Advertisement

ಗಣೇಶನ ಆರಾಧನೆಗೆ ಯಾವುದೇ ಕಾಲಮಿತಿಯಿಲ್ಲ: ಶಂಕರ ಭಟ್

12:51 PM Aug 21, 2020 | sudhir |

ಹೊನ್ನಾವರ: ಎಲ್ಲ ಶುಭ ಕಾರ್ಯಕ್ರಮದಲ್ಲೂ ಪ್ರಥಮ ವಂದಿತ ಗಣಪತಿ ಆರಾಧನೆ ನಡೆಸಲಾಗುತ್ತದೆ. ವಿಶೇಷವಾಗಿ ಗಣೇಶ ಚತುರ್ಥಿ ಆಚರಿಸುತ್ತ ಬಂದಿರುವುದು ನಮ್ಮ ಧಾರ್ಮಿಕ ಪರಂಪರೆ. ಆ ಪುಣ್ಯದಿನದಂದು ಗಣೇಶಮೂರ್ತಿಯನ್ನು ತಂದು
ಪ್ರತಿಷ್ಠಾಪಿಸಿ, ಆರಾಧಿಸುವುದು ಸಾಧ್ಯವಿಲ್ಲವಾದಾಗ ನವರಾತ್ರಿ ಅಥವಾ ಮಾಘ ಚೌತಿಯಲ್ಲಿ ಗಣಪತಿಯ ವಿಶೇಷ ಉತ್ಸವ ಮಾಡುತ್ತ ಬರಲಾಗಿದೆ. ಇಲ್ಲಿ ಗಣೇಶನ ಪೂಜೆ, ಆರಾಧನೆ ಮುಖ್ಯವೇ ವಿನಃ ದಿನ ಮುಖ್ಯಲ್ಲ. ಸರ್ಕಾರಿ ಆದೇಶದಂತೆ ಈ ಬಾರಿ
ಗಣೇಶೋತ್ಸವ ಆಚರಿಸುವುದು ಎಲ್ಲರ ದೃಷ್ಠಿಯಿಂದಲೂ ಅನಿವಾರ್ಯವಾಗಿದೆ. ಈ ನಿಯಮಾವಳಿ ಕಟ್ಟುಪಾಡುಗಳು
ಬೇಡ ಎಂದಿದ್ದವರು ಮಾಘದಲ್ಲಿ ಗಣೇಶ ಚೌತಿ ಆಚರಿಸಬಹುದು. ಅಂದು ಧುಂಡಿರಾಜವೃತ ಅಂದರೆ ಗಣೇಶನ ಆರಾಧನೆ ಮಾಡುವುದು ಸಂಪ್ರದಾಯವಾಗಿ ಬೆಳೆದು ಬಂದಿದೆ.

Advertisement

ಸಹಜ ದಿನಗಳಲ್ಲೂ ಸೂತಕ, ಇತ್ಯಾದಿ ಬಂದಾಗ ಚೌತಿ ತಪ್ಪಿದರೆ ನವರಾತ್ರಿ ಚೌತಿ ಅಥವಾ ಮಾಘಶುದ್ಧ ಚೌತಿಯಂದು
ಗಣಪತಿ ತಂದು ಕೂರಿಸಿ ಪೂಜೆ ಮಾಡುತ್ತಾರೆ. ಈ ಎಲ್ಲ ದಿನಗಳು, ಎಲ್ಲ ಶುಭ ಸಂಕಲ್ಪಗಳು ಗಣೇಶನ ಆರಾಧನೆಗೆ ಯೋಗ್ಯವೇ ಆಗಿದೆ. ಅನಿವಾರ್ಯ ಕಾರಣದಿಂದ ಗಣೇಶ ಚೌತಿ ತಪ್ಪಿದರೆ ಯಾವ ದೋಷವೂ ಇಲ್ಲ ಎಂದು ಹೆಸರಾಂತ ತಂತ್ರಾಗಮ ಪಂಡಿತ ಶಂಕರ ಭಟ್‌ ಕಟ್ಟೆ ಹೇಳಿದ್ದಾರೆ. ಯಾವತ್ತೂ ಹೋಮ, ಹವನ, ದೇವತಾರಾಧನೆಗಳಲ್ಲಿ ಸತ್‌ಸಂಕಲ್ಪ, ಸದುದ್ದೇಶ, ಶ್ರದ್ಧಾಭಕ್ತಿ ಮುಖ್ಯವೇ ವಿನಃ ಇತರ ಸಂಗತಿಗಳಲ್ಲ. ಶಾಸ್ತ್ರದಲ್ಲಿ ಈ ವಿಷಯಗಳಿಗೆ ಹೆಚ್ಚು ಮಹತ್ವ ಕೊಡಲಾಗಿದೆ ಎಂದು ಅವರು ಹೇಳಿದ್ದಾರೆ.

ತಂತ್ರಾಗಮ ಪಾಂಡಿತ್ಯ ಪ್ರಸಿದ್ಧವಾದ ಕಟ್ಟೆ ಕುಟುಂಬದಲ್ಲಿ ಜನಿಸಿದ ಶಂಕರ ಪರಮೇಶ್ವರ ಭಟ್ಟ ಕಟ್ಟೆ ಇವರು ದೇವಾಲಯ
ಸ್ಥಾಪನೆ, ಪುನಃಪ್ರತಿಷ್ಠೆ, ವರ್ಧಂತಿ, ಜಾತ್ರಾ ಮಹೋತ್ಸವ ಮೊದಲಾದ ಆಗಮಶಾಸ್ತ್ರದ ಧಾರ್ಮಿಕ ಕಾರ್ಯಕ್ರಮ ನಡೆಸುವಲ್ಲಿ ಸಿದ್ಧಹಸ್ತರು. ಇವರಿಂದ ಹಾಗೂ ಇವರ ತಂದೆಯವರಿಂದ ಸಾವಿರಾರು ದೇವಾಲಯಗಳು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ
ಪ್ರತಿಷ್ಠಾಪಿಸಲ್ಪಟ್ಟಿದೆ. ಗಣೇಶ ಚತುರ್ಥಿಯನ್ನು ಭಾದ್ರಪದ ಮಾಸದಲ್ಲಿ ಆಚರಿಸಬೇಕು ಅಥವಾ ಅನಿವಾರ್ಯ ಸಂದರ್ಭದಲ್ಲಿ ನವರಾತ್ರಿ ಮತ್ತು ಮಾಘಮಾಸದಲ್ಲಿ ಚೌತಿ ಆಚರಿಸುವ ಪರಂಪರೆ ಇರುವುದರಿಂದ ಈಗ ಸರ್ಕಾರದ ಪರವಾನಗಿ
ದೊರೆಯದಿದ್ದರೆ ನಂತರ ಆಚರಿಸುವುದರ ಲಾಭ ಹಾನಿಗಳೇನು ಎಂಬ ಕುರಿತು ಸಾರ್ವಜನಿಕರಲ್ಲಿ ತೀವ್ರ ಕುತೂಹಲವಿದೆ.

ಇದಕ್ಕೆ ಕಟ್ಟೆ ಶಂಕರ ಭಟ್‌ ಅವರು ಮೇಲಿನಂತೆ ವಿವರಣೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next