Advertisement

ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಗಾಂಧೀಜಿ ಪುಣ್ಯ ತಿಥಿ

02:53 PM Feb 01, 2018 | Team Udayavani |

ಮಲ್ಲಿಕಟ್ಟೆ : ಗಾಂಧೀಜಿಯವರ ಅಹಿಂಸಾ ತತ್ವ ಭಾರತಕ್ಕೆ ಮಾತ್ರವಲ್ಲದೇ ಜಗತ್ತಿನ ಅನೇಕ ರಾಷ್ಟಗಳಿಗೆ ಸ್ಫೂರ್ತಿ
ಯಾಗಿದೆ. ಶಾಲೆಗಳಲ್ಲಿ ಶಿಕ್ಷಕರ ಮುಖಾಂತರ ಗಾಂಧೀಜಿಯವರ ಅಹಿಂಸಾ ತತ್ತ್ವ ಸಿದ್ಧಾಂತಗಳ ಅರಿವು ಮೂಡಿಸಬೇಕಾಗಿರುವುದು ಇಂದಿನ ಅಗತ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅಭಿಪ್ರಾಯಪಟ್ಟರು.

Advertisement

ದ.ಕ. ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ನಡೆದ ಮಹಾತ್ಮಾ ಗಾಂಧೀಜಿ ಅವರ ಪುಣ್ಯ ತಿಥಿ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿದ್ದರು.

ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಬಿ.ಎಚ್‌. ಖಾದರ್‌, ಮೇಯರ್‌ ಕವಿತಾ ಸನಿಲ್‌, ಶಶಿಧರ್‌ ಹೆಗ್ಡೆ, ಡಿ.ಜೆ. ಸುವರ್ಣ, ಟಿ. ಎಸ್‌. ಅಬ್ದುಲ್ಲ, ಪ್ರಭಾಕರ್‌ ಶ್ರೀಯಾನ್‌, ಸಂತೋಷ್‌ ಕುಮಾರ್‌ ಶೆಟ್ಟಿ, ಯು. ಎಚ್‌. ಖಾಲಿದ್‌ ಉಜಿರೆ, ನಾಗೇಶ್‌ ಭಂಡಾರಿ, ಸಿ.ಎಂ. ಮುಸ್ತಫಾ, ಟಿ.ಕೆ. ಸುಧೀರ್‌, ಆರಿಫ್‌ ಬಾವ, ನೀರಜ್‌ ಚಂದ್ರಪಾಲ್‌, ಅಖಿಲ್‌ ಆಳ್ವ, ಸಬಿತಾ ಮಿಸ್ಕೀತ್‌, ಟಿ.ಕೆ. ಶೈಲಜಾ, ರಮಾನಂದ ಪೂಜಾರಿ, ಗಣೇಶ್‌ ಪೂಜಾರಿ,
ಗೋಪಾಲ್‌ ಶೆಟ್ಟಿ, ಮಿಥುನ್‌, ರಘುರಾಜ್‌, ಅಶ್ರಫ್‌ ಕೆ.ಇ., ಸುರೇಶ್‌ ಶೆಟ್ಟಿ, ನಝೀರ್‌ ಬಜಾಲ್‌ ಮತ್ತಿತರರು ಉಪಸ್ಥಿತರಿದ್ದರು. ಸದಾಶಿವ ಉಳ್ಳಾಲ್‌ ಸ್ವಾಗತಿಸಿದರು. ಎಚ್‌. ಎಂ. ಅಶ್ರಫ್‌ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next