Advertisement
ಗಿಣಿಗೇರಾದಿಂದ ರಾಯಚೂರುವರೆಗೆ ನೂರಾರು ಗ್ರಾಮಗಳು ರಸ್ತೆಯ 2 ಬದಿಯಲ್ಲಿದ್ದ ಗ್ರಾಮಗಳಲ್ಲಿ ಸಿಗ್ನಲ್ ಲೈಟ್ ಹಾಗೂ ಅಪಘಾತ ರಹಿತವಾಗಿ ವಾಹನ ಚಾಲನೆಯ ಆಗುವಂತಹ ಯಾವುದೇ ಸಿಗ್ನಲ್ ಗಳನ್ನು ಅಳವಡಿಸಿಲ್ಲ ಇದರಿಂದಾಗಿ ನಿತ್ಯವೂ ಹಗಲು ರಾತ್ರಿ ಬೈಕ್ ಇತರೆ ವಾಹನಗಳು ಮಧ್ಯೆ ಅಪಘಾತ ಸಂಭವಿಸಿ ಹಲವಾರು ಜನರು ಸಾವನ್ನಪ್ಪಿದ್ದಾರೆ.
Related Articles
Advertisement
ಗಿಣಿಗೇರಾದಿಂದ ಸಿಂಧನೂರುವರೆಗಿನ ರಸ್ತೆಯುದ್ದಕ್ಕೂ ಹೆಚ್ಚು ಅಪಘಾತ ಸಂಭವಿಸುತ್ತವೆ ಇದರಲ್ಲಿ ತುರ್ತು ಚಿಕಿತ್ಸೆಗಾಗಿ ಜಿ ಕೆ ಸಿ ಕಂಪೆನಿ ಯಾವುದೇ ಅಂಬುಲೆನ್ಸ್ ಹಾಗೂ ಇತರ ಚಿಕಿತ್ಸೆ ಕಲ್ಪಿಸುವಲ್ಲಿ ಜಿಕೆಸಿ ಕಂಪೆನಿ ವಿಫಲವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕ್ರಮಕ್ಕೆ ಮುಂದಾಗಲು ಒತ್ತಾಯ:ಗಿಣಿಗೇರಾದಿಂದ ರಾಯಚೂರುವರೆಗೆ ರಸ್ತೆಯ ಕಾಮಗಾರಿ ಮತ್ತು ಟೋಲ್ ಸಂಗ್ರಹಣೆ ಗುತ್ತಿಗೆ ಪಡೆದಿರುವ ಜಿ ಕೆ ಸಿ ಕಂಪೆನಿ ಸವಾರರಿಗೆ ಮತ್ತು ಚಾಲಕರಿಗೆ ರಸ್ತೆಯಲ್ಲಿ ಚಲಿಸುವ ಸವಾರರಿಗೆ ಮತ್ತು ಪ್ರಯಾಣಿಕರಿಗೆ ಚಾಲಕರಿಗೆ ಶೌಚಾಲಯ ಸೇರಿ ಮೂಲ ಭೂತ ಸೌಕರ್ಯ ಕಲ್ಪಿಸುವಲ್ಲಿ ಕಂಪೆನಿ ವಿಫಲವಾಗಿದೆ ಆದ್ದರಿಂದ ಕೊಪ್ಪಳ ರಾಯಚೂರು ಜಿಲ್ಲೆಗಳ ಜಿಲ್ಲಾಡಳಿತಗಳು ಜಿಕೆಸಿ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೆಕು.ರಸ್ತೆಯ ದುರಸ್ತಿ ಮತ್ತು ಟೋಲ್ ವಿಷಯವಾಗಿ ಗ್ರಾಮೀಣ ಜನರು ಸಂಘ ಸಂಸ್ಥೆಯವರು ವಕೀಲರುಗಳು ಟೋಲ್ ಸಿಬ್ಬಂದಿ ಗಳಿಗೆ ಮನವಿ ಸಲ್ಲಿಸಲು ತೆರಳಿದರೆ ಸಿಸಿ ಕ್ಯಾಮೆರಾದಲ್ಲಿ ಚಿತ್ರೀಕರಿಸಿ ಪೊಲೀಸ್ ಠಾಣೆಗೆ ದೂರು ನೀಡುವ ದುಸ್ಸಾಹಸ ಮಾಡುತ್ತಿದ್ದಾರೆಂದು ಜಂಗಮರ ಕಲ್ಗುಡಿಯ ಪ್ರಗತಿಪರ ರೈತ ಮತ್ತು ಕಾಂಗ್ರೆಸ್ ಮುಖಂಡ ವಿ. ಪ್ರಸಾದ್ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದಾರೆ.