Advertisement
ತಾಲೂಕಿನ ವಿರೂಪಾಪೂರ ಗಡ್ಡಿ ನಿವಾಸಿ ನಾಗರಾಜ ಇವರ ಪುತ್ರಿ ಧನುಬಾಯಿ(7) ಶಾಲೆಗೆ ಕಾಲುವೆಯ ಸೇತುವೆ ದಾಟಿ ಹೋಗುವ ಸಂದರ್ಭದಲ್ಲಿ ಕಾಲು ಜಾರಿ ಬಿದ್ದ ಪರಿಣಾಮವಾಗಿ ಎಡಭಾಗದ ಕಣ್ಣಿಗೆ ಕಟ್ಟಿಗೆ ತಾಕಿ ಕಣ್ಣುಗುಡ್ಡೆ ಹೊರಗೆ ಬಂದಿತ್ತು. ಗಾಬರಿಗೊಂಡ ನಾಗರಾಜ ದಂಪತಿಗಳು ಕೂಡಲೇ ನಗರದ ನೇತ್ರಜ್ಯೋತಿ ಕಣ್ಣಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪಾಲಕರ ಪರವಾನಿಗೆಯೊಂದಿಗೆ ಬಾಲಕಿಯ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿ ಒಳಗಿದ್ದ ಕಟ್ಟಿಗೆ ತುಂಡನ್ನು ಹೊರಗೆ ತೆಗೆದು ಪುನಃ ಕಣ್ಣು ಗುಡ್ಡೆಯನ್ನು ಯಥಾಸ್ಥಿತಿಲ್ಲಿಸಿರಿ ಹೊಲಿಗೆ ಹಾಕುವ ಮೂಲಕ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಮುಂದೆ ಎರಡು ಕಣ್ಣು ಕಳೆದುಕೊಂಡು ಅಂಧತ್ವಕ್ಕೊಳಗಾಗುತ್ತಿರುವುದನ್ನು ತಡೆದಿದ್ದಾರೆ.
ಮಕ್ಕಳ ಪ್ರತಿ ಚಲನವಲನವನ್ನು ಪಾಲಕರು ಎಚ್ಚರಿಕೆಯಿಂದ ಗಮನಿಸಬೇಕು. ಧನುಬಾಯಿ ಎಡಗಣ್ಣಿಗೆ ಕಟ್ಟಿಗೆ ಬಡಿದ ಪರಿಣಾಮ ಕಣ್ಣುಗುಡ್ಡೆ ಹೊರಗೆ ಬಂದಿತ್ತು. ಪಾಲಕರು ಕೂಡಲೇ ಆಗಮಿಸಿದ್ದರಿಂದ ಸೂಕ್ತ ಶಸ್ತ್ರಚಿಕಿತ್ಸೆ ಮೂಲಕ ಕಟ್ಟಿಗೆ ಚೂರನ್ನು ಹೊರಗೆ ತೆಗೆದು ಮುಂದೆ ಎರಡು ಕಣ್ಣಿನ ದೃಷ್ಠಿದೋಷವಾಗುವುದನ್ನು ತಡೆಯಲಾಗಿದೆ. ಸಣ್ಣ ಮಕ್ಕಳಲ್ಲಿ ಇಂತಹ ಅನಾಹುತಗಳಾಗುವುದು ಸಾಮಾನ್ಯವಾಗಿದ್ದು ಕೂಡಲೇ ತಜ್ಞ ನೇತ್ರ ವೈದ್ಯರನ್ನು ಸಂಪರ್ಕಿಸಬೇಕೆಂದು ನೇತ್ರ ವೈದ್ಯ ಡಾ.ಮಹಾಂತೇಶ ಪಟ್ಟಣಶೆಟ್ಟಿ ಉದಯವಾಣಿಗೆ ಮಾಹಿತಿ ನೀಡಿದ್ದಾರೆ.