೆ ನಿಲ್ಲಿಸಲು ಯಾವುದೇ ಕ್ರಮಕೈಗೊಳ್ಳದಿರುವುದು ತ್ಯಾಜ್ಯ ವಿಲೇವಾರಿ ಮಾಡುವವರಿಗೆ ವರದಾನವಾಗಿ ಪರಿಣಮಿಸಿದೆ. ಕಡಲ ತೀರದಲ್ಲಿ ವಿಹರಿಸಲು ಜನರು ಹಿಂದೇಟು ಹಾಕುತ್ತಿದ್ದಾರೆ. ಪ್ರತಿನಿತ್ಯ ನೂರಾರು ಮಂದಿ ಬರುತ್ತಿದ್ದ ಬೀಚ್‌ನಲ್ಲಿ ಇದೀಗ ಕೆಲವೇ ಕೆಲವು ಮಂದಿ ಮಾತ್ರ ಬರುತ್ತಿದ್ದಾರೆ. ಆಸುಪಾಸಿನ ಮಂದಿ ಬೀಚ್‌ನಲ್ಲಿ ಗೊತ್ತಿಲ್ಲದೆ ತ್ಯಾಜ್ಯ ಎಸೆಯುತ್ತಿರುವುದು ಸುತ್ತಮುತ್ತಲಿನ ನಿವಾಸಿಗಳ ನಿದ್ರೆಗೆಡಿಸಿದೆ. ಗಬ್ಬು ವಾಸನೆ ಪರಿಸರದ ತುಂಬೆಲ್ಲಾ ಹರಡಿಕೊಂಡಿದ್ದು ಜನಜೀವನ ದುಸ್ತರವೆನಿಸಿದೆ. ತೆರವಿಗೆ ಕ್ರಮ ಗಂಗೊಳ್ಳಿ ಬೀಚ್‌ನಲ್ಲಿ ತ್ಯಾಜ್ಯ ವಿಸರ್ಜನೆಗೆ ಸಂಬಂಧಪಟ್ಟಂತೆ ಈಗಾಗಲೇ ಅನೇಕ ಬಾರಿ ಸ್ಥಳೀಯರಿಗೆ ಮೌಖೀಕ ಎಚ್ಚರಿಕೆ ನೀಡಲಾಗಿದೆ. ಆದರೂ ತ್ಯಾಜ್ಯ ಕಡಿಮೆಯಾಗಿಲ್ಲ. ಸಂಬಂಧಪಟ್ಟ ಇಲಾಖಾಧಿ ಕಾರಿಗಳ ಜತೆ ಚರ್ಚೆ ನಡೆಸಿ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲಾಗುವುದು. ಸದ್ಯ ಬೀಚ್ ವಠಾರದಲ್ಲಿರುವ ತ್ಯಾಜ್ಯಗಳನ್ನು ತೆರವುಗೊಳಿಸಲು ಕ್ರಮಕೈಗೊಳ್ಳಲಾಗುವುದು. -ಉಮಾಶಂಕರ, ಪಿಡಿಒ, ಗ್ರಾಮ ಪಂಚಾಯತ್ ಗಂಗೊಳ್ಳಿ ಗ್ರಾ.ಪಂ.ಗೆ ದೂರು ಕಳೆದ ಹಲವು ವರ್ಷಗಳಿಂದ ಜನರು ಗಂಗೊಳ್ಳಿ ಬೀಚ್‌ನಲ್ಲಿ ತ್ಯಾಜ್ಯ ಎಸೆಯುತ್ತಿದ್ದು ಅನೇಕ ಬಾರಿ ಈ ಬಗ್ಗೆ ಸ್ಥಳೀಯ ಗ್ರಾಪಂ. ಗೆ ದೂರು ನೀಡಲಾಗಿದೆ. ಆದರೆ ತ್ಯಾಜ್ಯ ವಿಸರ್ಜನೆ ಕಡಿಮೆಯಾಗಿಲ್ಲ. ಪ್ರತಿನಿತ್ಯ ತ್ಯಾಜ್ಯ ವಿಸರ್ಜನೆ ವ್ಯಾಪಕವಾಗುತ್ತಿದೆ. ಪರಿಸರದಲ್ಲಿ ಜೀವನ ನಡೆಸುವುದು ಕಷ್ಟವಾಗುತ್ತಿದೆ. ಎಲ್ಲರೂ ತಂದು ಬೀಚ್ ವಠಾರದಲ್ಲಿ ತ್ಯಾಜ್ಯ, ಕಟ್ಟಡದ ನಿರುಪಯುಕ್ತ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಸ್ಥಳೀಯಾಡಳಿತ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು.
-ಜಾನ್ಸನ್, ಸ್ಥಳೀಯ ನಿವಾಸಿ