Advertisement

ಜನಸಾಮಾನ್ಯರಿಗೆ ರಾಜ್ಯ ಇಬ್ಭಾಗ ಬೇಕಿಲ್ಲ : ಪ್ರೊ|ಭಾವಿಕಟಿ

05:11 PM Aug 01, 2018 | Team Udayavani |

ಗಂಗಾವತಿ (ಗಂಡುಗಲಿ ಕುಮಾರರಾಮ): ರಾಜಕಾರಣಿಗಳಿಗೆ ಬೇಕಾಗಿರುವ ರಾಜ್ಯದ ಇಬ್ಭಾಗ ಸಾಮಾನ್ಯರಿಗೆ ಬೇಕಿಲ್ಲ ಎಂದು ಪ್ರೊ| ಲಲಿತಾ ಭಾವಿಕಟ್ಟಿ ಹೇಳಿದರು. ಅವರು ಸಾಹಿತ್ಯ ಸಮ್ಮೇಳನದ ಪ್ರಥಮ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿ ಮಾತನಾಡಿದರು. ಅರಳಿ ನಾಗಭೂಷಣ ತಮ್ಮ ಕವಿತೆಯ ಮೂಲಕ ಪ್ರತಿಯೊಬ್ಬ ಭೂಮಿ, ಗಾಳಿ, ನೀರು ಸೇರಿ ಪ್ರಕೃತಿಯಂತೆ ಕ್ಷಮೆ ಗುಣವನ್ನು ಮನುಷ್ಯ ಅಳವಡಿಸಿಕೊಳ್ಳಲು ಮನವಿ ಮಾಡಿದರು.

Advertisement

ಹೆಬ್ಟಾಳ ನಾಗಭೂಷಣ ಶಿವಾಚಾರ್ಯರು ಚಂದ್ರ-ಸೂರ್ಯಗ್ರಹಣದ ಸಂದರ್ಭದಲ್ಲಿ ಜ್ಯೋತಿಷಿಗಳು ಸೇರಿ ಕೆಲವರು ಜನರ ಅಮಾಯಕತೆಯನ್ನು ದುರುಪಯೋಗ ಮಾಡಿಕೊಂಡು ಮೌಡ್ಯ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವ ಭರವಸೆ ನೀಡಿ ಈಗ ವಿಳಂಬ ಮಾಡುತ್ತಿರುವ ಸಿಎಂ ಕುಮಾರಸ್ವಾಮಿ ಅವರನ್ನು ಎಚ್ಚರಿಸುವ ಕವಿತೆ ಓದುವ ಮೂಲಕ ಪ್ರೇಕ್ಷಕರ ಗಮನ ಸೆಳೆದರು.

ಪ್ರಗತಿಪರ ಚಿಂತಕ ರಮೇಶ ಗಬ್ಬೂರು ತಮ್ಮ ಕವಿತೆಯಲ್ಲಿ ಅಗ್ರಹಾರದಲ್ಲಿ ಅಕ್ಷರ ಕಲಿಸುತ್ತಾರೆ. ಬಹುಸಂಖ್ಯಾತರು ಅನ್ನಕ್ಕಾಗಿ ಹೋರಾಟ ನಡೆಸುತ್ತಾರೆ ಎಂಬ ಕವನ ವಾಚನ ಮಾಡಿ ಶತಮಾನಗಳಿಂದ ದೇಶದಲ್ಲಿ ನಡೆಯುತ್ತಿರುವ ಜಾತಿ ಬೇಧಭಾವ ಮತ್ತು ಮೇಲು ಕೀಳು ಎಣಿಸುತ್ತ ಶೋಷಿತ ಕೆಳ ವರ್ಗದವರಿಗೆ ಶಿಕ್ಷಣದಿಂದ ಹೇಗೆ ವಂಚಿತರನ್ನಾಗಿ ಮಾಡಿದ್ದಾರೆ ಎಂಬ ಮಾಹಿತಿ ನೀಡಿ ಶೋಷಿತರ ಧ್ವನಿಯಾದರು.

ಶಿಕ್ಷಕ ವಿಜಯ ವೈದ್ಯ ಬುದ್ಧ ಸ್ಟೈಲ್‌ ಕವಿತೆಯಲ್ಲಿ ಯುದ್ಧ ಸನ್ನಿವೇಶ ಹಾಗೂ ಅಣು ಬಾಂಬುಗಳ ಕುರಿತು ಮಾನವ ರಕ್ತಪಾತದ ಬಗ್ಗೆ ಹೇಳಿದರು. ಕವಯಿತ್ರಿ ಸಲಿಮಾಮಂಗಳೂರು ಗಂಗಾವತಿಯಲ್ಲಿ ಕದಡಿರುವ ಕೋಮು ಸೌಹಾರ್ದ ಮತ್ತು ಪರಿಹಾರ ಸೂಚಿಸುವವರು ನಾವೇ ಎಂಬ ಕುರಿತು ಕವಿತೆ ರಚನೆ ಮಾಡಿ ಗಂಗಾವತಿ ಜನರ ಬಗ್ಗೆ ಕಳಕಳಿ ವ್ಯಕ್ತಪಡಿದರು.

ಸುಮಾರು 45ಕ್ಕೂ ಹೆಚ್ಚು ಕವಿ, ಕವಯಿತ್ರಿಗಳು ಪ್ರೇಮ-ಪ್ರಣಯ, ಪ್ರತೇಕ ರಾಜ್ಯ, ತುಂಗಭದ್ರಾ ಸೇರಿ ಹಲವು ವಿಷಯಗಳ ಕುರಿತು ಕವಿತೆಗಳ ವಾಚನ ಮಾಡಿದರು. ಸಾಹಿತಿ ನಿಜಲಿಂಗಪ್ಪ ಮೆಣಸಗಿ, ಡಾ|ನಾರಾಯಣ ಕಂದಗಲ್‌, ಮುಖಂಡರಾದ ದೇವಪ್ಪ ಕಾಮದೊಡ್ಡಿ, ಅಮರೇಗೌಡ್ರು, ಜೋಗದ ಹನುಮಂತಪ್ಪ, ದರೋಜಿ ಶ್ರೀರಂಗ, ಜಗದೀಶಪ್ಪ ಸಿಂಗನಾಳ, ಜಗನ್ನಾಥ ಆಲಂಪಲ್ಲಿ, ಜಿ. ಶ್ರೀಧರ ಕವಿಗೋಷ್ಠಿಯಲ್ಲಿದ್ದರು.

Advertisement

ಅಖಂಡ ಕರ್ನಾಟಕವೇ ಕನ್ನಡಿಗರ ಹೆಮ್ಮೆ: ಪ್ರಾಣೇಶ
ಗಂಗಾವತಿ: ಅಖಂಡ ಕರ್ನಾಟಕವೇ ಕನ್ನಡಿಗರ ಹೆಮ್ಮೆಯಾಗಿದೆ. ಪ್ರತ್ಯೇಕ ರಾಜ್ಯ ರಚನೆಯಾಗಬಾರದು ಎಂದು ಹಾಸ್ಯ ಭಾಷಣಕಾರ ಬಿ.ಪ್ರಾಣೇಶ ಹೇಳಿದರು. ಅವರು ಸಾಹಿತ್ಯ ಸಮ್ಮೇಳನದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಕೇಕ್‌ ಕತ್ತರಿಸಿದರೆ ಎಲ್ಲರೂ ತಿನ್ನುತ್ತಾರೆ. ಹಾಗೇ ಇದ್ದರೆ ತಿನ್ನುವುದು ಕಷ್ಟ. ಕರ್ನಾಟಕ ಕೇಕ್‌ ಇದ್ದಂತೆ. ಇದನ್ನು ಕತ್ತರಿಸುವವರು ಜನರಿಂದ ತಿರಸ್ಕಾರಗೊಳ್ಳಲಿದ್ದಾರೆ. ಅಖಂಡತೆಯಲ್ಲಿ ಎಲ್ಲರ ಸುಖ ಅಡಗಿದೆ. ಪ್ರತ್ಯೇಕತೆಯಲ್ಲಿ ಕೆಲವರ ಹಿತ ಅಡಗಿದೆ. ಸಂಘಟನೆಗಳು ಪ್ರತ್ಯೇಕತೆ ಕೂಗನ್ನು ಕೈಬಿಡಬೇಕು. ಅಭಿವೃದ್ಧಿಗಾಗಿ ಶಾಸನ ಸಭೆಗಳಲ್ಲಿ ಜನಪ್ರತಿನಿಧಿಗಳು ಕೇಳಬೇಕು. ಅದನ್ನು ಬಿಟ್ಟು ಪ್ರತ್ಯೇಕ ರಾಜ್ಯ ಬೇಡ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next