ಗಂಗಾವತಿ :ಹಂಪಿ ಅಭಿವೃದ್ಧಿ ಪ್ರಾಧಿಕಾರದ 2021 ರ ನೂತನ ಮಾಸ್ಟರ್ ಪ್ಲಾನ್ ಮಹಾ ಯೋಜನೆಯನ್ನು ಆನೆಗೊಂದಿ ಭಾಗದ ಸ್ಥಳೀಯರ ಸಾಧಕ ಬಾಧಕಗಳ ಚರ್ಚೆಯ ನಂತರ ಪ್ರಕಟಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ನೇತೃತ್ವದ ನಿಯೋಗಕ್ಕೆ ಭರವಸೆ ನೀಡಿದರು .
ಬೆಂಗಳೂರಿನ ಮುಖ್ಯಮಂತ್ರಿಗಳ ನಿವಾಸ ಕೃಷ್ಣಾದಲ್ಲಿ ಶಾಸಕ ಪರಣ್ಣ ಮುನವಳ್ಳಿ ನೇತೃತ್ವದ ನಿಯೋಗದ ಮನವಿಯನ್ನು ಸ್ವೀಕಾರ ಮಾಡಿ ಮಾತನಾಡಿದರು .
ಹಂಪಿಯನ್ನು ವಿಶ್ವ ಪರಂಪರೆ ಪಟ್ಟಿಯಲ್ಲಿ ಉಳಿಸುವ ಸಲುವಾಗಿ ಹಂಪಿ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿದೆ ಆದರೆ ಆನೆಗೊಂದಿ ಭಾಗದಲ್ಲಿ ಪುರಾತತ್ವ ಇಲಾಖೆ ಅಥವಾ ರಾಷ್ಟ್ರೀಯ ಸರ್ವೇಕ್ಷಣಾ ಇಲಾಖೆಯ ಯಾವುದೇ ಸ್ಮಾರಕ ಗಳಿಲ್ಲದಿದ್ದರೂ ಹಂಪಿ ಭಾಗದ ಹದಿನೈದು ಹಳ್ಳಿಗಳನ್ನು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸೇರಿಸಿ ಪ್ರತಿ ಹಳ್ಳಿಯಲ್ಲೂ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದಂತೆ ಪ್ರಾಧಿಕಾರ ನಿಯಮ ರೂಪಿಸಿರುವುದು ಅವೈಜ್ಞಾನಿಕವಾಗಿದೆ ಎಂದು ಸ್ಥಳಿಯರು ಮನವಿಯಲ್ಲಿ ತಿಳಿಸಿದ್ದಾರೆ .
ಪ್ರಸ್ತುತ ಮಾಸ್ಟರ್ ಪ್ಲಾನ್ ಮಹಾ ಯೋಜನೆಯನ್ನು 1ವರ್ಷ ತಡವಾಗಿ ಪ್ರಕಟ ಮಾಡಲಾಗುತ್ತಿದೆ ಪ್ರಕಟಣೆಗೂ ಮುಂಚೆ ಸ್ಥಳೀಯರು ಸಲ್ಲಿಸಿರುವ ಮನವೀಯತೆ ನಿಯಮಗಳಲ್ಲಿ ಮಾರ್ಪಾಡು ಮಾಡಿ ಸರಳೀಕರಣಗೊಳಿಸಿ ಚರ್ಚೆ ನಡೆಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ . ಮಾಸ್ಟರ್ ಪ್ಲಾನ್ ಪ್ರಕಟವಾಗುವ ತನಕ ಪ್ರಸ್ತುತ ಗುಡಿಸಲುಗಳಲ್ಲಿರುವ ಹೋಟೆಲ್ ಗಳನ್ನು ತೆರವು ಮಾಡದಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ .
ಇದನ್ನೂ ಓದಿ:ಪೌಷ್ಟಿಕ ಆಹಾರ ಸೇವಿಸಿ ಆರೋಗ್ಯ ಕಾಪಾಡಿ: ನವೀನಕುಮಾರ
ನಿತ್ಯವೂ ಅಂಜನಾದ್ರಿ ಬೆಟ್ಟಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪ್ರವಾಸಿಗರು ಆಗಮಿಸುತ್ತಿದ್ದು ಅವರ ಮೂಲ ಸೌಕರ್ಯಕ್ಕಾಗಿ ಇನ್ನಷ್ಟು ಸೌಕರ್ಯಗಳನ್ನು ಕಲ್ಪಿಸಲು ಸ್ಥಳೀಯ ಆಡಳಿತದೊಂದಿಗೆ ಚರ್ಚೆ ನಡೆಸಲಾಗುತ್ತದೆ ಎಂದು ಶಾಸಕ ಪರಣ್ಣ ಮುನವಳ್ಳಿ ಅವರಿಗೆ ಮನವರಿಕೆ ಮಾಡಿದರು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಹಾಗೂ ಶಾಸಕ ಪರಣ್ಣ ಮುನವಳ್ಳಿಯವರು ಸ್ಥಳೀಯವಾಗಿ ಪ್ರಾಧಿಕಾರದಿಂದ ಉಂಟಾಗುತ್ತಿರುವ ತೊಂದರೆ ಬಗ್ಗೆ ಮುಖ್ಯಮಂತ್ರಿಗಳಿಗೆ ವಿವರಿಸಿದರು .
ಶಾಸಕ ಪರಣ್ಣ ಮುನವಳ್ಳಿ ನೇತೃತ್ವದ ನಿಯೋಗದಲ್ಲಿ ಮುಖಂಡರಾದ ಸಿದ್ಧರಾಮಸ್ವಾಮಿ ,ಯಾದವ ಚಂದ್ರಶೇಖರ ಆನೆಗುಂದಿ, ಸಂತೋಷ್ ಕೆಲೋಜಿ ,ಸುನಿಲ್ ನಾಯ್ಡು ರಘು ,ಸಣಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದುರುಗಮ್ಮ ,ಉಪಾಧ್ಯಕ್ಷೆ ಶೇರ್ ಖಾನ್ ಸದಸ್ಯ ನಾಗೇಶ ಕೋಡಿ, ಮಾಜಿ ಉಪಾಧ್ಯಕ್ಷ ನರಸಿಂಹಲು ,ಶಾಂತರಾಜು ಮಧುಸೂದನ್ ಕಾಕರ್ಲ ,ಮಂಜುನಾಥ, ರವಿಚಂದ್ರ ,ಜಾಂಟಿ ಶೇಖರ್ ತೆಗೆ ಶಿವಕುಮಾರ್ ನಾಯಕ್ ಶಿವಸಾಗರ ನಾಯ್ಕ್ ಇದ್ದರು