Advertisement

ಗಾಂಧೀಜಿಯ ತತ್ವ ಇಂದಿಗೂ ಪ್ರಸ್ತುತ

10:03 AM Oct 03, 2018 | Team Udayavani |

ಹೊಸದಿಲ್ಲಿ: ಭಯೋತ್ಪಾದನೆ, ತೀವ್ರವಾದ ಹಾಗೂ ದ್ವೇಷವು ಎಲ್ಲೆಡೆ ಹರಡಿರುವಾಗ ಮನುಷ್ಯರನ್ನು ಜೋಡಿಸುವ ಶಕ್ತಿಯೇ ಮಹಾತ್ಮಾ ಗಾಂಧಿಯವರ ಅಹಿಂಸೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗಾಂಧಿ ಜಯಂತಿ ಅಂಗವಾಗಿ ಗಾಂಧಿ ತತ್ವಗಳ ಬಗ್ಗೆ ಸುದೀರ್ಘ‌ ಲೇಖನವನ್ನು ಬ್ಲಾಗ್‌ನಲ್ಲಿ ಪ್ರಕಟಿಸಿರುವ ಮೋದಿ, 21ನೇ ಶತಮಾನದಲ್ಲಿ ಗಾಂಧಿ ತಣ್ತೀಗಳು ಪ್ರಸ್ತುತವಾಗಿದ್ದು, ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತವೆ ಎಂದಿದ್ದಾರೆ.

Advertisement

ಜೀವನದಲ್ಲಿ ಸಮಾನತೆ, ಗೌರವ ಹಾಗೂ ಕಲ್ಯಾಣವನ್ನು ನಿರೀಕ್ಷಿಸಿದ ವಿಶ್ವದ ಜನರಿಗೆ ಅವರು ಭರವಸೆಯ ಬೆಳಕಾಗಿದ್ದರು ಎಂದು ಬರೆದುಕೊಂಡಿದ್ದಾರೆ. 

ಗಾಂಧಿ, ಶಾಸಿŒಗೆ ಗೌರವ ನಮನ: ರಾಜಘಾಟ್‌ನಲ್ಲಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪ್ರಮುಖರು ಗೌರವ ಸಲ್ಲಿಸಿದರು. ವಿಜಯ್‌ ಘಾಟ್‌ಗೆ ತೆರಳಿ ಮಾಜಿ ಪ್ರಧಾನಿ ಲಾಲ್‌ ಬಹಾದುರ್‌ ಶಾಸಿŒ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಕೂಡ ಗಾಂಧಿ ಸಮಾಧಿಗೆ ಗೌರವ ನಮನ ಸಲ್ಲಿಸಿದರು.

ಮಹಾತ್ಮಾಗೆ ಚಿನ್ನದ ಪದಕ? ಮಹಾತ್ಮಾ ಗಾಂಧಿಗೆ ಮರಣೋತ್ತರವಾಗಿ ಸಂಸದೀಯ ಚಿನ್ನದ ಪದಕ ಪುರಸ್ಕಾರ ನೀಡಬೇಕು ಎಂಬುದಾಗಿ ಇಬ್ಬರು ಭಾರತೀಯ ಮೂಲದ ಸಂಸದರೂ ಸೇರಿದಂತೆ ಆರಕ್ಕೂ ಹೆಚ್ಚು ಅಮೆರಿಕದ ಸಂಸದರು ಅಮೆರಿಕ ಸಂಸತ್ತಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಸಂಸದ ಕರೊಲಿನ್‌ ಮಲೊನೆ ಮಂಡಿಸಿದ ಈ ಪ್ರಸ್ತಾಪಕ್ಕೆ, ಸಂಸದರಾದ ಆಮಿ ಬೆರಾ, ರಾಜಾ ಕೃಷ್ಣಮೂರ್ತಿ ಮತ್ತು ಪ್ರಮೀಳಾ ಜಯಪಾಲ್‌ ಅನುಮೋದಿಸಿದ್ದಾರೆ.

ಕೋಮು ಸಂಘರ್ಷವಿಲ್ಲ
ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಕೋಮು ಸಂಘರ್ಷವಿಲ್ಲ. ಅದು ದೊಡ್ಡ ಸಂಗತಿಯೂ ಅಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನನಗೆ ವೈವಿಧ್ಯತೆ ಕಾಣಿಸುತ್ತಿದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೊನಿಯೋ ಗುಟೆರಸ್‌ ಹೇಳಿದ್ದಾರೆ. ಈ ಬಗ್ಗೆ “ಟೈಮ್ಸ್‌ ನೌ’ ವರದಿ ಮಾಡಿದೆ. ವಿವಿಧ ಧರ್ಮಗಳ ನಡುವೆ ಸಾಮರಸ್ಯವಿದೆ ಎಂದು ನಡುವೆ ಹೇಳಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next