Advertisement

ಮನುಕುಲದ ವಿಘ್ನಗಳೆಲ್ಲ‌ ದೂರವಾಗಲಿ: ಸಿಎಂ BSY ಸೇರಿದಂತೆ ಗಣ್ಯರಿಂದ ಗಣೇಶ ಚತುರ್ಥಿಯ ಶುಭಾಶಯ

11:35 AM Aug 22, 2020 | Mithun PG |

ಬೆಂಗಳೂರು: ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರು ನಾಡಿನ ಸಮಸ್ತ ಜನತೆಗೆ ಶುಭಾಶಯ ಕೋರಿದ್ದಾರೆ.

Advertisement

ಗಣೇಶ ಹಬ್ಬದ ಪ್ರಯುಕ್ತ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಂದು ತಮ್ಮ‌ ನಿವಾಸ ಕಾವೇರಿಯಲ್ಲಿ‌ ವಿನಾಯಕನಿಗೆ ಪೂಜೆ ಸಲ್ಲಿಸಿದರು. ನಾಡಿನ ಸಮಸ್ತ ಭಕ್ತ ಜನತೆಗೆ ಗಣೇಶ ಚತುರ್ಥಿ ಹಬ್ಬದ ಭಕ್ತಿಪೂರ್ವಕ ಶುಭಾಶಯಗಳು. ಮೊದಲ ಪೂಜೆಯನ್ನು ಸ್ವೀಕರಿಸುವ ಸಿದ್ದಿ ವಿನಾಯಕ ರಾಜ್ಯದ ಪ್ರಗತಿಯ ಹಾದಿಯಲ್ಲಿ ಇರುವ ಕಂಟಕ, ಅಡಚಣೆಗಳನ್ನು ದೂರಮಾಡಲಿ, ಸಮಸ್ತ ಜನತೆಗೆ ಸುಖ, ಸಂತೋಷ, ಆರೋಗ್ಯ ಭಾಗ್ಯಗಳನ್ನು ಕೊಟ್ಟು ಸದಾ ಸಂರಕ್ಷಿಸಲಿ ಎಂದು ಟ್ವೀಟ್ ಮೂಲಕ ಶುಭಾಶಯ ತಿಳಿಸಿದ್ದಾರೆ.

ವಿಘ್ನೇಶ್ವರನು ಲೋಕದಲ್ಲಿರುವ ಸಕಲ ವಿಘ್ನಗಳನ್ನು ನಿವಾರಿಸಿ, ಸುಖ-ಶಾಂತಿ, ಆರೋಗ್ಯ, ಸಕಾರಾತ್ಮಕತೆಯನ್ನು ತಂದು ಎಲ್ಲರನ್ನೂ ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ. ಆಚರಣೆ ಸರಳವಾಗಿರಲಿ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

ಗಣೇಶ ಚತುರ್ಥಿ ನಾಡಿನ ಸಮಸ್ತ ಬಂಧು-ಬಾಂಧವರಿಗೆ ಸುಖ, ‌ಸಂತೋಷ ಮತ್ತು ನೆಮ್ಮದಿಯನ್ನು ಕರುಣಿಸಲಿ.ಮನುಕುಲದ ವಿಘ್ನಗಳೆಲ್ಲ‌ ದೂರವಾಗಲಿ. ಗಣೇಶನ ಹಬ್ಬವನ್ನು ಮನದುಂಬಿ ಸಂಭ್ರಮಿಸಿ, ನಿಮ್ಮ ಮತ್ತು ನಿಮ್ಮವರೆಲ್ಲರ ಆರೋಗ್ಯದ‌ ಕಡೆ ವಿಶೇಷ ಗಮನ ಇರಲಿ. ಗಣೇಶ ಚತುರ್ಥಿಯ ಶುಭಹಾರೈಕೆಗಳು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ವಿಘ್ನ ನಿವಾರಕನಾದ ವಿನಾಯಕನು ಸಮಸ್ತ ಜಗತ್ತಿಗೆ ಅಂಟಿರುವ ಕೋವಿಡ್ ಎನ್ನುವ ವಿಘ್ನವನ್ನು ನಿವಾರಣೆ ಮಾಡಲಿ. ಹಬ್ಬ ಆಚರಿಸುವ ಸಂದರ್ಭದಲ್ಲಿ ಪರಿಸರ ಸ್ನೇಹಿ ಗೌರಿ-ಗಣೇಶ ಮೂರ್ತಿಯನ್ನು ಪೂಜಿಸುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ಭಾಗಿಯಾಗೋಣ ಎಂದು ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡ  ಹೇಳಿದ್ದಾರೆ.

Advertisement

ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳು. ಸರ್ವರ ಬಾಳಲ್ಲೂ ವಿನಾಯಕ ಸನ್ಮಂಗಳವನ್ನುಂಟು ಮಾಡಲಿ ಎಂದು ಹಾರೈಸುತ್ತೇನೆ. ಕೊರೊನಾ ಸಾಂಕ್ರಾಮಿಕದ ಹಿನ್ನಲೆಯಲ್ಲಿ ಎಲ್ಲರೂ ಸುರಕ್ಷತಾ ಕ್ರಮಗಳೊಂದಿಗೆ ಹಬ್ಬ ಆಚರಿಸೋಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next