Advertisement

ಸಿಂದಗಿ, ಹಾನಗಲ್ ನಲ್ಲಿ ಬಿಜೆಪಿಗೆ ಗೆಲುವು: ಸಚಿವ ಬಿ. ಶ್ರೀರಾಮುಲು

02:37 PM Oct 21, 2021 | Team Udayavani |

ಗಂಗಾವತಿ :ಸಿಂದಗಿ ಮತ್ತು ಹಾನಗಲ್ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಲಿದ್ದಾರೆ ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು ಹೇಳಿದರು .

Advertisement

ಅವರು ತಾಲ್ಲೂಕಿನ ಪಂಪಾ ಸರೋವರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು .

ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ವಿಶ್ವದ ಶ್ರೇಷ್ಠ ಪ್ರಧಾನಿ ಎನಿಸಿರುವ ನರೇಂದ್ರ ಮೋದಿ   ಮತ್ತು ಬಿಜೆಪಿ ಪಕ್ಷ ಸಂಘ ಪರಿವಾರವನ್ನು ಮನಸೋ ಇಚ್ಛೆ ಬೈಯುತ್ತಿರುವುದು ಖಂಡನೀಯವಾಗಿದೆ. ದೇಶವನ್ನು 6 ದಶಕಗಳ ಕಾಲ ಆಳಿದ ಕಾಂಗ್ರೆಸ್ ಪಾರ್ಟಿ ಮತ್ತು ಜೆಡಿಎಸ್ ಪಕ್ಷದ ಮುಖಂಡರು ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣದಲ್ಲಿ ಮುಳುಗಿ ಬಿಜೆಪಿ ಪಕ್ಷವನ್ನು ಟೀಕಿಸುವುದು ಜನರಿಗೆ ಮತ್ತು ದೇಶಕ್ಕೆ ಮಾಡುವ ಮೋಸವಾಗಿದೆ .

ಜೆಡಿಎಸ್ ಕಾಂಗ್ರೆಸ್ ಏನೇ ಅಪಪ್ರಚಾರ ಮಾಡಿದರೂ ಉಪ ಚುನಾವಣೆಯಲ್ಲಿ ಮತದಾರ ಪ್ರಭು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲಿದ್ದಾರೆ. ರಾಜ್ಯದಲ್ಲಿ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ಜನರ ಸಮಸ್ಯೆಗಳನ್ನು ಪರಿಹರಿಸಿದೆ ಅಲ್ಲದೆ ಹರಿಹರ ಎಸಿ ಕೋವಿಡ್ ಸಂದರ್ಭದಲ್ಲೂ ಕಲ್ಯಾಣಕಾರಕ ಕಾರ್ಯಕ್ರಮಗಳನ್ನು ಮಾಡಿದ್ದಾರೆ ಆದ್ದರಿಂದ ಜನರ ನಿರೀಕ್ಷೆ ಬಿಜೆಪಿ ಸರ್ಕಾರಕ್ಕೆ ಇದೆ ಎಂದರು .

ಪುಣ್ಯ ಕ್ಷೇತ್ರಗಳ ಅಭಿವೃದ್ಧಿ :ಅತ್ಯಂತ ಶಕ್ತಿ ಕೇಂದ್ರವಾಗಿರುವ ಪಂಪಾಸರೋವರ ಆದಿಶಕ್ತಿ  ಮತ್ತು ಅಂಜನಾದ್ರಿ ಕ್ಷೇತ್ರಗಳು ಸರ್ವಾಂಗೀಣ ಅಭಿವೃದ್ಧಿ ಮಾಡಲಾಗುತ್ತದೆ. ಇಲ್ಲಿ ಹೆಚ್ಚಿನ ಬಸ್ ಗಳನ್ನು ಓಡಿಸುವ ಮೂಲಕ ಪ್ರವಾಸಿಗರಿಗೆ ಅನುಕೂಲ ಮಾಡಲಾಗುತ್ತದೆ .ಪಂಪಾ ಸರೋವರ ಜೀರ್ಣೋದ್ಧಾರಕ್ಕಾಗಿ ಸರಕಾರ ಮತ್ತು ವೈಯಕ್ತಿಕವಾಗಿ ಅನುದಾನವನ್ನು ನೀಡಿ ಕಾಮಗಾರಿಯನ್ನು ಗುಣಮಟ್ಟದಲ್ಲಿ ಮುಗಿಸಿ ಪ್ರವಾಸಿಗರಿಗೆ ನೋಡಲು ಇನ್ನಷ್ಟು ಮೆರುಗು ಬರುವಂತೆ ಮಾಡಲಾಗುತ್ತದೆ ಎಂದರು. .

Advertisement

ಈ ಸಂದರ್ಭದಲ್ಲಿ ಆನೆಗೊಂದಿ ರಾಜವಂಶಸ್ಥ ಮನೆತನದ ಶ್ರೀಕೃಷ್ಣದೇವರಾಯ ಸೇರಿದಂತೆ ಅನೇಕ ಸ್ಥಳೀಯರು ಇದ್ದರು .

ಮನವಿ ಸ್ವೀಕಾರ :ಇದೇ ಸಂದರ್ಭದಲ್ಲಿ ಜಿಲ್ಲಾ ಸವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ನೇತೃತ್ವದ ಕಾರ್ಯಕರ್ತರು ಬೈಕ್ ರ್ಯಾಲಿ ಮುಖಾಂತರ ಅಂಜನಾದ್ರಿ ಭಾಗವನ್ನು ಅಭಿವೃದ್ಧಿ ಮಾಡಬೇಕು ಗ್ರೀನ್ ಝೋನ್ನಿಂದ ಕಮರ್ಷಿಯಲ್ ಝೋನ್ ಮಾಡಬೇಕು .ಆನೆಗೊಂದಿ ಭಾಗದ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಕೈಬಿಟ್ಟು ಕಿಷ್ಕಿಂದ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕು .ಇಲ್ಲಿಯ ಸ್ಮಾರಕಗಳ ಸಂರಕ್ಷಣೆಗಾಗಿ ಪ್ರತ್ಯೇಕ ಉಪ ಪೊಲೀಸ್ ಠಾಣೆಯನ್ನು ಆರಂಭಿಸುವಂತೆ ಸಚಿವ ಬಿ ಶ್ರೀರಾಮುಲು ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು .

Advertisement

Udayavani is now on Telegram. Click here to join our channel and stay updated with the latest news.

Next