ಗಂಗಾವತಿ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಈಗಾಗಲೇ ಭತ್ತದ ನಾಟಿ ಕಾರ್ಯವು ಪೂರ್ಣಗೊಂಡಿದ್ದು, ಭತ್ತದ ಬೆಳೆ 45 ರಿಂದ 60 ದಿನದ ಬೆಳವಣಿಗೆ ಹಂತದಲ್ಲಿದೆ. ಈ ಹಂತದಲ್ಲಿ ಭತ್ತಕ್ಕೆ ಸಾಮಾನ್ಯವಾಗಿ ದುಂಡಾಣು ಅಂಗಮಾರಿ ರೋಗ ಮತ್ತು ಕಂದು ಜಿಗಿಹುಳು ರೋಗ ವ್ಯಾಪಕವಾಗಿ ಹರಡುತ್ತಿದ್ದು, ಇದರಿಂದ ಅಚ್ಚುಕಟ್ಟು ಪ್ರದೇಶದ ರೈತರು ತೀವ್ರ ಆತಂಕದಲ್ಲಿದ್ದಾರೆ.
ದುಂಡಾಣು ಅಂಗಮಾರಿ ರೋಗವು ಸಾಮಾನ್ಯವಾಗಿ ಭತ್ತದ ಎಲೆಗಳ ಅಂಚು ಮತ್ತು ತುದಿಗಳಲ್ಲಿ ಕಂಡುಬರುತ್ತದೆ. ಮೊದಲು ರೋಗವು ಹಳದಿ ಬಣ್ಣದ ಮಚ್ಚೆಯಂತೆ ಇರುತ್ತದೆ. ಎಲೆಯ ತುದಿಯಿಂದ ಬುಡದ ಕಡೆಗೆ ಪಸರಿಸುತ್ತದೆ. ಕೊನೆಗೆ ಎಲೆಯು ಸಂಪೂರ್ಣ ವಾಗಿ ಒಣಗಿ ಬೆಳೆಯು ನಾಶ ವಾಗುತ್ತದೆ. ಮೋಡ ಕವಿದ ವಾತಾವರಣ ಇರುವುದರಿಂದ ದುಂಡಾಣು ರೋಗ ತೀವ್ರವಾಗಿ ಹರಡಿ ಅತೀ ವೇಗವಾಗಿ ಗದ್ದೆಯಿಂದ ಗದ್ದೆಗೆ ಹರಡುತ್ತದೆ.
ಕೃಷಿ ವಿಜ್ಞಾನಿಗಳ ಸಲಹೆ ಪಡೆಯದೇ ಅತೀಯಾದ ರಸಗೊಬ್ಬರ ಮತ್ತು ನೀರಿನ ಬಳಕೆಯಿಂದಾಗಿ ದುಂಡಾಣು ರೋಗ ಹರಡುತ್ತದೆ. ಭತ್ತದ ಕಾಂಡ ಅತೀಯಾದ ಸಿಹಿಯಿಂದ ಕೂಡಿರುವುದರಿದ ರೋಗಾಣುಗಳು ತಿನ್ನಲು ಅನುಕೂಲವಾಗಿರುವ ಕಾರಣ ಅಂಗಮಾರಿ ಅಥವಾ ದುಂಡಾಣು ಹರಡುತ್ತದೆ. ಭತ್ತದ ಬೆಳೆಗೆ ವೈಜ್ಞಾನಿಕವಾಗಿ ನೀರು ಮತ್ತು ಗೊಬ್ಬರ ನಿರ್ವಹಣೆ ಮಾಡಬೇಕು. ಇದರಿಂದ ಹಣ ಮತ್ತು ನೀರಿನ ಮಿತ ಬಳಕೆಯಾಗುತ್ತದೆ. ಶ್ರಮವೂ ಕಡಿಮೆಯಾಗುತ್ತದೆ.
ದುಂಡಾಣು ಕಂದು ಜಿಗಿ ರೋಗದ ಲಕ್ಷಣಗಳು: ಪ್ರೌಢ ಮತ್ತು ಮರಿ ಹುಳುಗಳು ಕಾಂಡವನ್ನು ನೀರಿನ ಮಟ್ಟಕ್ಕಿಂತ ಮೇಲ್ಭಾಗದಲ್ಲಿ ಅಧಿ ಕ ಸಂಖ್ಯೆಯಲ್ಲಿ ಆವರಿಸಿ ರಸವನ್ನು ಹೀರುವುದರಿಂದ ಪೈರಿನ ಎಲೆಗಳು ಕಂದು ಬಣ್ಣಕ್ಕೆ ತಿರುಗಿ ಅಲ್ಲಲ್ಲಿ ಸುಟ್ಟಂತೆ ಕಂಡು ಬೆಳೆಯೇ ನಾಶವಾಗುತ್ತದೆ. ಇದರ ಬಾಧೆಯು ತೆನೆ ಬರುವ ಸಮಯದಲ್ಲಿ ತೀವ್ರವಾಗಿ ಕಂಡುಬರುತ್ತವೆ .
ಅತೀಯಾದ ರಸಗೊಬ್ಬರ ಮತ್ತು ನೀರಿನ ಬಳಕೆಯಿಂದ ಭತ್ತದ ಬೆಳೆಗೆ ದುಂಡಾಣು ರೋಗ ಬರುತ್ತದೆ. ನಿರ್ವಹಣೆಗಾಗಿ ರೋಗದ 0.05 ಗ್ರಾಂ. ಸ್ಟ್ರೆಪೊràಸೈಕ್ಲಿನ್ ಮತ್ತು 0.05 ಗ್ರಾಂ. ಮೈಲು ತುತ್ತೆ (ಸಿಒಸಿ) ಯನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಪ್ರತಿ ಎಕರೆ ಸುಮಾರು 250 ಲೀ. ಸಿಂಪರಣಾ ದ್ರಾವಣ ಬಳಸಬೇಕು. ಪರೋಪಕಾರಿ ಕೀಟಗಳಾದ ಮಿರಿಡ್‌ತಿಗಣೆ, ಜೇಡಗಳ ಸಂಖ್ಯೆ ಜಾಸ್ತಿಯಿದ್ದಾಗ ಕೀಟನಾಶಕಗಳನ್ನು ಬಳಸಬಾರದು. ನೀರು ಹಾಯಿಸುವುದು. ಅವಶ್ಯಕತೆಗಣುಗುಣವಾಗಿ ಶೇ.5ರ ಬೇವಿನ ಕಷಾಯವನ್ನು ಪರ್ಯಾಯ ಸಿಂಪಡಿಸಬೇಕು. ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳನ್ನು ಸಂಪರ್ಕಿಸಬಹುದು. 9008709050, 8217440909.
ರಾಘವೇಂದ್ರ ಎಲಿಗಾರ,
ವಿಜ್ಞಾನಿಗಳು (ಕೃಷಿ ಕೀಟಶಾಸ್ತ್ರ), ಕೃಷಿ ವಿಜ್ಞಾನ ಕೇಂದ್ರ
ಕೆ.ನಿಂಗಜ್ಜ