Advertisement

ಗೌರಿ ಗಣೇಶ ಹಬ್ಬಕ್ಕಾಗಿ ಹೊಸ ಮಾರ್ಗಸೂಚಿ ತರಲು ಚಿಂತನೆ : ಗೋವಾ ಸಿಎಂ

04:40 PM Aug 07, 2021 | Team Udayavani |

ಪಣಜಿ: ಗೋವಾ ರಾಜ್ಯದಲ್ಲಿ ಕರೋನಾ ಸಂಕಷ್ಟ ಇದುವರೆಗೂ ಮುಕ್ತಾಯಗೊಂಡಿಲ್ಲ. ಇದರಿಂದಾಗಿ ಪ್ರಸಕ್ತ ವರ್ಷವೂ ಕೂಡ ಗೋವಾ ರಾಜ್ಯದ ಜನರಿಗೆ ಗೌರಿಗಣೇಶ ಹಬ್ಬವನ್ನು ಯಾವುದೇ ಆಡಂಬರವಿಲ್ಲದೆಯೇ ಆಚರಣೆ ಮಾಡುವಂತಾಗಲಿದೆ.

Advertisement

ಈ ಕುರಿತಂತೆ ಕೇಂದ್ರ ಸರ್ಕಾರದೊಂದಿಗೆ ಚರ್ಚೆ ನಡೆಸಿ ಗಣೇಶೋತ್ಸವಕ್ಕೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಯನ್ನು ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದರು.

ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಾವಂತ್- ಗೋವಾದಲ್ಲಿ ಗೌರಿ ಗಣೇಶ ಹಬ್ಬಕ್ಕಾಗಿ ಹೊಸ ಮಾರ್ಗಸೂಚಿಯನ್ನು ತರುವುದಾಗಿ ಮಾಹಿತಿ ನೀಡಿದರು.

ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಗೋವಾಕ್ಕೆ ಆಗಮಿಸುವ ಪ್ರಯಾಣಿಕರಿಗೆ ಗೋವಾ ಸರ್ಕಾರ ಆರ್‍ಟಿಪಿಸಿಆರ್ ತಪಾಸಣೆ ಖಡ್ಡಾಯಗೊಳಿಸಿದೆ. ಇತರ ರಾಜ್ಯಗಳಿಂದ ಗೋವಾಕ್ಕೆ ಆಗಮಿಸುವವರಿಗೆ ಕೆಲ ವಿನಾಯತಿ ನೀಡಲಾಗಿದೆ.

ಇದನ್ನೂ ಓದಿ :ಟೋಕಿಯೊ ಒಲಿಂಪಿಕ್ಸ್: ಕಂಚು ಗೆದ್ದ ಕುಸ್ತಿಪಟು ಭಜರಂಗ್ ಪೂನಿಯಾ

Advertisement
Advertisement

Udayavani is now on Telegram. Click here to join our channel and stay updated with the latest news.

Next