Advertisement

ಬಡಿದಾಡಿಕೊಂಡು ಗಣೇಶ ವಿಗ್ರಹ ಭಗ್ನಗೊಳಿಸಿದರು

11:31 AM Feb 13, 2017 | Team Udayavani |

ಬೆಂಗಳೂರು: ಕಿಡಿಗೇಡಿಗಳ ಗುಂಪೊಂದು ಜೆ.ಸಿ.ನಗರ ಮುಖ್ಯರಸ್ತೆಯ ಮುನಿರೆಡ್ಡಿ ಪಾಳ್ಯದ ಮಹಾಗಣಪತಿ ದೇವಸ್ಥಾನದ ಹೊರಗೋಡೆಯ ಗಣಪತಿ ವಿಗ್ರಹ ಭಗ್ನಗೊಳಿಸಿರುವ ಘಟನೆ ಭಾನುವಾರ ಬೆಳಗಿನ ಜಾವ ಸಂಭವಿಸಿದೆ. ಇದರಿಂದ ಜೆ.ಸಿ.ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಕಲ್ಪಿಸಲಾಗಿದೆ. 

Advertisement

ಈ ಮಧ್ಯೆ ಪೊಲೀಸರು ಪ್ರಕರಣ ಸಂಬಂಧ ಡಿ.ಜೆ.ಹಳ್ಳಿಯ ತಬ್ರೇಜ್‌ (26), ನಯೀಂ (23) ಎಂಬುವರನ್ನು  ಬಂಧಿಸಿದ್ದಾರೆ. ಮತ್ತೂಬ್ಬ ಆರೋಪಿ ಜೆ.ಸಿ.ನಗರದ ನಿವಾಸಿಯಾಗಿದ್ದು, ಆತ ತಲೆಮರೆಸಿಕೊಂಡಿದ್ದಾನೆ. ಪತ್ತೆಗಾಗಿ ಶೋಧ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಣಪತಿ ವಿಗ್ರಹ ಭಗ್ನಗೊಳಿಸಿದ ಆರೋಪಿಧಿಗಳು ಕೂಲಿ ಕೆಲಸ ಮಾಡುತ್ತಿದ್ದು, ಶನಿವಾರ ರಾತ್ರಿ ಕುಡಿದು ಬಂದು ಜೆ.ಸಿ.ನಗರ ಮುಖ್ಯರಸ್ತೆಧಿಯಲ್ಲಿರುವ ದೇವಸ್ಥಾನದ ಆವರಣದಲ್ಲಿ ಮಲಗಿದ್ದರು.

ಭಾನುವಾರ ಬೆಳಗಿನ ಜಾವ ಆರೋಪಿಗಳ ಮಧ್ಯೆ ಗಲಾಟೆ ನಡೆದಿದ್ದು, ಈ ಸಂದರ್ಭದಲ್ಲಿ ಕೋಲಿನಿಂದ ಪರಸ್ಪರ ಹೊಡೆದಾಡಿಕೊಂಡಿದ್ದರು. ಆ ವೇಳೆ ದೇವಸ್ಥಾನದ ಗೋಡೆಯ ಮೇಲೆ ಸಿಮೆಂಟ್‌ನಿಂದ ನಿರ್ಮಿಸಿರುವ ಗಣಪತಿ ಮತ್ತು ವೃಷಭನಾಥನ ಚಿತ್ರಗಳ ಪೈಕಿ ಗಣಪತಿ ವಿಗ್ರಹಕ್ಕೆ ಕೋಲು ತಾಗಿ ಅದು ತುಸು ಭಗ್ನಗೊಂಡಿದೆ. ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಿಲ್ಲ ಎಂದು ಆರೋಪಿಗಳು ಹೇಳಿಕೆ ನೀಡಿರುವುದಾಗಿ ಪೊಲೀಸ್‌ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ. 

ಪೇಪರ್‌ ಹಾಕುವ ಹುಡುಗರಿಂದ ಮಾಹಿತಿ:  ದೇವಾಲಯದ ಹೊರಭಾಗದ ಗೋಡೆಯಲ್ಲಿದ್ದ ಗಣಪತಿ ವಿಗ್ರಹ ಭಗ್ನಗೊಳಿಸಿರುವುದನ್ನು ಕಂಡ ದಿನ ಪತ್ರಿಕೆ ಹಾಕುವ ಹುಡುಗರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಮತ್ತೂಬ್ಬ ಪರಾರಿಧಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.  

ಮದ್ಯದ ಅಮಲಿನಲ್ಲಿ ಜಗಳವಾಡುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಉದ್ದೇಶ ಪೂರ್ವಕವಾಗಿ ವಿಗ್ರಹವನ್ನು ಭಗ್ನಗೊಳಿಸಿಲ್ಲ ಎಂದು ಯುವಕರು ಹೇಳಿಕೆ ನೀಡಿದ್ದಾರೆ. ಆದರೆ,ಬೇರೆ ಕೋಮಿನ ಯುವಕರು ಗಣಪತಿ ವಿಗ್ರಹಗೊಳಿಸಿರುವ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಸ್ವಲ್ಪ ಹೊತ್ತು ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಹೀಗಾಗಿ ಘಟನೆ
ಯನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. 

Advertisement

ಹಿಂದೆಯೂ ಇದೇ ರೀತಿ ಆಗಿತ್ತು 
ಕಳೆದ ಆರು ವರ್ಷಗಳ ಹಿಂದೆ ಕಿಡಿಗೇಡಿಗಳು ಜೆ.ಸಿ.ನಗರದ ಮಸೀದಿಯೊಂದರಲ್ಲಿ ಹಂದಿ ತಲೆ ಇಟ್ಟು ಪರಾರಿಯಾಗಿದ್ದರು. ಇದರಿಂದಾಗಿ ಜೆ.ಸಿ.ನಗರದಲ್ಲಿ ಕೋಮು-ಸಂಘರ್ಷ ನಿರ್ಮಾಣವಾಗಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಅಲ್ಲದೆ, ಹಲವು ಪ್ರತಿಭಟನೆಗಳು ನಡೆದಿದ್ದವು. ಇದೀಗ ದೇವಸ್ಥಾನದ ಗಣಪತಿ ವಿಗ್ರಹ ವಿರೂಪಗೊಳಿಸಿರುವ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್‌ ಭದ್ರತೆ ಕೈಗೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next