Advertisement
ದಲಿತರನ್ನು ದಲಿತರೇ ಆಯ್ಕೆ ಮಾಡುವ ಪ್ರತ್ಯೇಕ ಕ್ಷೇತ್ರದ ಬದಲು ಗಾಂಧೀಜಿಯವರು ದಲಿತರು ಹಿಂದೂ ಗಳ ಮತ ಕ್ಷೇತ್ರದ ಜತೆ ಪಾಲ್ಗೊಳ್ಳುವ ಪರವಿದ್ದರು. ದಲಿತ ಮತದಾರರು ದಲಿತ ಅಭ್ಯರ್ಥಿಗಳನ್ನೇ ಆಯ್ಕೆ ಮಾಡು ವುದಕ್ಕೆ ಡಾ| ಅಂಬೇಡ್ಕರ್ ಬೇಡಿಕೆ ಸಲ್ಲಿಸಿದ್ದರು. ಸರಕಾರ ದಲಿತ ಮತ ಕ್ಷೇತ್ರದ ಅಧಿಸೂಚನೆ ಹೊರಡಿಸಿದಾಗ ಇದರ ವಿರುದ್ಧ ಗಾಂಧೀಜಿ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಕಾಂಗ್ರೆಸ್ ನಾಯಕರು ಅಂಬೇಡ್ಕರ್ ಅವರನ್ನು ಭೇಟಿಯಾಗಿ “ಮಹಾತ್ಮರ ಜೀವಕ್ಕೆ ಅಪಾಯವಿದೆ.
Related Articles
Advertisement
ಇಲ್ಲಿ ಎರಡು ಚಿಂತನೆಗಳು ವಿಶ್ಲೇಷಣೆ ಯೋಗ್ಯ. “ಸ್ವಾತಂತ್ರ್ಯ ಯಾರಿಗೆ? ನಾವು ಅಸ್ಪೃಶ್ಯರು. ನಮಗೆ ಭೂಮಿಯ ಹಕ್ಕೇ ಇಲ್ಲ. ನಮಗೆ ದೇಶವೇ ಇಲ್ಲ ದಿದ್ದ ಮೇಲೆ ಸ್ವಾತಂತ್ರ್ಯ ಯಾರಿಗೆ?’ ಎಂಬ ಪ್ರಶ್ನೆ ಅಂಬೇಡ್ಕರ್ ಅವರ ದ್ದಾಗಿತ್ತು. “ಭಾರತದ ಸಂವಿಧಾನದ ರಚನೆಗೆ ಬ್ರಿಟಿಷ್ ಪ್ರಜೆ ಏಕೆ? ಆತ ಅಲ್ಲಿನ ಸಂವಿಧಾನ ತಜ್ಞ ಇರಬಹುದು. ಭಾರತದ ಸಂವಿಧಾನ ರಚನೆ ಸಮಿತಿಗೆ ಭಾರತೀಯರೇ ಆಗಬೇಕು. ನಮ್ಮವರೇ ಆದ ಅಂಬೇಡ್ಕರ್ ತಜ್ಞರಿರುವಾಗ ಅವರೇ ಅಧ್ಯಕ್ಷರಾಗಲಿ’ ಎಂದವರು ಗಾಂಧೀಜಿ.
ಇಲ್ಲಿ ಎಲ್ಲರ ವಾದದಲ್ಲಿಯೂ ಹುರು ಳಿದೆ. ಆದರೆ “ನ್ಯಾಯಾಧೀಶ’ನ ಸ್ಥಾನ ದಲ್ಲಿ ಯೋಚಿಸುವಾಗ ಎಲ್ಲ ಪೂರ್ವ ಗ್ರಹಗಳನ್ನು ಬದಿಗೊತ್ತಿ ತೀರ್ಪು ಕೊಡ ಬೇಕು. ಆಗಲೇ ಅದು “ನ್ಯಾಯತೀರ್ಪು’ ಎಂದೆನಿಸುತ್ತದೆ. ತೀರ್ಪುಗಳೆಂದರೆ ಕೇವಲ ನ್ಯಾಯಾಲಯದಲ್ಲಿ ಹೊರ ಬಂದುದು ಮಾತ್ರವಲ್ಲ, ನಮ್ಮೆಲ್ಲ ಹೇಳಿಕೆ ಗಳೂ “ನ್ಯಾಯತೀರ್ಪು’ ಆಗಬೇಕು, ಮಾತುಗಳಿಗೆ ಮೌಲ್ಯ ಬರುವುದು ಆಗ.
ನುಡಿದರೆ ಮುತ್ತಿನ ಹಾರದಂತಿರಬೇಕು|ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು|
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು|
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು|
ನುಡಿಯೊಳಗಾಗಿ ನಡೆಯದಿದ್ದರೆ
ಕೂಡಲಸಂಗಮದೇವ
ನೆಂತೊಲಿವನಯ್ಯ?
ಎಂದು ಬಸವಣ್ಣನವರು ಹೇಳಿದ್ದಾರಲ್ಲ? ಕರಡು ಸಮಿತಿಯು 2 ವರ್ಷ 11 ತಿಂಗಳು 18 ದಿನಗಳಲ್ಲಿ ಸಂವಿಧಾನ ಸಿದ್ಧ ಪಡಿಸಿತು. ಈ ಸಭೆಯಲ್ಲಿ ಸಮಿತಿ ಸದಸ್ಯ ರಾಗಿದ್ದ ಬ್ರಹ್ಮಾವರ ಪೇತ್ರಿ ಸಮೀಪದ ಬೆನಗಲ್ ಮೂಲದ ನರಸಿಂಗ ರಾವ್ ಅವರ ಕೊಡು ಗೆಯನ್ನು ಅಧ್ಯಕ್ಷ ಡಾ| ಅಂಬೇಡ್ಕರ್ ಮುಕ್ತಕಂಠದಿಂದ ಶ್ಲಾ ಸಿದ್ದರು. ಈ ಸಂವಿಧಾನವು ಪ್ರಪಂಚದಲ್ಲಿ ಅತೀ ದೊಡ್ಡದು ಮತ್ತು ಲಿಖೀತ ರೂಪದ್ದು. ಇದನ್ನು 1950ರ ಜ. 26ರಂದು ಅಂಗೀ ಕರಿಸಲಾಯಿತು. ಇದಾದ ಬಳಿಕ ಮದ್ರಾಸ್ ವಿ.ವಿ.ಯಲ್ಲಿ ಐವರ್ ಜೆನ್ನಿಂಗ್ಸ್ ಅವರು ನೀಡಿದ ಭಾಷಣದಲ್ಲಿ ತನಗೆ ಸಿಕ್ಕಿದ ಅವ ಕಾಶ ಕೈತಪ್ಪಿ ಹೋದುದಕ್ಕೋ ಎಂಬಂತೆ ಭಾರತದ ಒಕ್ಕೂ ಟ ವ್ಯವಸ್ಥೆಯ ಬಗೆಗೆ ವ್ಯಂಗ್ಯವಾಡಿದ್ದರು. ಈ ಸಂವಿಧಾನವು ತುಂಬಾ ಸಂಕೀರ್ಣವಾಗಿದ್ದು ಪಾಶ್ಚಾತ್ಯ ಸಾಧನಗಳ ಓರಿಯಂಟಲೈಸೇಶನ್. ಈ ಸಂವಿಧಾನ ಪರಿಣಾಮಕಾರಿಯಲ್ಲ ಎಂದೂ ಹೇಳಿದ್ದರು. ಜೆನ್ನಿಂಗ್ಸ್ ಅನೇಕ ದೇಶಗಳ ಸಂವಿಧಾನ ರಚನೆಯಲ್ಲಿ ಪಾಲ್ಗೊಂಡಿದ್ದರು. ಶ್ರೀಲಂಕಾದ ಸಂವಿ ಧಾನವನ್ನು ಜೆನ್ನಿಂಗ್ಸ್ 1955ರಲ್ಲಿ ಸಿದ್ಧ ಪಡಿಸಿದ್ದರು. ಅದು ಕೇವಲ ಅಸ್ತಿತ್ವ ದಲ್ಲಿದ್ದದ್ದು ಆರೇ ವರ್ಷ. 1956- 57ರಲ್ಲಿ ಮಲೇಶ್ಯಾದ ಸಂವಿಧಾನ ಸಮಿತಿ ಸಲಹೆಗಾರರಾಗಿದ್ದರು, 1959ರಲ್ಲಿ ನೇಪಾಲದ ಸಮಿತಿ ಸಲಹೆ ಗಾರರಾದರು. ಅವರು ಪಾಕಿಸ್ಥಾನ ಸರಕಾರಕ್ಕೂ ಸಾಂವಿಧಾನಿಕ ಸಲಹೆಗಾ ರರಾಗಿದ್ದರು. ಇಲ್ಲೆಲ್ಲ ಸಂವಿಧಾನ ವಿಫಲವಾದದ್ದೇ ಹೆಚ್ಚು. ಭಾರತದ ಸಂವಿಧಾನ ಅವಿಚ್ಛಿ ನ್ನವಾಗಿ ಮುಂದುವರಿಯುತ್ತಿದೆ. ಮುತ್ಸದ್ದಿಗಳು ಎಲ್ಲೆಲ್ಲಿ ಮುಂಚೂಣಿಯಲ್ಲಿ ನಿಂತು ತಮ್ಮ ನಿರ್ಣಯಗಳನ್ನು ಮಂಡಿಸುತ್ತಾರೋ ಅದು ದೀರ್ಘಕಾಲೀನ ಬಾಳಿಕೆಗೆ ಬರುತ್ತದೆ ಎಂಬುದನ್ನು ದೀರ್ಘ ಸಿಂಹಾಲೋಕನದ ಬಳಿಕವಷ್ಟೇ ಅರಿಯ ಬಹುದು. ಇದೇಕೆಂದರೆ ಅವರ ನಿರ್ಣಯಗಳು ಸಂಕುಚಿತ ಭಾವನೆಗಳಿಂದ ಪ್ರೇರಿತವಾಗದೆ ವಿಶಾಲ ಭಾವನೆಗಳಿಂದ ಪ್ರೇರಿತವಾಗಿರುತ್ತವೆ. ಮಟಪಾಡಿ ಕುಮಾರಸ್ವಾಮಿ