Advertisement

ಹಿಂದೂ ಮಹಾ ಮಂಡಳಿ ಗಣಪತಿ ವಿಸರ್ಜನೆ; ಸಾಂಸ್ಕೃತಿಕ ಮೆರುಗು ನೀಡಿದ ಜನಪದ ಕಲಾ ತಂಡಗಳು

05:48 PM Sep 15, 2022 | Team Udayavani |

ಗಂಗಾವತಿ: ಭಾರತೀಯ ಸಂಸ್ಕೃತಿಯನ್ನು ಮೇಳೈಸಿದಂತೆ ಹಿಂದೂ ಮಹಾಮಂಡಳಿ ಗಣೇಶ ವಿಸರ್ಜನೆ ಕಾರ್ಯಕ್ರಮ ಗುರುವಾರ (ಸೆ.15) ಸಂಜೆ ನೆರವೇರಿತು.

Advertisement

ವಿಸರ್ಜನಾ ಕಾರ್ಯಕ್ರಮದಲ್ಲಿ ನಾಡಿನ ನಾನಾ ಕಡೆಯಿಂದ ಆಗಮಿಸಿದ್ದ ಜನಪದ ಕಲಾ ತಂಡಗಳು ಆಕರ್ಷಣೀಯವಾಗಿದ್ದವು.

ನಗರದ ಶ್ರೀಕೃಷ್ಣ ದೇವರಾಯ ವೃತ್ತದಿಂದ ವಿಸರ್ಜನಾ ಮೆರವಣಿಗೆ ಆರಂಭವಾಯಿತು. ಮಂಗಳೂರಿನ ಹುಲಿ ಕುಣಿತ, ಭೂತರಾಧನೆ, ಬೊಂಬೆಗಳು, ಕಾಸರಗೋಡಿನ ಕಲಾತಂಡ, ಬಂಟ್ವಾಳದ ಬೊಂಬೆಗಳ ಕುಣಿತ ಮತ್ತು ಮಹಾರಾಷ್ಟ್ರದ ಜಾಂಜ್ ಮೇಳ ವಿಸರ್ಜನಾ ಮೆರವಣಿಗೆಯ ಆಕರ್ಷಣೆಗಳಾಗಿದ್ದವು. ದಾರಿಯುದ್ದಕ್ಕೂ ಮಹಿಳೆಯರು, ಮಕ್ಕಳು ಸಹಸ್ರ ಸಂಖ್ಯೆಯಲ್ಲಿ ಗಣಪತಿ ವಿಸರ್ಜನೆಯ ಮೆರವಣಿಗೆಯನ್ನು ವೀಕ್ಷಿಸಿದರು. ಹೂಗಳನ್ನು ಮತ್ತು ನೀರನ್ನು ರಸ್ತೆಗೆ ಹಾಕಿ ಗಣೇಶನನ್ನು ಕಲಾತಂಡಗಳ ಮೂಲಕ ಬೀಳ್ಕೊಡಲಾಯಿತು.

ಹಿಂದೂ ಮಹಾ ಮಂಡಳಿಯ ಗಣಪತಿ ಪ್ರತಿಷ್ಠಾಪನೆಯವರು ಪ್ರತಿ ವರ್ಷ ಡಿಜೆ ಹೊರತುಪಡಿಸಿ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ವಿವಿಧ ಕಲಾ ತಂಡಗಳಾದ ಕೋಲಾಟ, ಡೊಳ್ಳು ಕುಣಿತ, ತಾಷಾ, ಜಾಂಜ್ ಮೇಳ ಹಾಗೂ ಹಲಗೆ ಬೀಳದಂತಹ ವೈಶಿಷ್ಟ ತಂಡಗಳನ್ನು ಕರೆಸುತ್ತಾರೆ. ಸಮಸ್ತ ಜನರ ವೀಕ್ಷಣೆಗಾಗಿ ಹಗಲಿನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡುವ ಪದ್ಧತಿ ವೈಶಿಷ್ಟ್ಯ ಪೂರ್ಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next