Advertisement

ಗಾಂಧಿ ಹತ್ಯೆ ಮರುತನಿಖೆ ಬೇಕಿಲ್ಲ

06:00 AM Jan 09, 2018 | Harsha Rao |

ಹೊಸದಿಲ್ಲಿ: ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹತ್ಯೆ ಕುರಿತು ಮರುತನಿಖೆ ನಡೆಸಬೇಕಾದ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಸೋಮವಾರ ಅಮಿಕಸ್‌ ಕ್ಯೂರಿ ಅರಿಕೆ ಮಾಡಿದ್ದಾರೆ.

Advertisement

ಗಾಂಧಿ ಹತ್ಯೆ ಕುರಿತು ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಮರುತನಿಖೆಯ ಅಗತ್ಯಗಳ ಕುರಿತು ವರದಿ ಸಲ್ಲಿಸಲು ಸುಪ್ರೀಂ ಕೋರ್ಟ್‌ ನೇಮಿಸಿದ್ದ ಅಮಿಕಸ್‌ ಕ್ಯೂರಿ ಅಮರೇಂದ್ರ ಶರಣ್‌ ಅವರು ಸೋಮವಾರ ವರದಿ ಸಲ್ಲಿಸಿದ್ದು, ಮರುತನಿಖೆ ಬೇಕಾಗಿಲ್ಲ ಎಂದು ಹೇಳಿದ್ದಾರೆ.

“ಗಾಂಧಿ ಹತ್ಯೆಯ ಹಿಂದಿದ್ದ ಸಿದ್ಧಾಂತ, ವ್ಯಕ್ತಿ, ಅವರ ದೇಹ ವನ್ನು ಹೊಕ್ಕಿದ್ದ ಗುಂಡುಗಳು, ಬಳಸಿದ ಬಂದೂಕನ್ನು ಈಗಾಗಲೇ ಗುರುತು ಮಾಡಲಾಗಿದೆ. ಅರ್ಜಿದಾರರು ಹೇಳಿರುವಂಥ ನಾಲ್ಕನೇ ಗುಂಡು ನಿರಾಧಾರ’ ಎಂದು ಅವರು ವರದಿಯಲ್ಲಿ ಹೇಳಿದ್ದಾರೆ.

ಗಾಂಧೀಜಿ ಹತ್ಯೆಯಾಗಿದ್ದು, ನಾಥೂರಾಂ ಗೋಡ್ಸೆ ಹಾರಿಸಿದ ಗುಂಡಿನಿಂದಲ್ಲ. 4ನೇ ಗುಂಡನ್ನು ಬೇರ್ಯಾರೋ ಹಾರಿಸಿದ್ದರು. ಆ ಗುಂಡಿನಿಂದಲೇ ಗಾಂಧಿ ಹತರಾಗಿದ್ದರು. ಹೀಗಾಗಿ ನಾಥೂರಾಂ ಗೋಡ್ಸೆ ಗಾಂಧಿ ಹಂತಕನಲ್ಲ. ಈ ಕುರಿತು ಮರುತನಿಖೆ ಆಗಬೇಕು’ ಎಂದು ಅಭಿನವ ಭಾರತ ಸಂಸ್ಥಾಪಕ ಪಂಕಜ್‌ ಫ‌ಡ್ನಿಸ್‌ ಕಳೆದ ವರ್ಷ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೂ ಮೊದಲು ಇವರ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ ವಜಾ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next