Advertisement

ಮಹಾತ್ಮರ ಚಿಂತನೆ ಸಾಕಾರವಾದಾಗ ಸಮಾಜ ಸದೃಢ: ಸಚಿವ ಎಸ್‌. ಅಂಗಾರ

02:29 AM Oct 03, 2021 | Team Udayavani |

ಬೆಳ್ತಂಗಡಿ: ಗಾಂಧೀಜಿ ಅವರ ಅಹಿಂಸಾತ್ಮಕ ಹೋರಾಟ, ರಾಮರಾಜ್ಯದ ಕಲ್ಪನೆ, ಸ್ವಚ್ಛತೆ ಮೊದಲಾದ ವಿಚಾರಗಳನ್ನು ಹೇಳುವುದು ಸುಲಭ, ಅನುಷ್ಠಾನಕ್ಕೆ ತರಲು ವಿಶೇಷ ಪ್ರಯತ್ನ ಬೇಕು. ಶ್ರೀ ಕ್ಷೇತ್ರ ಧರ್ಮ ಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರಿಂದ ಅದು ಸಾಕಾರವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಅಂಗಾರ ಹೇಳಿದರು.

Advertisement

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಧರ್ಮಸ್ಥಳದಲ್ಲಿ ಶನಿವಾರ ಹಮ್ಮಿಕೊಂಡ ಗಾಂಧಿ ಸ್ಮೃತಿ ಹಾಗೂ ವ್ಯಸನ ಮುಕ್ತ ಸಾಧಕರ ಸಮಾವೇಶದಲ್ಲಿ ಅವರು ಮಾತನಾಡಿದರು.

ದೃಢ ಸಂಕಲ್ಪದಿಂದ ಮಾತ್ರ ವ್ಯಸನ ಮುಕ್ತ ಆರೋಗ್ಯಪೂರ್ಣ ಸಮಾಜ ರೂಪಿಸಲು ಸಾಧ್ಯ. ಹೆಗ್ಗಡೆಯವರ ನೇತೃತ್ವದಲ್ಲಿ ಅನೇಕ ಕುಟುಂಬಗಳಿಗೆ ಹೊಸ ಬೆಳಕನ್ನು ನೀಡಿ ಸಾರ್ಥಕ ಜೀವನ ನಡೆಸಲು ಪ್ರೋತ್ಸಾಹಿಸಲಾಗಿದೆ ಎಂದರು.

ಸಮಾವೇಶ ಉದ್ಘಾಟಿಸಿದ ಶಾಸಕ ಹರೀಶ್‌ ಪೂಂಜ ಮಾತನಾಡಿ, ಸಮಸ್ಯೆಗಳನ್ನೇ ಎದುರಿಸುತ್ತಿದ್ದ ಸಮಾಜಕ್ಕೆ ಅನೇಕ ದಾರ್ಶನಿಕರ ತತ್ವಾದರ್ಶಗಳು ಪರಿವರ್ತನೆಯ ಬೆಳಕನ್ನು ನೀಡಿವೆ. ಅದೇ ರೀತಿ ಗಾಂಧೀಜಿಯವರ ವಿಚಾರಧಾರೆಗಳನ್ನು ಡಾ| ಹೆಗ್ಗಡೆ ಅವರು
ಅನುಷ್ಠಾನಗೊಳಿಸುತ್ತ ಸಮಾಜವನ್ನು ಗಾಂಧಿ ತಣ್ತೀದೆಡೆಗೆ ಕೊಂಡೊಯ್ಯುವ ಹೆಜ್ಜೆ ಇರಿಸಿದ್ದಾರೆ ಎಂದರು.

ಇದನ್ನೂ ಓದಿ:ಹಟ್ಟಿಯಂಗಡಿ ವಸತಿ ಶಾಲೆ: ರಂಗೋಲಿಯಲ್ಲಿ ಮೂಡಿದ ಗಾಂಧಿ

Advertisement

ಮಾಣಿಲದ ಮೋಹನದಾಸ ಸ್ವಾಮೀಜಿ ಮತ್ತು ವಿಧಾನ ಪರಿಷತ್‌ ಸದಸ್ಯ ಕೆ. ಪ್ರತಾಪ್‌ಸಿಂಹ ನಾಯಕ್‌ ಶುಭಾಶಂಸನೆಗೈದರು.

ಶ್ರೀ ಕ್ಷೇ.ಧ.ಗ್ರಾ.ಯೋ. ಮುಖ್ಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ| ಎಲ್‌.ಎಚ್‌. ಮಂಜುನಾಥ್‌, ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ವಿ. ರಾಮಸ್ವಾಮಿ, ಜಿಲ್ಲಾಧ್ಯಕ್ಷ ಎನ್‌.ಎ. ರಾಮಚಂದ್ರ, ಸ್ಥಾಪಕಾಧ್ಯಕ್ಷ ವಸಂತ ಸಾಲ್ಯಾನ್‌ ಕಾಪಿನಡ್ಕ, ಉಡುಪಿ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್‌, ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕ ವಿವೇಕ್‌ ವಿ. ಪಾçಸ್‌, ಸಿಒಒ ಅನಿಲ್‌, ದ.ಕ. ಜಿಲ್ಲಾ ವೇದಿಕೆಯ ತಾಲೂಕು ಅಧ್ಯಕ್ಷೆ ಶಾರದಾ ರೈ, ವಿಶ್ವನಾಥ ರೈ, ಮಹಾಬಲ ರೈ, ಮಹಾಬಲ ಚೌಟ, ಸಮಾಜ ಸೇವಕ ಮುಂಬಯಿಯ ಆರ್‌.ಬಿ. ಹೆಬ್ಬಳ್ಳಿ ಉಪಸ್ಥಿತರಿದ್ದರು.

ಪ್ರಶಸ್ತಿ ಪ್ರದಾನ
7 ಮಂದಿಗೆ ಜಾಗೃತಿ ಅಣ್ಣ, ಜಾಗೃತಿ ಮಿತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವ್ಯಸನ ಮುಕ್ತರ ಪರವಾಗಿ ಯಕ್ಷಗಾನ ಕಲಾವಿದ ಬದಿಯಡ್ಕದ ಜಯರಾಮ ಪಾಟಾಳಿ ಮತ್ತು ವೇಣೂರಿನ ಜಾರಪ್ಪ ಮೂಲ್ಯ ಅವರ ಮಗಳು ಕೀರ್ತನಾ ಅನಿಸಿಕೆ ವ್ಯಕ್ತಪಡಿಸಿದರು. ಗ್ರಾಮಾಭಿವೃದ್ಧಿ ಯೋಜನೆ ಯ ದ.ಕ. ಜಿಲ್ಲಾ ನಿರ್ದೇಶಕ ಸತೀಶ್‌ ಶೆಟ್ಟಿ ಸ್ವಾಗತಿಸಿದರು. ಬೆಳ್ತಂಗಡಿ ತಾಲೂಕು ಯೋಜನಾಧಿಕಾರಿ ಜಯಕರ ಶೆಟ್ಟಿ ವಂದಿಸಿದರು. ಯೋಜನಾಧಿಕಾರಿಗಳಾದ ಯಶವಂತ್‌, ಮೋಹನ್‌ ಕೆ. ನಿರೂಪಿಸಿದರು.

ಸಮಾವೇಶಕ್ಕೂ ಮುನ್ನ ಗಣ್ಯರನ್ನು ಧರ್ಮಸ್ಥಳದ ಮಹಾದ್ವಾರದಿಂದ ಸಭಾ ಭವನದ ವರೆಗೆ ಮೆರವಣಿಗೆ ಮೂಲಕ ಕರೆತರಲಾಯಿತು.

1.25 ಲಕ್ಷ ವ್ಯಸನಿಗಳಿಗೆ ಚಿಕಿತ್ಸೆ
ಅಧ್ಯಕ್ಷತೆ ವಹಿಸಿದ್ದ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಮಾತನಾಡಿ, ಅನೇಕ ಅಪಾಯ, ಭೀತಿಗಳನ್ನು ಎದುರಿಸಿ ಧೈರ್ಯ ಮತ್ತು ಆತ್ಮವಿಶ್ವಾಸ ದಿಂದ ಮದ್ಯ ವ್ಯಸನಿಗಳನ್ನು ವ್ಯಸನ ಮುಕ್ತರಾಗಿಸಲು ನಿರಂತರ ಹೋರಾಟ ನಡೆಸಿದ ಜನಜಾಗೃತಿ ವೇದಿಕೆಯ ಕಾರ್ಯಕರ್ತರು ಜನಜಾಗೃತಿ ವಾರಿಯರ್‌ (ಯೋಧರು)ಗಳಾಗಿದ್ದಾರೆ. ಗಾಂಧೀಜಿಯವರ ತತ್ವಾದರ್ಶಗಳನ್ನು ಪಾಲಿಸುವವರು ನೈತಿಕವಾಗಿ ಬಲಿಷ್ಠರಾಗು ವರು ಎಂಬುದಕ್ಕೆ ಜನಜಾಗೃತಿ ವೇದಿಕೆ ಅನೇಕ ಸವಾಲುಗಳನ್ನು ಎದುರಿಸಿ ಇಷ್ಟು ದೂರು ಮುನ್ನಡೆದಿರುವುದೇ ಸಾಕ್ಷಿ. ಈವರೆಗೆ 1,475 ಮದ್ಯವರ್ಜನ ಶಿಬಿರಗಳನ್ನುನಡೆಸಿ 1.25 ಲಕ್ಷ ವ್ಯಸನಿಗಳಿಗೆ ಚಿಕಿತ್ಸೆ ನೀಡಿ ಯಶಸ್ವಿಯಾಗಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next