Advertisement
ಶಹಪೂರ ತಾಲೂಕಿನ ಗೋಗಿ ಹೋಬಳಿಯ ಹೊಸ್ಕೇರಾ ಗ್ರಾಮದಲ್ಲಿ ಡಿಎಪಿ ಜೈಕಿಸಾನ್ ಹೆಸರಿನ ಬ್ಯಾಗುಗಳಲ್ಲಿ ಸಾವಿರಾರು ಟನ್ ಮರಳು(ಉಸುಗು) ಮಿಶ್ರಿತ ರಸಗೊಬ್ಬರ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಗಿ ಪೊಲೀಸ್ ಠಾಣೆಯಲ್ಲಿ ರೈತರು ಪ್ರಕರಣ ದಾಖಲಿಸಿದ್ದು ಪೊಲೀಸ್ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ತನಿಖೆ ನಡೆಸಿದ್ದು ಗೋಗಿ ಗ್ರಾಮದಲ್ಲಿ ನಕಲಿ ರಸಗೊಬ್ಬರ ಮಾರಾಟ ಮಾಡಿದ ಕುರಿತು ಅಲ್ಲಿಯ ಡೀಲರ್ ಯಡ್ರಾಮಿಯ ವ್ಯಾಪಾರಿ ಹೆಸರು ಹೇಳಿದ್ದಾರೆ.
Related Articles
Advertisement
ಗೋಗಿ ಹೋಬಳಿಯ ಹೊಸ್ಕೇರಾ ಗ್ರಾಮದಲ್ಲಿ ನಕಲಿ ರಸಗೊಬ್ಬರ ಮಾರಾಟದ ಕುರಿತು ರೈತರ ದೂರಿನ ಹಿನ್ನೆಲೆಯಲ್ಲಿ ಗೋಗಿ ಠಾಣೆಯ ಪೊಲೀಸರಿಗೆ ಕೃಷಿ ಇಲಾಖೆಯಿಂದ ಕೇಸ್ ದಾಖಲು ಮಾಡಲಾಗಿದೆ. ವಿವಿಧ ಸ್ಥಳಗಳಲ್ಲಿ 130 ಬ್ಯಾಗ್ ನಕಲಿ ರಸಗೊಬ್ಬರ ಸೀಜ್ ಮಾಡಲಾಗಿದೆ. ನಕಲಿ ಗೊಬ್ಬರ ಮಾರಾಟ ದಂಧೆ ಯಾದಗಿರಿ, ಕೊಪ್ಪಳ, ಬಿಜಾಪೂರ, ಬಾಗಲಕೋಟೆ, ಗಂಗಾವತಿ ಪ್ರದೇಶದಲ್ಲಿ ನಕಲಿ ಗೊಬ್ಬರ ಮಾರಾಟ ಮಾಡುವ ಕುರಿತು ಮಾಹಿತಿ ಬಂದಿದ್ದು ಪೊಲೀಸರ ವಿಚಾರಣೆ ಬಳಿಕ ಹೊರ ಬರಬೇಕಿದೆ ಎಂದು ಶಹಾಪುರ ಸಹಾಯಕ ಕೃಷಿ ನಿರ್ದೇಶಕ ಸುನೀಲಕುಮಾರ ಉದಯವಾಣಿ ಗೆ ತಿಳಿಸಿದ್ದಾರೆ.