Advertisement

ದೇಗುಲಗಳ ಸರ್ಕಾರೀಕರಣಕ್ಕೆ ವಿರೋಧ ಶಿರಸಿಯಲ್ಲಿ ನಾಡಿದ್ದು ಸಮಾವೇಶ

07:10 AM Oct 23, 2017 | |

ಶಿರಸಿ: ಎಲ್ಲಾ ವರ್ಗದ ಹಿಂದೂ ದೇವಾಲಯಗಳಿಗೆ ಧಾರ್ಮಿಕ ಪರಿಷತ್‌ ಮೂಲಕ ವ್ಯವಸ್ಥಾಪನಾ ಸಮಿತಿ ರಚಿಸಿ ಹಿಂದೂ ದೇವಾಲಯ ಹಾಗೂ ಮಠ ಮಂದಿರಗಳನ್ನು ಸರ್ಕಾರೀಕರಣಗೊಳಿಸುವ ಪ್ರಕ್ರಿಯೆ ವಿರೋಧಿಸಿ ಶಿರಸಿಯಲ್ಲಿ ಬುಧವಾರ ಬೃಹತ್‌ ಸಮಾವೇಶ ನಡೆಯಲಿದೆ ಎಂದು ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿರಸಿಯ ಕರ್ಜಗಿ ಕಲ್ಯಾಣ ಮಂಟಪದಲ್ಲಿ ಬುಧವಾರ ಬೆಳಗ್ಗೆ 10:30ಕ್ಕೆ ಸಮಾವೇಶ ನಡೆಯಲಿದ್ದು, ಜಿಲ್ಲೆಯ ಎಲ್ಲ ದೇವಾಲಯಗಳ ಪ್ರಮುಖರು, ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದರು.

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಅಧಿ ನಿಯಮವನ್ನು 2001ರ ಕಾಯಿದೆ ಹಾಗೂ 2011ರಲ್ಲಿ
ಪುನಃ ಜಾರಿಗೆ ತಂದ ಕಾಯಿದೆಯನ್ನು ಉಚ್ಚ ನ್ಯಾಯಾಲಯ ಸಂವಿಧಾನ ಬಾಹಿರವೆಂದು ರದ್ದು ಪಡಿಸಿದ್ದರೂ ಸರಕಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ದಾಖಲಿಸಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್‌ ಮೂಲಕ ದೇವಾಲಯಗಳ ಮೇಲೆ ಹಿಡಿತ ಸಾಧಿಸುವ ಪ್ರಕ್ರಿಯೆ ಆಸ್ತಿಕ ಹಿಂದೂ ಜನರ ಭಾವನೆಗಳಿಗೆ ಘಾಸಿಯಾಗುವಂತಿದೆ.ದೇವಸ್ಥಾನಗಳ ಮೇಲೆ ಹತೋಟಿ ಸಾಧಿಸುವ ಹಠ ಸರಿಯಾದುದಲ್ಲ ಎಂದೂ ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next