Advertisement

ಗಂಗಾವತಿ: “ಬ್ಯಾಂಕ್‌ನಿಂದ ಎಲ್‌ಐಸಿ ಪಾಲಿಸಿ ಮಾರಾಟ ಗ್ರಾಹಕರಿಗೆ ಮಾರಕ’

06:03 PM Oct 10, 2024 | Team Udayavani |

ಉದಯವಾಣಿ ಸಮಾಚಾರ
ಗಂಗಾವತಿ: ಬ್ಯಾಂಕ್‌, ಖಾಸಗಿ ಹಣಕಾಸು (ಮೈಕ್ರೋ ಫೈನಾನ್ಸ್‌) ಸಂಸ್ಥೆಗಳ ಮೂಲಕ ಎಲ್‌ ಐಸಿ ಪಾಲಿಸಿಗಳ ಮಾರಾಟವು ಗ್ರಾಹಕರಿಗೆ ಮಾರಕವಾಗಿದೆ. ಇದರಿಂದ ಕೆಲ ಗ್ರಾಹಕರು ಸಾಲದ ಆಸೆಗೆ ಬಲಿಯಾಗಿ ಪಾಲಿಸಿ ಹಣ ಕಳೆದುಕೊಳ್ಳುತ್ತಿದ್ದಾರೆ ಎಂದು ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳ ಸಂಘದರಾಷ್ಟ್ರೀಯ ಕಾಯಾಧ್ಯಕ್ಷ ಎಲ್ . ಮಂಜುನಾಥ ಕಳವಳ ವ್ಯಕ್ತಪಡಿಸಿದರು.

Advertisement

ನಗರದ ಕನ್ನಡ ಜಾಗೃತಿ ಭವನದ ಆವರಣದಲ್ಲಿ ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳ ಸಂಘದ(ಲಿಖೈ) 5ನೇ ಮಹಾ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಒಂದೇ ವರ್ಷದಲ್ಲಿ ಪಾಲಿಸಿಗಳು ಶೇ.40.4ರಷ್ಟು ಗ್ರಾಹಕರ ಪಾಲಿಸಿಗಳು ರದ್ದಾಗಿವೆ. ಎಲ್‌ಐಸಿ ಪ್ರತಿನಿಧಿ  ಮೂಲಕ ಮಾಡಿದ ಪಾಲಿಸಿಗಳ ರದ್ದಾಗುವಿಕೆ ಪ್ರಮಾಣ ಶೇ.10 ರಷ್ಟಿದೆ ಎಂದರು.

ಪ್ರಸ್ತುತ ಎಲ್‌ಐಸಿ 54 ಲಕ್ಷ ಕೋಟಿಗಳ ಆಸ್ತಿ ಮತ್ತು ವ್ಯವಹಾರ ನಡೆಸುತ್ತಿದೆ. ಕೇಂದ್ರ ಸರಕಾರ ಹಾಗೂ ಎಲ್‌ಐಸಿ ಆಡಳಿತ ಮಂಡಳಿ ಪ್ರತಿನಿಧಿಗಳ ಕಮೀಷನ್‌ ಹಾಗೂ ಗ್ರಾಹಕರ ಬೋನಸ್‌ ಹೆಚ್ಚು ಮಾಡುತ್ತಿಲ್ಲ. ದೇಶದ ಖಾಸಗಿ ವಿಮಾ ಕಂಪನಿಗಳ ಒತ್ತಡಕ್ಕೆ ಮಣಿದು ವಿಮಾ ನಿಯಂತ್ರಣ ಮಂಡಳಿ ರಚನೆ ಮಾಡಿ ಪದೇ ಪದೇ ಎಲ್‌ಐಸಿ ಮೇಲೆ ಗದಾ ಪ್ರಹಾರ ಮಾಡುವ
ಮೂಲಕ ಎಲ್‌ಐಸಿ ಪ್ರತಿನಿಧಿಗಳು ಮತ್ತು ಗ್ರಾಹಕರನ್ನು ಶೋಷಿಸಲಾಗುತ್ತಿದೆ ಎಂದರು.

ಡಿಜಿಟಲೀಕರಣ ಹಾಗೂ ಇತರೆ ಕೆಲ ನೆಪದಲ್ಲಿ 50 ಸಾವಿರ ಮತ್ತು ಒಂದು ಲಕ್ಷ ರೂ.ಗಳ ಪಾಲಿಸಿ ತೆಗೆದು ಎರಡು ಲಕ್ಷ ಪಾಲಿಸಿಗಳನ್ನು ಉಳಿಸಲಾಗಿದೆ. ಕಡ್ಡಾಯವಾಗಿ ಮೇಲ್‌,  ಆಧಾರ್‌, ಬ್ಯಾಂಕ್‌ ದಾಖಲಾತಿ ಮತ್ತು ಪಾನ್‌ ಕಾರ್ಡ್‌ ನಿಯಮ ರೂಪಿಸಿ ಜನಸಾಮಾನ್ಯರು ಮತ್ತು ಅನಕ್ಷರಸ್ಥರಿಗೆ ವಿಮಾ ಸೌಕರ್ಯ ಇಲ್ಲದಂತೆ ಮಾಡುವ ಹುನ್ನಾರ ನಡೆಸಿ ಖಾಸಗಿ ವಿಮಾ ಕಂಪನಿಗಳ ತಾಣಕ್ಕೆ ಕುಣಿದು ದೇಶದ ಜನರ ಹಣ ಕಾಪಾಡುವ ಎಲ್‌ಐಸಿಯನ್ನು ಶಕ್ತಿ ಹೀನ ಮಾಡುವ ಕೇಂದ್ರ ಸರಕಾರದ ವಿರುದ್ಧ ಲಿಖೈ ಸಂಘಟನೆ ನಿರಂತರವಾಗಿ ಹೋರಾಟ ನಡೆಸುತ್ತಿದೆ ಎಂದರು.

ವಿಮಾ ಬಿಲ್‌ ಪಾರ್ಲಿಮೆಂಟಿನಲ್ಲಿ ಮಂಡನೆಗೆ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿದಂತೆ ಈಗ ಎಲ್‌ಐಸಿ ಉಳಿಸಲು ಹೋರಾಟ ನಡೆಸುವ ಅಗತ್ಯವಿದೆ. ಕೇರಳ ಮಾದರಿಯಲ್ಲಿ ಎಲ್‌ಐಸಿ ಪ್ರತಿನಿಧಿ ಗಳಿಗೆ ಮಾಸಾಶನ ಕೊಡುವ ಕುರಿತು ರಾಜ್ಯ ಸರಕಾರ ಸ್ಪಂದಿಸಿ, ಶೀಘ್ರ ಕಾಯ್ದೆ ಜಾರಿಯಾಗುವ ಸಾಧ್ಯತೆ ಇದೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾರ್ಮಿಕ ಸಚಿವ ಸಂತೋಷ ಲಾಡ್‌ ಅಂತಿಮ ಸಭೆ ನಡೆಸಲಿದ್ದಾರೆ ಎಂದರು.

Advertisement

ಕಾರ್ಯಕ್ರಮದಲ್ಲಿ ಲಿಖೈ ಸಂಘಟನೆ ರಾಷ್ಟ್ರೀಯ ಕಾರ್ಯಾಧ್ಯಕ್ಷ ಎಲ್‌.ಮಂಜುನಾಥ, ವಿಭಾಗೀಯ ಅಧ್ಯಕ್ಷ ಶ್ರೀನಿವಾಸ, ವ್ಯವಸ್ಥಾಪಕ ಕಲೀಲ್‌ ಆಹಮದ್‌, ವಿಶ್ವನಾಥ ಹೂಗಾರ, ಫಣಿರಾಜ್‌, ರಾಮಣ್ಣ ಕುರಿ, ಪದಾಧಿಕಾರಿಗಳಾದ ಕುಬೇರಪ್ಪ, ಬಷೀರ್‌, ಭಾರತಿ, ಸರಸ್ವತಿ, ವಿಜಯಲಕ್ಷ್ಮೀ, ಬಸವರಾಜ ಸಜ್ಜನ್‌, ಕೆ.ನಿಂಗಜ್ಜ, ಎಂ.ನಿರುಪಾದಿ ಬೆಣಕಲ್‌, ತಬರೀಶ, ಕಾಜವಲಿ ಸೇರಿದಂತೆ ಎಲ್ಲ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ವಿಮಾ ನೌಕರರು ಸೇರಿದಂತೆ ಅನೇಕರು ಹಾಜರಿದ್ದರು.

ನೂತನ ಪದಾಧಿಕಾರಿಗಳ ಆಯ್ಕೆ: ಲಿಖೈ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಸ್ಥಳೀಯ ಕಾರ್ಯಕಾರಿ ಮಂಡಳಿ ಶಿಫಾರಸ್ಸಿನ ಮೇರೆಗೆ ರಾಯಚೂರು ವಿಭಾಗೀಯ ಮಂಡಳಿ ಘೋಷಿಸಿದೆ. ಗೌರವಾಧ್ಯಕ್ಷರು: ಷಡಕ್ಷರಿ ಸುಂಕದ, ಅಧ್ಯಕ್ಷರಾಗಿ ಎ.ಎಂ.ಮಂಜುನಾಥ ಸ್ವಾಮಿ, ಕಾರ್ಯದರ್ಶಿಯಾಗಿ ಹುಸೇನ್‌ ಭಾಷಾ ಜೆ, ಖಜಾಂಚಿಯಾಗಿ ಪಂಪಣ್ಣ ಪಟ್ಟಣ ಶೆಟ್ಟಿ,
ಉಪಾಧ್ಯಕ್ಷರಾಗಿ ವಿರೂಪಾಕ್ಷಗೌಡ ಆರಾಳ, ಶಂಕ್ರಪ್ಪ ಗದ್ದಿಗೇರಿ, ಜೋಶಿ ಕನಕಗಿರಿ, ಮೆಹಬೂಬ್‌ ಹುಸೇನ್‌ ಕನಕಗಿರಿ, ಸಹ
ಕಾರ್ಯದರ್ಶಿಯಾಗಿ ಮೈಲಾರಪ್ಪ ವಾಲಿಕರ್‌, ಹುಸೇನ್‌ ಬಾಷಾ, ವೀರೇಶ್‌ ಕಾಂಬಳೆ, ವೀರನಗೌಡ ಸಿದ್ದಾಪುರ, ಸಂಘಟನಾ
ಕಾರ್ಯದರ್ಶಿಯಾಗಿ ಭಾರತಿ, ವಿಜಯಲಕ್ಷ್ಮಿ  ಕೇಸರಟ್ಟಿ, ಸಲಹಾ ಸಮಿತಿಗೆ ಕುಬೇರಪ್ಪ, ಬಸವರಾಜ್‌ ಸಜ್ಜನ್‌, ನಿರುಪಾದಿ ಬೆಣಕಲ್‌, ಕೆ.ನಿಂಗಜ್ಜ, ದುರ್ಗಾ ಪ್ರಸಾದ್‌, ಶ್ರೀನಿವಾಸ್‌ ರಾವ್‌ ಕುಲಕರ್ಣಿ, ಖಾಜಾವಲಿ, ಎಚ್‌.ಈಶ್ವರ್‌, ಆಂತರಿಕ ಲೆಕ್ಕ ಪರಿಶೋಧಕರಾಗಿ ರಾಘವೇಂದ್ರ ದೇಸಾಯಿ ಅವರನ್ನು ಆಯ್ಕೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next