Advertisement
ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಯನ್ನು ನಾಲ್ಕು ಅಡಿ ಎತ್ತರ ಮೀರದಂತೆ ಹಾಗೂ ಮನೆಯೊಳಗೆ2 ಅಡಿ ಮೀರದಂತೆ ಪ್ರತಿಷ್ಠಾಪಿಸುವನಿಯಮ ವಿಧಿಸಲಾಗಿದೆ.
Related Articles
Advertisement
ಗಣೇಶ ಮೂರ್ತಿಗಳನ್ನು ತರುವಾಗ ಹಾಗೂ ವಿಸರ್ಜಿಸುವಾಗ ಯಾವುದೇ ಕಾರಣಕ್ಕಾಗಲಿ ಅಥವಾ ಯಾವುದೇ ಸಂದರ್ಭದಲ್ಲಿ ಯಾವುದೇ ಮೆರವಣಿಗೆ ಮಾಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಿದೆ. ಪಾರಂಪರಿಕ ಗಣೇಶ ಮೂರ್ತಿ ಮತ್ತು ಮನೆಯಲ್ಲಿ ವಿಗ್ರಹಗಳನ್ನು ಪೂಜಿಸುವುದು.ಅವುಗಳನ್ನು ಮನೆಯಲ್ಲಿಯೇ ವಿಸರ್ಜಿಸುವುದು ಮತ್ತು ಸರ್ಕಾರಿ, ಖಾಸಗಿ ಬಯಲು ಪ್ರದೇಶಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳನ್ನು ಅತಿ ಕನಿಷ್ಠ ಜನಸಂಖ್ಯೆಯೊಂದಿಗೆ ಸಮೀಪವಾಗುವಂತಹ ಮಾರ್ಗಗಳನ್ನು ಬಳಸಿಕೊಂಡು ಜಿಲ್ಲಾಡಳಿತ, ಹತ್ತಿರದ ಸ್ಥಳೀಯ ಸಂಸ್ಥೆಗಳು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಈಗಾಗಲೇ ನಿರ್ಮಿಸಲಾದ ಹೊಂಡ ಅಥವಾ ಮೊಬೈಲ್ ಟ್ಯಾಂಕ್‌ಗಳಲ್ಲಿ ಅಥವಾ ಕೃತಕ ವಿಸರ್ಜನಾ ಟ್ಯಾಂಕ್‌ಗಳಲ್ಲಿ ವಿಸರ್ಜಿಸಬೇಕು. ಆಸಕ್ತಿಯನ್ನೇ ತೊರಡ ಮಂಡಳಿಗಳು: ಕೋವಿಡ್ ಷರತ್ತುಗಳು ಗಣಪತಿ ಮಂಡಳಿಗಳ ಉತ್ಸಾಹವನ್ನು ತಗ್ಗಿಸಿದೆ. ಮೆರವಣಿಗೆ ಇಲ್ಲದೇ ಗಣೇಶೋತ್ಸವಕ್ಕೆ ಸಂಭ್ರಮ ಇಲ್ಲ. ಹೀಗಾಗಿ ನಿಯಮಾನುಸಾರ ಸರಳ ರೀತಿಯಲ್ಲಿ ಆಚರಿಸಲು ಕೆಲ ಮಂಡಳಿಗಳು ಮುಂದಾಗಿವೆ. ಇನ್ನು ಕೆಲ ಬಡಾವಣೆಗಳ ಸಂಘ, ಸಂಸ್ಥೆಗಳು ಈ ಬಾರಿ ಗಣೇಶೋತ್ಸವ ನಡೆಸಲು ಆಸಕ್ತಿಯನ್ನೇ ತೋರಿಸುತ್ತಿಲ್ಲ ಗಣೇಶ ಮೂರ್ತಿಗಳಿಗೆ ಬೇಡಿಕೆ ಇಲ್ಲ
ಕೊನೆಗಳಿಗೆಯಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡಿದ್ದರಿಂದ ಗಣೇಶ ಮೂರ್ತಿ ಮಾರಾಟಗಾರರು ಎರಡು ದಿನದಿಂದ ಮಳಿಗೆ ತೆರೆದಿದ್ದಾರೆ. ಕಳೆದ ವರ್ಷವೂ ಗಣೇಶ ಮೂರ್ತಿ ಮಾರಾಟ ಬಹಳಕಡಿಮೆಯಾಗಿದ್ದರಿಂದ ಕಳೆದ ಬಾರಿ ಮಾರಾಟವಾಗದೇ ಉಳಿದಿದ್ದ ಗಣೇಶನನ್ನೇ ಈಗ ಮಾರುತ್ತಿದ್ದೇವೆ ಎಂದು ಗಣಪತಿ ಮಾರಾಟಗಾರರೊಬ್ಬರು ತಿಳಿಸಿದರು. ಗಣೇಶೋತ್ಸವ ಇಲ್ಲ ಎಂದಿದ್ದರು. ಈಗ ಎರಡು ದಿನದ ಹಿಂದೆ ಪ್ರಕಟಿಸಿದರು. 15 ದಿನಗಳ ಹಿಂದೆಯೇ ಗಣೇಶ ಮೂರ್ತಿ ಮಾರಾಟ ಶುರುವಾಗುತ್ತಿತ್ತು. ಈಗ ಐದು ದಿನಗಳೂ ಅವಕಾಶವಿಲ್ಲ. ನಿನ್ನೆಯಿಂದ 5 ಗಣೇಶ ಮಾರಾಟವಾಗಿವೆ. ದೊಡ್ಡ ಮೂರ್ತಿಗಳನ್ನು ಕೇಳುವವವರೇ ಇಲ್ಲ. ಈ ಬಾರಿಯೂ ನಮಗೆ ತುಂಬ ನಷ್ಟವಾಗುತ್ತದೆ ಎಂದು ಮಾರಾಟಗಾರ ಮಹೇಶ್ ಬೇಸರ ವ್ಯಕ್ತಪಡಿಸಿದರು.