Advertisement

ಸ್ಟುಡಿಯೋ ಒಳಗೆ ಗಣೇಶ್‌ ಗಾಳಿಪಟ

06:40 AM May 13, 2020 | Lakshmi GovindaRaj |

ಕೊರೊನಾ ಲಾಕ್‌ ಡೌನ್‌ ನಡುವೆಯೇ ನಿರ್ದೇಶಕ ಯೋಗರಾಜ್‌ ಭಟ್‌ ತಮ್ಮ ‌ಟ 2 ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸವನ್ನು ಸಲ್ಲದೆ ಶುರು ಮಾಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಕರ್ನಾಟಕ ಸರ್ಕಾರ ಶೂಟಿಂಗ್‌  ಹೊರತುಪಡಿಸಿ ಚಿತ್ರರಂಗದ ಇತರ ಕೆಲಸಗಳನ್ನು ಪುನರಾರಂಭಿಸಲು ಅನುಮತಿ ನೀಡಿ ದ್ದರಿಂದ ನಿರ್ದೇಶಕ ಯೋಗರಾಜ್‌ ಭಟ್‌ ತಮ್ಮ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಆರಂಭಿಸಲು ನಿರ್ಧಾರ  ಕೈಗೊಂಡಿದ್ದಾರೆ.

Advertisement

ಈ ಬಗ್ಗೆ ಮಾತನಾಡುವ ಯೋಗರಾಜ್‌ ಭಟ್‌, ಗಾಳಿಪಟ 2 ಚಿತ್ರದ ಡಬ್ಬಿಂಗ್‌ ಕೆಲಸವನ್ನು ಈ ವಾರ ಶುರು ಮಾಡಲಿದ್ದೇವೆ. ಈಗಾಗಲೇ ಚಿತ್ರದ ಪೂರ್ಣಗೊಂಡ ಭಾಗಗಳನ್ನು ಡಬ್‌ ಮಾಡಲು ಪ್ಲಾನ್‌  ಮಾಡಿಕೊಂಡಿದ್ದು, ಚಿತ್ರದ ಕಲಾವಿದರು ಒಬ್ಬೊಬ್ಬರಾಗಿ ಡಬ್ಬಿಂಗ್‌ ಮಾಡಲಿದ್ದಾರೆ ಎಂದಿದ್ದಾರೆ. ಇನ್ನು ರೋಮ್ಯಾಂಟಿಕ್‌ ಕಾಮಿಡಿ ಕಥಾಹಂದರ ಹೊಂದಿರುವ ಗಾಳಿಪಟ  2 ಚಿತ್ರವನ್ನು ಸೂರಜ್‌ ಪ್ರೊಡಕ್ಷನ್‌ ಬ್ಯಾನರ್‌ ಅಡಿಯಲ್ಲಿ ರಮೇಶ್‌ ರೆಡ್ಡಿ ನಿರ್ಮಿಸುತ್ತಿದ್ದಾರೆ.

ಚಿತ್ರದಲ್ಲಿ ಗಣೇಶ್‌, ದಿಗಂತ್‌ ಮತ್ತು ಪವನ್‌ ಕುಮಾರ್‌ ಮುಖ್ಯ ಪಾತ್ರದಲ್ಲಿದ್ದಾರೆ. ಉಳಿದಂತೆ ವೈಭವಿ ಶಾಂಡಿಲ್ಯ, ಸಂಯುಕ್ತ ಮೆನನ್‌, ಶರ್ಮೀಲಾ ಮಾಂಡ್ರೆ  ಮತ್ತು ನಿಶ್ವಿ‌ಕ ನಾಯ್ಡು ಮತ್ತಿತರರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಅರ್ಜುನ್‌ ಜನ್ಯಾ ಸಂಗೀತ, ಸಂತೋಷ್‌ ರೈ ಪಾತಾಜೆ ಛಾಯಾಗ್ರಹಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next