ಮೈಸೂರು: ಇಲ್ಲಿನ ಸ್ವಾತಂತ್ರ್ಯ ಉದ್ಯಾನವನದಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿ ಪ್ರತಿಮೆಯನ್ನು ವಿರೂಪ ಮಾಡಿರುವ ಘಟನೆ ಶುಕ್ರವಾರ ನಡೆದಿದೆ. ಪ್ರತಿಮೆಯಲ್ಲಿದ್ದ ಕಂಚಿನ ಊರುಗೋಲನ್ನು ಕಿಡಿಗೇಡಿಗಳು ಕಿತ್ತುಕೊಂಡು ಹೋಗಿದ್ದು, ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಿಡಿಗೇಡಿಗಳು ಮೈಸೂರಿನ ಸುಬ್ಬರಾಯನ ಕೆರೆಯ ಮಧ್ಯ ಭಾಗದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ದಂಡಿಯಾತ್ರೆ ಸ್ಮಾರಕಕ್ಕೆ ಅಪಮಾನ ಮಾಡಿದ್ದು, ಗಾಂಧೀಜಿ ಪ್ರತಿಮೆಯ ಕೈಯಲ್ಲಿ ಹಿಡಿದಿರುವ ಕೋಲು, ಕನ್ನಡಕ ಮತ್ತು ಎಡಗೈಯನ್ನು ಭಗ್ನಗೊಳಿಸಿದ್ದಾರೆ.
ಸೂಕ್ತ ಭದ್ರತೆಯಿಲ್ಲದೆ ಸ್ವಾತಂತ್ರ್ಯ ಉದ್ಯಾನವನ ಅನೈತಿಕ ಚಟುವಟಿಕೆಗಳ ತಾಣವಾಗಿದ್ದು, ಮಾದಕ ವ್ಯಸನಿಗಳಿಂದ ಈ ಕೃತ್ಯ ನಡೆದಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಇದನ್ನೂ ಓದಿ:ನಾಯಕರಿಬ್ಬರ ಕಚ್ಚಾಟದಿಂದ ಕಾಂಗ್ರೆಸ್‌ಗೆ ಸೋಲು: ನಳಿನ್ ಕುಮಾರ್
ಹೋರಾಟಗಾರ ಕೆ.ಎಸ್ ಶಿವರಾಮು ನೇತೃತ್ವದಲ್ಲಿ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಗುತ್ತಿದೆ.