Advertisement
ಸಾರ್ವಜನಿಕ ಗಣೇಶೋತ್ಸವ : ಸ್ವಾತಂತ್ರ್ಯ ಪೂರ್ವದಲ್ಲಿ ಮನೆಗಳಲ್ಲಿ ಮಾತ್ರ ಪೂಜೆ ಸಲ್ಲಿಸುತ್ತಿದ್ದ ಗಣೇಶೋತ್ಸವವನ್ನು ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕ್ ಅವರು ದೊಡ್ಡ ಸಾರ್ವಜನಿಕ ಕಾರ್ಯಕ್ರಮವಾಗಿ ಪರಿವರ್ತಿಸಿದ್ದು, ಇತಿಹಾಸದಿಂದ ನಮಗೆ ತಿಳಿದು ಬರುತ್ತದೆ. ಬ್ರಿಟಿಷರು ವಿರುದ್ಧ ಹೋರಾಟ ನಡೆಸಲು, ರಾಷ್ಟ್ರೀಯ ಮನೋಭಾವ ಭಾವೈಕ್ಯತೆಗೆ ಸಾರ್ವಜನಿಕ ಗಣೇಶೋತ್ಸವ ಪ್ರೇರಣೆಯಾಗಿ ಜನಸಾಮಾನ್ಯರಿಗೆ ಧಾರ್ಮಿಕ ನೆಲೆಗಟ್ಟಿನಲ್ಲಿ ಸಮಾಗಮಗೊಳ್ಳಲು ಕಾರಣವಾಯಿತು.
Related Articles
Advertisement
ಮಾರುಕಟ್ಟೆ ಚೌಕ : ಇಲ್ಲಿನ ಕೊಂಗಾಡಿಯಪ್ಪ ಮುಖ್ಯ ರಸ್ತೆಯ ಮಾರುಕಟ್ಟೆ ಶಾಲೆಯ ಪಕ್ಕದ ಶ್ರೀ ವಿನಾಯಕ ಸೇವಾ ಸಮಿತಿ 36ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ. ಈ ಮೊದಲು ಮಾರುಕಟ್ಟೆ ಶಾಲೆಯ ಬಳಿಯ ಸಣ್ಣ ಹೋಟೆಲ್‌ನಲ್ಲಿ ಗಣೇಶ ಮೂರ್ತಿಯನ್ನು ಸಿದ್ಧಪಡಿಸಿ ನಂತರ ಪುರಭವನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತಿತ್ತು. ಇದರ ಉಸ್ತುವಾರಿಯನ್ನು ಅಂದು ಪಾಲಾಕ್ಷಯ್ಯ ವಹಿಸಿಕೊಳ್ಳುತ್ತಿದ್ದರು. 2 ದಶಕಗಳೀಚೆಗೆ ಮಾರುಕಟ್ಟೆ ಶಾಲೆಯ ಪಕ್ಕದಲ್ಲಿ ಕೂಡಿಸಲಾಗುತ್ತಿದೆ.
ಸೆ.18ರಿಂದ ಸೆ.23ರವರೆಗೆ ಪೂಜಾ ಕಾರ್ಯಕ್ರಮಗಳಿವೆ. ಗಣೇಶ ವಿಸರ್ಜನೆ ವೇಳೆ ಅವಘಡ ಗಣೇಶ ವಿಸರ್ಜನೆ ಮಾಡಿ ಹಿಂತಿರುಗುತ್ತಿದ್ದ ಟ್ರಾಕ್ಟರ್‌ನ ಅಲಂಕಾರಿಕ ಕಬ್ಬಿಣದ ಪಲ್ಲಕ್ಕಿಗೆ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಟ್ರಾಕ್ಟರ್‌ನಲ್ಲಿದ್ದ ಚಾಲಕ ಸೇರಿದಂತೆ 5 ಮಂದಿ ಸ್ಥಳದಲ್ಲೇ ಸಾವನ್ನಪ್ಪಿ, ಮೂವರು ತೀವ್ರವಾಗಿ ಗಾಯಗೊಂಡಿರುವ ದಾರುಣ ಘಟನೆ ತಾಲೂಕಿನ ಕನಸವಾಡಿ ಯಲ್ಲಿ 2015ರಲ್ಲಿ ನಡೆದಿತ್ತು.
ಇದರೊಂದಿಗೆ ಗ್ರಾಮಗಳಲ್ಲಿ ಗಣೇಶ ವಿಸರ್ಜನೆ ವೇಳೆ ಗುಂಪು ಘರ್ಷಣೆಗಳು ಸಹ ವರದಿಯಾಗಿತ್ತು. ಈ ಘಟನೆಯಾದ ನಂತರ ಪೊಲೀಸ್ ಇಲಾಖೆ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡುವುದು ಸೇರಿದಂತೆ ಹಲಾರು ಕಟ್ಟುಪಾಡುಗಳನ್ನು ವಿಧಿಸಿ, ಯಾವುದೇ ಅವಘಡ ನಡೆಯದಂತೆ ಕ್ರಮ ಕೈಗೊಳ್ಳುತ್ತಿದೆ. ಒಟ್ಟಾರೆ ಸಾರ್ವಜನಿಕರ ಗಣೇಶೋತ್ಸವ ಶಾಂತಿ ನೆಮ್ಮದಿ ಯಿಂದ ಜರುಗಬೇಕಿದೆ ಎನ್ನುವುದು ಸಾರ್ವಜನಿಕರ ಅಭಿಮತವಾಗಿದೆ.
ಗಲ್ಲಿಗಲ್ಲಿಗಳಲ್ಲಿ ಪ್ರತಿಷ್ಠಾಪನೆ: ಇಂದು ಬಾಲಕರಿಂದ ವಯೋವೃದ್ಧರವರೆಗೆ ಅವರವರ ಸಾಮರ್ಥ್ಯಕ್ಕೆ ಅನುಸಾರವಾಗಿ ವಿವಿಧ ಮಾದರಿಯ ಗಣೇಶ ಮೂರ್ತಿಗಳನ್ನು ಪೇಟೆ ಹಾಗೂ ಗಲ್ಲಿಗಳಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ. ವಿದ್ಯುತ್ ದೀಪಾಲಂಕಾರ, ಹೂವಿನ ಅಲಂಕಾರಗಳಿಂದ ಗಣೇಶ ಮೂರ್ತಿಗಳನ್ನು ಸಿಂಗರಿಸಲಾಗುತ್ತಿದೆ.
– ಡಿ.ಶ್ರೀಕಾಂತ