ಪತ್ರಿಕೋದ್ಯಮದ ಇತಿಹಾಸ ಹೇಳಬೇಕೆಂದರೆ ಅದು ಗಾಂಧೀಜಿಯವರಿಲ್ಲದೆ ಪೂರ್ಣಗೊಳ್ಳುವುದಿಲ್ಲ. ಎಲ್ಲರಲ್ಲೂ ಬರೆಯುವ ಕಲೆ ಇರುವುದಿಲ್ಲ ಆದರೆ ಗಾಂಧೀಜಿ ಅವರಿಗೆ ಅದು ಲೀಲಾಜಾಲವಾಗಿ ಬಂದಿತ್ತು. ಗಾಂಧೀಜಿಯವರು ಬ್ರಿಟಿಷರ ವಿರುದ್ಧ ಹೋರಾಡುತ್ತ ತಮ್ಮದೇ ಆದ ಪತ್ರಿಕೆಯನ್ನು ಶುರು ಮಾಡಿದರು.
ಗಾಂಧೀಜಿಯವರು ಮೂರು ಇಂಗ್ಲಿಷ್ ಪತ್ರಿಕೆಗಳ ಸಂಪಾದಕರಾಗಿದ್ದರು. ಅವುಗಳೆಂದರೆ ಇಂಡಿಯನ್ ಒಪಿನಿಯನ್, ಯಂಗ್ ಇಂಡಿಯಾ ಮತ್ತು ಹರಿಜನ್. ಇದರಲ್ಲಿ ಇಂಡಿಯನ್ ಒಪಿನಿಯನ್ ಪತ್ರಿಕೆಯು ದಕ್ಷಿಣ ಆಫ್ರಿಕದಲ್ಲಿ ಪ್ರಕಟವಾಯಿತು. ಸಾಮಾನ್ಯ ಜನರಿಗೆ ಅರ್ಥವಾಗಲು ಗಾಂಧೀಜಿಯವರು ಪ್ರಾದೇಶಿಕ ಭಾಷೆಗಳಲ್ಲಿ ಪತ್ರಿಕೆಗಳನ್ನು ಪ್ರಕಟಿಸತೊಡಗಿದರು.
ಅವರು ಬ್ರಿಟಿಷರ ಬಗ್ಗೆ ತಮ್ಮ ಪತ್ರಿಕೆಯಲ್ಲಿ ಧಾರಾಳವಾಗಿ ಬರೆದು ಪ್ರಕಟಿಸುತ್ತಿದ್ದರು. ಪ್ರಕಟವಾಗಿದ್ದ ಲೇಖನಗಳಿಂದ ಗಾಂಧೀಜಿ ಭಾರತದಲ್ಲಿ ಮೊದಲ ಬಾರಿಗೆ ಜೈಲು ಪಾಲಾದರು. ಆದರೆ ಅವರು ತಮ್ಮ ಬರವಣಿಗೆಯನ್ನು ನಿಲ್ಲಿಸಲಿಲ್ಲ. ಜೈಲಿನಲ್ಲಿ ಇದ್ದರೂ ಸಹ ಲೇಖನಗಳನ್ನು ಬರೆಯುತ್ತಿದ್ದರು. ಗಾಂಧೀಜಿಯವರು ತಮ್ಮ ಪತ್ರಿಕೆಗಳಲ್ಲಿ ಯಾವುದೇ ರೀತಿಯ ಜಾಹೀರಾತುಗಳನ್ನು ನೀಡುತ್ತಿರಲಿಲ್ಲ ಆದರೆ ಎಂದಿಗೂ ಅವರ ಪತ್ರಿಕೆ ನಷ್ಟಕ್ಕೆ ಒಳಗಾಗಲಿಲ್ಲ. ಅವರ ಸ್ವಂತ ಬರಹಗಳಿಂದ ಬಂದ ಲಾಭವನ್ನು ಅವರು ಎಂದಿಗೂ ದುರುಪಯೋಗ ಮಾಡದೆ ಖಾದಿ ವಸ್ತುಗಳ ಬಳಕೆಗೆ ಉಪಯೋಗ ಮಾಡಿಕೊಳ್ಳುತ್ತಿದ್ದರು. ಅವರು ತಮ್ಮ ಬರಹಗಳಲ್ಲಿ ಸತ್ಯಾಗ್ರಹ, ಏಕತೆ, ಅಹಿಂಸೆ, ಅಸ್ಪೃಶ್ಯತೆ ನಿಷೇಧದ ಬಗ್ಗೆ ಬರೆಯುತ್ತಿದ್ದರು. ಹಾಗೆಯೇ ಗಾಂಧೀಜಿಯವರು ಪತ್ರಿಕೋದ್ಯಮದ ಗುರಿ ಸೇವೆಯಾಗಿರಬೇಕು ಎಂದು ಹೇಳುತ್ತಿದ್ದರು. ಅವರು ರೈಲಿನಲ್ಲಿ ಸಂಚರಿಸುವಾಗಲು ಲೇಖನಗಳನ್ನು ಬರೆಯುತ್ತಿದ್ದರು. ಅವರ ಬಲಗೈ ಆಯಾಸವಾದಗ ಎಡ ಕೈಯಲ್ಲೂ ಬರೆಯಲು ಅವರು ಸಿದ್ದರಿದ್ದರು.
-ಬಿ. ಶರಣ್ಯ ಜೈನ್
ದ್ವಿತೀಯ ಪತ್ರಿಕೋದ್ಯಮ
ಎಸ್. ಡಿ. ಎಂ ಕಾಲೇಜು ಉಜಿರೆ