Advertisement

ಗ್ರಾಮ ದೇವತೆ ದುರ್ಗಮ್ಮ ಜಾತ್ರಾ ಮಹೋತ್ಸವ ; ದರ್ಶನಕ್ಕೆ ಮುಗಿಬಿದ್ದ ಭಕ್ತ ಸಮೂಹ

02:27 PM Dec 23, 2022 | Team Udayavani |

ಗಂಗಾವತಿ: ಗ್ರಾಮ ದೇವತೆ ದುರ್ಗಮ್ಮ ದೇವಿ ಜಾತ್ರಾ ಮಹೋತ್ಸವ ನಿಮಿತ್ತ ದೇವಿಯ ದರ್ಶನ ಪಡೆಯಲು ನಗರದ ಜನ ಸಮೂಹ ದೇವಾಲಯದಿಂದ ಗಾಂಧಿ ವೃತ್ತದವರೆಗೆ ಕ್ಯೂನಲ್ಲಿ ನಿಂತು ದರ್ಶನ ಪಡೆದರು.

Advertisement

ಡಿಸೆಂಬರ್ 23 ರಿಂದ 24ರ ವರೆಗೆ ಅಕ್ಕ ಅವರಿಗೆ ಗ್ರಾಮ ದೇವತೆ ದುರ್ಗಮ್ಮ ದೇವಿಯ ಜಾತ್ರಾ ಮಹೋತ್ಸವ ಯೋಜನೆಯಾಗಿದ್ದು ಇಂದು ಎಳ್ಳ ಅಮವಾಸೆ ನಿಮಿತ್ತ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಕ್ಯೂನಲ್ಲಿ ನಿಂತು ದರ್ಶನ ಪಡೆದು ಕಾಯಿ,ಹಣ್ಣು, ಕರ್ಪೂರ ಸಮರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ದೇವಾಲಯ ಸಮಿತಿಯ ಸ್ವಯಂಸೇವಕರು ಹಾಗೂ ಪೊಲೀಸರು ಭಕ್ತರನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು.

ದೇವಾಲಯಕ್ಕೆ ಯುವ ಮುಖಂಡ ಪ್ರಚಾರ ಚೆನ್ನಕೇಶವ ಹಾಗೂ ಕುಟುಂಬದವರು ಆಗಮಿಸಿ ದೇವಿಯ ದರ್ಶನ ಪಡೆದರು. ದೇವಾಲಯಕ್ಕೆ ಆಗಮಿಸಿದ ಸಕಲ ಭಕ್ತರು ಭಕ್ತರಿಗೆ ಅನ್ನದಾನ ಸೇವೆಯನ್ನು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸಿಂಗನಾಳ ವಿರುಪಾಕ್ಷಪ್ಪ ಹಾಗೂ ಕುಟುಂಬದವರು ಮಾಡಿದ್ದರು.

ಪ್ರತಿ ದಿನ ರಾತ್ರಿ ಬಾಣ ಭಿರಿಸು ಕಾರ್ಯಕ್ರಮದ ಮೂಲಕ ಶ್ರೀ ದುರ್ಗಾದೇವಿ ಆರಾಧನೆ ಮಾಡಲಾಗುತ್ತಿದೆ. ನಗರದ ನೂರಾರು ಜನರು ದೇವಿ ಹರಕೆ ತೀರಿಸಲು ತಮ್ಮ ಮನೆಗಳಿಂದ ಟಗರುಗಳನ್ನು ಮೆರವಣಿಗೆಯಲ್ಲಿ ತಂದು ಪೂಜೆ ಸಲ್ಲಿಸಿಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

Advertisement

ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷ ಜೋಗದ ನಾರಾಯಣಪ್ಪ ನಾಯಕ, ಜೋಗದ ಹನುಮಂತಪ್ಪ ನಾಯಕ, ಅಮರ ಜ್ಯೋತಿ ನರಸಪ್ಪ, ಬಿ ನಾಗರಾಜ ಸೇರಿ ಹಲವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next