ಶ್ರೀಗಳು ಚಾಲನೆ ನೀಡಿದರು. ನಂತರ ಮಾತನಾಡಿದ ಶ್ರೀಗಳು, ಸರಕಾರ ಅನ್ನದಾತರಿಗಾಗಿ ಸಾಕಷ್ಟು ಅನುಕೂಲಗಳನ್ನು ಕಲ್ಪಿಸಿದೆ.
Advertisement
ಕೃಷಿ ಇಲಾಖೆ, ಸಹಾಯಕ ಕೃಷಿ ಅಧಿಕಾರಿಗಳಿಂದ ಸೂಕ್ತ ಮಾರ್ಗದರ್ಶನ ಪಡೆದು ಸದುಪಯೋಗ ಪಡಿಸಿಕೊಳ್ಳುವಂತೆಸಲಹೆ ನೀಡಿದರು. ಪಿಕೆಪಿಎಸ್ ಅಧ್ಯಕ್ಷ ಕಾಶೀನಾಥ ಮಸಬಿನಾಳ ಮಾತನಾಡಿ, ನೋಂದಣಿ ಮಾಡಿದ ರೈತರಿಗೆ ಯಾವುದೇ ತೊಂದರೆಯಾಗದಂತೆ ಸರದಿ ಪ್ರಕಾರ ತೊಗರಿಯನ್ನು ಖರೀದಿ ಸಲಾಗುವುದು. ಅದಕ್ಕಾಗಿ ಸ್ಥಳದಲ್ಲಿ
ಕುಡಿಯುವ ನೀರು, ನೆರಳು, ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನ ನೋಂದಣಿಯಾಗಿ ಸರದಿಯಲ್ಲಿರುವ ರೈತರಿಗೆ ಫೋನ್ ಮೂಲಕ ಮಾಹಿತಿ ನೀಡಲಾಗುವುದು. ಆದ್ದರಿಂದ ಯಾರು ಯಾವುದೇ ಆಮಿಷ, ಆತಂಕಕ್ಕೆ ಒಳಗಾಗದೇ ಸಹಕಾರ ನೀಡಬೇಕೆಂದು ಕೋರಿದರು.