Advertisement

ಗಾಂಧೀಜಿ ಚಪ್ಪಲಿ ಫೋಟೋ: ಮತ್ತೆ ಅಮೆಜಾನ್‌ ಎಡವಟ್ಟು

08:40 AM Jan 15, 2017 | |

ಹೊಸದಿಲ್ಲಿ: ಭಾರತೀಯ ರಾಷ್ಟ್ರಧ್ವಜದ ಮಾದ ರಿಯ ಡೋರ್‌ಮ್ಯಾಟ್‌ ಮಾರಾಟಕ್ಕಿಟ್ಟಿದ್ದಕ್ಕಾಗಿ ಸ್ವತಃ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರಿಂದ ಎಚ್ಚರಿಕೆ ಪಡೆದ ಹೊರತಾಗಿಯೂ, ಅಮೆರಿಕ ಮೂಲದ ಅಮೆಜಾನ್‌ ಕಂಪನಿ ಇನ್ನೂ ಬುದ್ದಿ ಕಲಿತಂತೆ ಕಾಣುತ್ತಿಲ್ಲ. ಕಾರಣ, ಸಂಸ್ಥೆಯ ಅಮೆರಿಕ ವೆಬ್‌ಸೈಟ್‌ನಲ್ಲಿ ಗಾಂಧೀಜಿ ಅವರ ಫೋಟೋ ಇರುವ ಚಪ್ಪಲಿಗಳನ್ನು ಮಾರಾಟಕ್ಕೆ ಇಟ್ಟಿರುವ ವಿಷಯ ಇದೀಗ ಬೆಳಕಿಗೆ ಬಂದಿದೆ.

Advertisement

ಎರಡೂ ಚಪ್ಪಲಿಗಳನ್ನು ಜೋಡಿಸಿದರೆ ಗಾಂಧೀಜಿ ಮುಖ ಕಾಣುವಂತೆ ಅವುಗಳ ಮೇಲೆ ಫೋಟೋ ಪ್ರಿಂಟ್‌ ಮಾಡಲಾಗಿದ್ದು, ಅದಕ್ಕೆ 1,200 ರೂ. ದರ ನಿಗದಿ ಮಾಡಲಾಗಿದೆ.

ಇತ್ತೀಚೆಗೆ ಭಾರತದ ರಾಷ್ಟ್ರಧ್ವಜ ಇರುವ ಡೋರ್‌ಮ್ಯಾಟ್‌ ಮಾರಾಟಕ್ಕೆ ಇಟ್ಟಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಸಚಿವೆ ಸುಷ್ಮಾ ಸ್ವರಾಜ್‌ ಕೂಡಲೇ ಅದನ್ನು ಹಿಂದಕ್ಕೆ ಪಡೆಯದೇ ಹೋದಲ್ಲಿ ಅಮೆಜಾನ್‌ ಸಿಬಂದಿಗೆ ವೀಸಾ ನಿರಾಕರಿಸುವುದಾಗಿ ಎಚ್ಚರಿಸಿದ್ದರು. ಬಳಿಕ ಅಮೆಜಾನ್‌ ಕಂಪೆನಿ ಆ ಉತ್ಪನ್ನಗಳನ್ನು ಹಿಂದಕ್ಕೆ ಪಡೆದಿತ್ತು. ಆದರೆ ಅಮೆರಿಕದಲ್ಲಿ ಕಂಪೆನಿಯ ಉತ್ಪನ್ನಗಳ ಪಟ್ಟಿಯಲ್ಲಿ ಭಾರತದ ರಾಷ್ಟ್ರಪಿತನ ಫೋಟೋ ಇರುವ ಚಪ್ಪಲಿಗಳನ್ನು ಮಾರಾಟ ಮಾಡುವ ಮೂಲಕ ಅದು ತನ್ನ ಬೌದ್ಧಿಕ ದಾರಿದ್ರéವನ್ನು ಮುಂದುವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next