Advertisement

Gangolli: ಅಂಚೆ ಕಚೇರಿಗೆ ನುಗ್ಗಿ ಕಳ್ಳತನಕ್ಕೆ ಯತ್ನ

08:54 PM Aug 19, 2024 | Team Udayavani |

ಗಂಗೊಳ್ಳಿ: ಮರವಂತೆಯ ಅಂಚೆ ಕಚೇರಿಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ ಘಟನೆ ಸೋಮವಾರ ಬೆಳಕಿಗೆ ಬಂದಿದೆ.

Advertisement

ಆ. 17ರ ಅಪರಾಹ್ನ 3.30ರಿಂದ ಆ. 19ರ ಬೆಳಗ್ಗೆ 8.45ರ ನಡುವೆ ಎದುರಿನ ಬಾಗಿಲಿನ ಬೀಗ ಮುರಿದು ಒಳಗೆ ಪ್ರವೇಶಿಸಿದ ಕಳ್ಳರು ಕಪಾಟುಗಳನ್ನು ಜಾಲಾಡಿದ್ದಾರೆ. ಇದು ನಾವುಂದ ಅಂಚೆ ಕಚೇರಿಯ ಉಪ ಶಾಖೆ ಆಗಿರುವುದರಿಂದ ಇಲ್ಲಿ ಹಣ ಇಡುವ ವ್ಯವಸ್ಥೆಯಿಲ್ಲ. ಹಾಗಾಗಿ ಕಳ್ಳರು ಬರಿಗೈಯಲ್ಲಿ ವಾಪಸಾಗಿದ್ದಾರೆ.

ಶಾಖಾ ಅಂಚೆ ಪಾಲಕಿ ಶಿಲ್ಪಕಲಾ ಹಕ್ಲಾಡಿ ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next