Advertisement

ಗಾಂಧಿ ಪ್ರತಿಮೆ ತೆರವು

08:15 AM Dec 14, 2018 | Karthik A |

ಅಕ್ರಾ: ಮಹಾತ್ಮಾ ಗಾಂಧಿ ಆಫ್ರಿಕನ್ನರ ಬಗ್ಗೆ ವರ್ಣದ್ವೇಷ ಹೊಂದಿದ್ದರು ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದರಿಂದ, ಘಾನಾ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿನ ಗಾಂಧಿ ಪ್ರತಿಮೆಯನ್ನು ತೆರವುಗೊಳಿಸಲಾಗಿದೆ. ಎರಡು ವರ್ಷಗಳ ಹಿಂದಷ್ಟೇ ಅಂದಿನ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಇಲ್ಲಿ ಗಾಂಧಿ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ಆದರೆ ಆಪ್ರಿಕಾದ ಕಪ್ಪು ವರ್ಣೀಯರಿಗಿಂತ ಭಾರತೀಯರು ಉತ್ತಮರು ಎಂಬ ರೀತಿ ಗಾಂಧಿ ಬರೆದಿದ್ದರು ಎಂಬುದಾಗಿ ವಿವಿ ಉಪನ್ಯಾಸಕರು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದರು. ಹೀಗಾಗಿ ಲೆಗೋನ್‌ ವಿವಿ ಕ್ಯಾಂಪಸ್‌ನಲ್ಲಿರುವ ಗಾಂಧಿ ಪ್ರತಿಮೆಯನ್ನು ರಾತ್ರೋರಾತ್ರಿ ತೆರವುಗೊಳಿಸಲಾಗಿದೆ. ಆದರೆ ವಿವಿ ಅಧಿಕಾರಿಗಳು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next