Advertisement
ಉತ್ತರ ಭಾರತದಿಂದ ಪ್ರತಿ ದಿನ 50ಕ್ಕೂ ಹೆಚ್ಚು ಬಸ್‌ಗಳಲ್ಲಿ ಪ್ರವಾಸಿಗರು ಚಾರಧಾಮ್ ಯಾತ್ರೆ ವೇಳೆ ಇಲ್ಲಿಗೆ ಬಂದು ಶ್ರೀ ಆಂಜನೇಯ, ಋಷಿ ಮುಖ ಪರ್ವತದಲ್ಲಿ ವಾಲೀ, ಸುಗ್ರೀವ್, ಪಂಪಾ ಸರೋವರದ ವಿಜಯಲಕ್ಷ್ಮಿ ದೇವರ ದರ್ಶನ ಪಡೆಯುತ್ತಾರೆ. ಆದರೆ ಇಲ್ಲಿ ಕುಡಿವ ನೀರು, ಶೌಚಾಲಯ ಹಾಗೂ ಸ್ನಾನಗೃಹ ಮತ್ತು ಅಡುಗೆ ಕೋಣೆಯಿಲ್ಲದೇ ಪ್ರವಾಸಿಗರು ಪರದಾಡುತ್ತಾರೆ.
ಭಕ್ತರಿಗೆ ಪಂಪಾ ಸರೋವರ ದೇವಾಲಯ ಕಮೀಟಿಯವರು ಯಾವುದೇ ಸೌಕರ್ಯ ಕಲ್ಪಿಸಿಲ್ಲ. ಈ ಹಿಂದೆ ನಿರ್ಮಿಸಿದ್ದ ಶೌಚಾಲಯ ಸಣ್ಣದ್ದಾಗಿದ್ದು ನಿರ್ವಹಣೆ ಇಲ್ಲದೇ ಹಾಳಾಗಿದೆ. ನೀರಿನ ಟ್ಯಾಂಕ್ ನಿರ್ಮಿಸಿದ್ದರೂ ಕುಡಿಯುವ ನೀರಿಲ್ಲ. ಪಂಪಾ ಸರೋವರದ ಹೂಳು ಎತ್ತಿ ಬಯಲು ಪ್ರದೇಶದಲ್ಲಿ ಹಾಕಿರುವುದರಿಂದ ಗಿಡ ಗಂಟಿ ಬೆಳೆದು ಬಯಲು ಬಹಿರ್ದೆಸೆಗೆ ಬಳಕೆಯಾಗುತ್ತಿದೆ. ಮಳೆ ಬಂದರೆ ನಿಲ್ಲಲು ಜಾಗವಿಲ್ಲದೆ ಗಿಡದ ಬುಡದಲ್ಲಿ ಅಥವಾ ಗುಡ್ಡದ ಕಲ್ಲಿನ ಕೆಳಗೆ ನಿಲ್ಲಬೇಕಾಗಿದೆ. ಅಡುಗೆ ಸಿದ್ಧತೆ ಮತ್ತು ನೀರಿನ ವ್ಯವಸ್ಥೆ ಕಲ್ಪಿಸುವಲ್ಲಿ ದೇವಾಲಯ ಕಮೀಟಿ, ತಾಲೂಕು ಆಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ವಿಫಲವಾಗಿವೆ. ಸುತ್ತಲಿನ ಐತಿಹಾಸಿಕ ಸ್ಥಳ ತೋರಿಸಲು ನೂರಾರು ಪ್ರವಾಸಿ ಗೈಡ್‌ಗಳು, ಆಟೋ ಚಾಲಕರು ಇದ್ದಾರೆ. ಆದರೆ ಇವರಿಗೂ ಸೂಕ್ತ ಸವಲತ್ತು ಕಲ್ಪಿಸಿಲ್ಲ. ವಿಜಯನಗರದ ಮೂಲ ರಾಜಧಾನಿ ಆನೆಗೊಂದಿ, ನವ ವೃಂದಾವನಗಡ್ಡಿ, ಚಂಚಲಕೋಟಿ, ವಾಲೀ ಕಿಲ್ಲಾ ಆದಿಶಕ್ತಿ ದೇಗುಲ, ಶ್ರೀಕೃಷ್ಣ ದೇವರಾಯನ ಸಮಾಧಿ, ಕಿಷ್ಕಿಂಧಾ ಅಂಜನಾದ್ರಿ, ಪಂಪಾಪತಿ ಬಂಡೆ ಮೇಲಿನ ಪುರಾತನ ಕಾಲದ ಪಂಪಾಪತಿ ಬೃಹತ್ ಲಿಂಗು, ಹನುಮನಹಳ್ಳಿ ಹತ್ತಿರದ ಋಷಿ ಮುಖ ಪರ್ವತ ಸುಗ್ರೀವನ ಗುಹೆ, ವಾಲೀ ಭಂಡಾರ, ಜಂಗ್ಲಿ ರಂಗಾಪೂರ ಪ್ರಕೃತಿ ಸೌಂದರ್ಯದ ಬೆಟ್ಟಗುಡ್ಡ, ಗುಹಾಂತರ ಚಿತ್ರ, ಹಿರೇಬೆಣಕಲ್ ಮೋರ್ಯರ ಬೆಟ್ಟದ ಶಿಲಾಯುಗದ ಮನೆ, ವಿರೂಪಾಪೂರಗಡ್ಡಿಯ ಸೂರ್ಯನಾರಾಯಣ ದೇವಾಲಯ, ರಾಮನ ಬೀಳು, ಶಿಲಾರೋಹಣದ ಪರ್ವತ ಬಂಡೆಗಳ ಸ್ಥಳ, ಸಾಣಾಪೂರ ವಾಟರ್ ಫಾಲ್ಸ್, ಸಾಣಾಪೂರ ಬಾಲಾಂಜನೇಯನ ಬೆಟ್ಟಕ್ಕೂ ಪ್ರವಾಸೋದ್ಯಮ ಇಲಾಖೆ ನಾಮಫಲಕ ಹಾಕಿಲ್ಲ. ಇದರಿಂದ ಪ್ರವಾಸಿಗರು ಮಾಹಿತಿ ಕೊರತೆಯಿಂದ ಸಮಸ್ಯೆ ಎದುರಿಸುವಂತಾಗಿದೆ.
Related Articles
ಮಂಜುನಾಥ ಕಂದಾರಿ, ಆಟೊ ಚಾಲಕ
Advertisement
ದೇಶದ ನಾಲ್ಕು ಪವಿತ್ರ ಚಾರಧಾಮ್‌ದಲ್ಲಿ ಪಂಪಾ ಸರೋವರ ಕಿಷ್ಕಿಂಧಾ ಅಂಜನಾದ್ರಿ ಕ್ಷೇತ್ರವೂ ಒಂದಾಗಿದೆ. ಇಲ್ಲಿ ಕುಡಿವ ನೀರು, ಶೌಚಾಲಯ ಹಾಗೂ ಅಡುಗೆ ಮಾಡಿಕೊಳ್ಳಲು ನೆರಳಿಲ್ಲ. ಬಯಲು ಬಹಿರ್ದೆಸೆಗೆ ಹೋಗಬೇಕಾಗಿದೆ. ಸರಕಾರ ಕೂಡಲೇ ಮೂಲಸೌಕರ್ಯ ಕಲ್ಪಿಸಬೇಕು.-ರಾಮಲಾಲ್ ಉತ್ತರ ಪ್ರದೇಶದ ಪ್ರವಾಸಿಗ -ಕೆ.ನಿಂಗಜ್ಜ