Advertisement

ಗಾಂಧಿ ಉಡುಪಿ ಭೇಟಿಗೆ 85: ಅಂಚೆ ಲಕೋಟೆ ಬಿಡುಗಡೆ

01:00 AM Feb 26, 2019 | Harsha Rao |

ಉಡುಪಿ: ಗಾಂಧೀಜಿಯವರು ಉಡುಪಿಗೆ 1934ರ ಫೆಬ್ರವರಿ 25ರಂದು ಭೇಟಿ ಕೊಟ್ಟ ಸ್ಮರಣಾರ್ಥ ವಿಶೇಷ ಅಂಚೆ ಲಕೋಟೆಯನ್ನು ಮಾಹೆ ಆಡಳಿತ ಕಚೇರಿಯಲ್ಲಿ ಅಂಚೆ ಇಲಾಖೆಯ ಕರ್ನಾಟಕದ ಸಿಪಿಎಂಜಿ ಚಾರ್ಲ್ಸ್‌ ಲೋಬೋ ಸೋಮವಾರ ಬಿಡುಗಡೆಗೊಳಿಸಿದರು. ಈ ವಿಶೇಷ ಅಂಚೆ ಚೀಟಿಯು ಮಣಿಪಾಲ ಮಾಹೆ ವಿಶ್ವವಿದ್ಯಾನಿಲಯ ಮತ್ತು ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ ಪ್ರಾಯೋಜಿಸಿದ ಕ್ಯಾನ್ಸಲೇಶನ್‌ (ಮೊಹರು) ಹೊಂದಿದೆ. 

Advertisement

ಬಳಿಕ ಮಾತನಾಡಿದ ಚಾರ್ಲ್ಸ್‌ ಲೋಬೋ ಅವರು, ಗಾಂಧೀಜಿಯವರ 150ನೆಯ ಜಯಂತಿ ಪ್ರಯುಕ್ತ ರಾಜ್ಯದ 12 ಕಡೆಗಳಲ್ಲಿ ಲಕೋಟೆ ಬಿಡು ಗಡೆಗೊಳಿಸಲಾಗುತ್ತಿದೆ ಎಂದರು. 

ಹಜಾರೆ ಗಾಂಧಿ ಪ್ರತೀಕ
ಈಗಲೂ ಗಾಂಧೀಜಿ ತಣ್ತೀ ಕಂಡು ಬರುತ್ತಿದೆ. ಇದಕ್ಕೆ ಉದಾಹರಣೆ ಅಣ್ಣಾ ಹಜಾರೆಯವರು. ಗಾಂಧೀಜಿಯವರು ಯಾವತ್ತೂ ಸಾರ್ವಜನಿಕ ಪ್ರತಿಭಟನೆ ಗಳನ್ನು ನಿರ್ಲಕ್ಷಿಸಬಾರದು ಎಂದಿದ್ದರು.
ಅಣ್ಣಾ ಹಜಾರೆಯವರು ನಡೆಸಿದ ಪ್ರತಿಭಟನೆಯಿಂದ ಯುಪಿಎ ಸರಕಾರ ಬಿತ್ತು, ಆಮ್‌ ಆದ್ಮಿ ಪಕ್ಷ ಉದಯವಾಯಿತು. ಹಜಾರೆಯವರ ರಾಳೆಗಾಂವ್‌ಸಿದ್ಧಿ ಗ್ರಾಮದಲ್ಲಿ ಶ್ರಮದಾನ, ಮದ್ಯವರ್ಜನವೇ ಮೊದಲಾದ ಪಂಚತಣ್ತೀ ಆಧಾರದಲ್ಲಿ ಅಭಿವೃದ್ಧಿ ಕಂಡುಬರುತ್ತಿದೆ ಎಂದು ಚಾರ್ಲ್ಸ್‌ ಲೋಬೋ ಹೇಳಿದರು. 

ಗಾಂಧೀಜಿ ಭಾಷಣದ ಉಲ್ಲೇಖ
ಉಡುಪಿ ಅಜ್ಜರಕಾಡಿನಲ್ಲಿ ನಡೆಸಿದ ಭಾಷಣವನ್ನು ಉಲ್ಲೇಖೀಸಿದ ಲೋಬೋ,ಶ್ರೀಕೃಷ್ಣ ಮಠದಲ್ಲಿ ದಲಿತರಿಗೆ ಪ್ರವೇಶ ಕೊಡುವ ಮೂಲಕ ಮೇಲ್ಪಂಕ್ತಿ ಯಾಗಬೇಕು. ದೇವಸ್ಥಾನಗಳಿಗೆ ದಲಿತರ ಪ್ರವೇಶ ಎಲ್ಲರನ್ನು ಒಳ ಗೊಂಡ ಸಮಾಜದ ಒಮ್ಮತದ ನಿರ್ಣಯವಾಗಬೇಕು, ಇದನ್ನು ಆತ್ಮಶುದ್ಧಿಗಾಗಿ ನಡೆಸಬೇಕೆಂದು ಹೇಳಿದ್ದರು.

ಮಂಗಳೂರಿನಲ್ಲಿ ಮೀನುಗಾರರು ಉಪ್ಪಿನ ತೆರಿಗೆಯಿಂದ ಮೀನಿನ ಉದ್ಯಮಕ್ಕೆ ತೊಂದರೆಯಾಗುತ್ತದೆ ಎಂದಾಗ ಮುಂದೆ ಪರಿಹರಿಸಲಾಗು ವುದು ಎಂದಿದ್ದರು. ಅನಂತರ ಉಪ್ಪಿನ ಸತ್ಯಾಗ್ರಹ ಮೂಲಕ ಇದು ಪರಿಹಾರವಾಯಿತು ಎಂದರು. 

Advertisement

ಈಗ ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿ, ಅಪಪ್ರಚಾರ ನಡೆಯುತ್ತಿದ್ದು ಇದರ ವಿರುದ್ಧ ಅಹಿಂಸಾ ಚಳವಳಿ ನಡೆಸಬೇಕಾಗಿದೆ. ಹೀಗೆ ಗಾಂಧೀಜಿಯವರ ಚಳವಳಿ ಈಗಲೂ ಪ್ರಸ್ತುತ ಎಂದರು. 

ಸಹಕುಲಪತಿ ಡಾ| ಪಿಎಲ್‌ಎನ್‌ಜಿ ರಾವ್‌ ಸ್ವಾಗತಿಸಿ ಕುಲಸಚಿವ ಡಾ| ನಾರಾಯಣ ಸಭಾಹಿತ್‌ ವಂದಿಸಿದರು. ಪ್ರಾಧ್ಯಾಪಕರಾದ ಡಾ| ಜೋಸೆಫ್ ಥಾಮಸ್‌ ಪ್ರಸ್ತಾವನೆಗೈದು ಡಾ| ವಿದ್ಯಾ ಸರಸ್ವತಿ ಕಾರ್ಯಕ್ರಮ ನಿರ್ವಹಿಸಿದರು. ಅಕಾಡೆಮಿ ಕಾರ್ಯದರ್ಶಿ, ಆಡಳಿತಾಧಿಕಾರಿ ಡಾ| ಎಚ್‌. ಶಾಂತಾರಾಮ್‌, ಉಡುಪಿ ಅಂಚೆ ವಿಭಾಗದ ಅಧೀಕ್ಷಕ ರಾಜಶೇಖರ ಭಟ್‌ ಉಪಸ್ಥಿತರಿದ್ದರು.

ಡಾ| ಪೈಯವರಿಗೆ ಗಾಂಧಿ ಆಕರ್ಷಣೆ
ಎಂಇಎಂಜಿ ಅಧ್ಯಕ್ಷ, ಅಕಾಡೆಮಿಯ ಕುಲಸಚಿವ ಡಾ| ರಂಜನ್‌ ಆರ್‌. ಪೈ ಅವರು ಚಾರ್ಲ್ಸ್‌ ಲೋಬೋ ಅವರಿಗೆ ಸ್ಮರಣಿಕೆ ನೀಡಿದರು. ಡಾ| ಟಿಎಂಎ ಪೈಯವರಿಗೆ ಗಾಂಧೀಜಿಯವರ ಮೇಲೆ ವಿಶೇಷ ಆಕರ್ಷಣೆ ಇತ್ತು. ಅದಕ್ಕಾಗಿಯೇ ಪ್ರಥಮ ಕಾಲೇಜಿಗೆ ಮಹಾತ್ಮಾ ಗಾಂಧಿ ಹೆಸರು, ವೈದ್ಯಕೀಯ ಕಾಲೇಜಿಗೆ ಕಸ್ತೂರ್ಬಾ ಹೆಸರು ಇರಿಸಿದರು ಎಂದು ಮಾಹೆ ವಿ.ವಿ. ಸಹಕುಲಾಧಿಪತಿ, ಅಕಾಡೆಮಿ ಅಧ್ಯಕ್ಷ ಡಾ| ಎಚ್‌.ಎಸ್‌. ಬಲ್ಲಾಳ್‌ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next