Advertisement

ಗಂಗಾವತಿ: ಮೀಸಲು ಅರಣ್ಯದಲ್ಲಿ ಅವ್ಯಾಹತ ಮರಳು ದಂಧೆ – ಹದಗೆಟ್ಟ ರಸ್ತೆ

03:20 PM Sep 13, 2024 | Team Udayavani |

ಉದಯವಾಣಿ ಸಮಾಚಾರ
ಗಂಗಾವತಿ: ಸಮೀಪದ ಸಿದ್ದಿಕೇರಿ, ಕರಿಕಲ್ಲಪ್ಪ ಕ್ಯಾಂಪ್‌ಗೆ ಹೊಂದಿಕೊಂಡಿರುವ ಮೀಸಲು ಅರಣ್ಯ ಪ್ರದೇಶದಲ್ಲಿ ಕಳೆದ ಹಲವು
ವರ್ಷಗಳಿಂದ ಅಕ್ರಮವಾಗಿ ಫಿಲ್ಟರ್‌ ಮರಳು ಮಾಫಿಯಾ ದಂಧೆ ವಹಿವಾಟು ಅವ್ಯಾಹತವಾಗಿ ನಡೆಯುತ್ತಿದೆ. ಇದರಿಂದ ತುಂಗಭದ್ರಾ ಎಡದಂಡೆ ಕಾಲುವೆ ರಸ್ತೆ ಮೇಲೆ ಹಗಲು-ರಾತ್ರಿ ಟಿಪ್ಪರ್‌ಗಳ ಸಂಚಾರದಿಂದ ಕಾಲುವೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಕೆಲವೆಡೆ ಬ್ರಿàಜ್‌ಗಳು ಬಿರುಕು ಬಿಟ್ಟಿದ್ದು ಎಡದಂಡೆ ಕಾಲುವೆ ಅಪಾಯದಲ್ಲಿದೆ. ಆದರೂ ಜಲಸಂಪನ್ಮೂಲ ಇಲಾಖೆ, ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತದ ನಿರ್ಲಕ್ಷ್ಯ ವಹಿಸಿವೆ ಎಂದು ರೈತರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ತುಂಗಭದ್ರಾ ಎಡದಂಡೆ ಕಾಲುವೆ ಪಾಪಯ್ಯ ಟನೆಲ್‌ನಿಂದ ಬಸಾಪಟ್ಟಣ, ದಾಸನಾಳ ರಸ್ತೆ ಕಡೆ ಹೋಗುವ ಕಾಲುವೆ ರಸ್ತೆಯ ಮೇಲೆ ಕಳೆದ ಹಲವು ವರ್ಷಗಳಿಂದ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಬೇರೆಡೆಯಿಂದ ಕೆಂಪು ಮಣ್ಣು ತಂದು ಫಿಲ್ಟರ್‌ ಮರಳು ತಯಾರಿಸಿ ಅದನ್ನು ಟಿಪ್ಪರ್‌ಗಳ ಮೂಲಕ ಧಾರವಾಡ, ಬೆಂಗಳೂರು ಸೇರಿದಂತೆ ಇತರೆಡೆ ರವಾನೆ ಮಾಡಲಾಗುತ್ತಿದೆ. ಭಾರಿ ಸಂಚಾರದಿಂದ ಕಾಲುವೆ ರಸ್ತೆ ಹಾಗೂ ಡಿಸ್ಟೂಬ್ಯೂಟರಿ ಮೋರಿಗಳು, ಸೇತುವೆಗಳು ಬಿರುಕು ಬಿಟ್ಟಿವೆ.
ಮತ್ತೂಂದೆಡೆ ಕಾಲುವೆ ಒಡೆಯುವ ಆತಂಕ ಎದುರಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯ: ಮೀಸಲು ಅರಣ್ಯ ಪ್ರದೇಶದಲ್ಲಿ ಯಾವುದೇ ಚಟುವಟಿಕೆ ನಡೆಸಲು ಅವಕಾಶವಿಲ್ಲದಿದ್ದರೂ ಫಿಲ್ಟರ್‌ ಮರಳು ತಯಾರಿಸುವ ಘಟಕಗಳು ಸಿದ್ದಿಕೇರಿ, ವಾಣಿ ಭದ್ರೇಶ್ವರ ಬೆಟ್ಟದ ಸುತ್ತಲು ಇವೆ. ಇದಕ್ಕೆ ಕಾರಣ ವಲಯ ಅರಣ್ಯಾಧಿಕಾರಿಗಳು ನಿರ್ಲಕ್ಷ್ಯ ಎನ್ನುತ್ತಾರೆ ಜನರು.

ಅಕ್ರಮ ಮರಳು ದಂಧೆ ತಡೆಗೆ ಗ್ರಾಪಂ, ಪಿಡಿಒ, ಅರಣ್ಯ ಇಲಾಖೆ, ಪೊಲೀಸ್‌ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸೇರಿದಂತೆ ಹಲವು ಇಲಾಖೆ ಅಧಿಕಾರಿಗಳು ದೂರು ನೀಡಿದಾಗ ಮಾತ್ರ ಸ್ಥಳ ಪರಿಶೀಲನೆ ನಡೆಸಿ ನೆಪ ಮಾತ್ರದ ಕ್ರಮ ಕೈಗೊಳ್ಳುತ್ತಾರೆ ಎನ್ನುವುದು ಪರಿಸರ ಪ್ರೇಮಿಗಳ ಆರೋಪವಾಗಿದೆ.

ತುಂಗಭದ್ರಾ ಎಡದಂಡೆ ಕಾಲುವೆ ಪಾಪಯ್ಯ ಟನಲ್‌ ಕಾಲುವೆ ರಸ್ತೆ, ಬಸಾಪಟ್ಟಣ, ಸಿದ್ದಿಕೇರಿ ರಸ್ತೆಯಲ್ಲಿ ಹಗಲು ರಾತ್ರಿ ಲಾರಿಗಳ ಸಂಚಾರದಿಂದ ರಸ್ತೆಗಳು ಹಾಳಾಗಿವೆ. ಎಡದಂಡೆ ಕಾಲುವೆ ಒಡೆಯುವ ಅಪಾಯದಲ್ಲಿದೆ. ಅರಣ್ಯ, ಜಲಸಂಪನ್ಮೂಲ,
ಪೊಲೀಸ್‌ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಯವರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕ್ರಮ ಕೈಗೊಳ್ಳದಿದ್ದರೆ ಈ ಭಾಗದ ರೈತರು ಗ್ರಾಮಸ್ಥರು ಸೇರಿ ಭಾರಿ ಪ್ರತಿಭಟನೆ ನಡೆಸಲಾಗುತ್ತದೆ.
*ಬಿ.ಕೃಷ್ಣಪ್ಪ ನಾಯಕ, ಎಸ್‌.ರವಿ, ನಾನಿ ಪ್ರಸಾದ, ಗಿರೀಶ ಗಾಯಕವಾಡ,
ಶರಭೋಜಿರಾವ್‌, ವಿಠಲಾಪೂರ ಯಮನಪ್ಪ, ಸಣ್ಣಕ್ಕಿ ನೀಲಪ್ಪ, ಶರಣೇಗೌಡ, ರಾಮಕೃಷ್ಣ ರೈತರು

Advertisement

■ ಕೆ. ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next