Advertisement
ಪ್ಲೇಗ್, ಕಾಲರಾ, ಸಿಡುಬು ಆಗಾಗ ಬರುತ್ತಲೇ ಇದ್ದರೂ ಸ್ಪಾನಿಶ್ ಫ್ಲ್ಯೂ ಮಾತ್ರ 1918-19ರ ವೇಳೆ ಒಮ್ಮೆಲೆ ವ್ಯಾಪಕವಾಗಿ ಹರಡಿತು. ಇದು ಹರಡಿದ್ದು ಒಂದನೆಯ ಮಹಾಯುದ್ಧದಲ್ಲಿ ಪಾಲ್ಗೊಂಡ ಸೈನಿಕರು ಮುಂಬಯಿ ಮೂಲಕ ಹಡಗಿನಲ್ಲಿ 1918ರ ಮೇ 29ರಂದು ಬಂದಾಗ. ಆಗ ಪೊಲೀಸರು, ಮಿಲ್‌ಗಳಲ್ಲಿ ಕೆಲಸ ಮಾಡುವವರು, ಸರಕಾರಿ ನೌಕರರು ತೀವ್ರ ಅಸ್ವಸ್ಥರಾದರು. ಎಲ್ಲರೂ ಒಂದೇ ದಿನ ಚಳಿ, ಜ್ವರ, ಮೈಕೈ ನೋವು ಇತ್ಯಾದಿಗಳಿಂದ ರಜೆ ಹಾಕಬೇಕಾಗಿ ಬಂತು. ಆಗ ರೈಲು ಮಾರ್ಗದಲ್ಲಿ ಸಂಚರಿಸುವವರ ಮೂಲಕ ವೈರಸ್ ಮದ್ರಾಸ್ ಪ್ರಾಂತ್ಯ, ಮುಂಬಯಿ (ಈಗಿನ ಉತ್ತರ ಕರ್ನಾಟಕ), ಹೈದರಾಬಾದ್ ಪ್ರಾಂತ್ಯಗಳಿಗೆ (ಹೈದರಾಬಾದ್ ಕರ್ನಾಟಕ) ಹಬ್ಬಿತು. ರೈಲು ಮೂಲಕ ಕರಾವಳಿಗೂ ತಲುಪಿತು. ಇನ್ನೊಂದೆಡೆ ಧಾರವಾಡದ ಕಡೆಯಿಂದಲೂ ಬಂತು. ಕರಾವಳಿ ಕರ್ನಾಟಕದಲ್ಲಿ ಹೊಳೆದಾಟಿ ಹೋಗಬೇಕಾಗಿದ್ದು ನೇರ ರಸ್ತೆ ಮಾರ್ಗಗಳಿಲ್ಲದ ಕಾರಣ ವೈರಸ್ ಬೇರೆ ಕಡೆಯಷ್ಟು ತೀವ್ರವಾಗಿ ಬಾಧಿಸಲಿಲ್ಲ. ಆದರೂ ಜನಸಂಖ್ಯೆಯ ಶೇ. 2ರಷ್ಟು ಮಂದಿ ಸಾವಿಗೀಡಾಗಿದ್ದರೆಂದು ಅಂದಾಜಿಸಲಾಗಿದೆ. ದೇಶದಲ್ಲಿ 1 ಕೋಟಿಗೂ, ಜಗತ್ತಿನಲ್ಲಿ 5 ಕೋಟಿಗೂ ಅಧಿಕ ಜನರು ಸಾವಿಗೀಡಾಗಿದ್ದರು.
Related Articles
Advertisement
“ಮೂಢನಂಬಿಕೆ’ ಅರ್ಥವ್ಯಾಪ್ತಿ: 1929ರಲ್ಲಿ ತಮ್ಮ ಯಂಗ್ ಇಂಡಿಯಾ ಪತ್ರಿಕೆಯಲ್ಲಿ ಓದುಗ ರೊಬ್ಬರ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಸಾಂಕ್ರಾಮಿಕ ಗಳು ಅಶುಚಿತ್ವದಿಂದಾಗಿ, ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಬರುತ್ತವೆ. ಸಿಡುಬಿನಂತಹ ಮಹಾಮಾರಿಗಳಿಗೆ ಮದ್ದು ಇಲ್ಲವೆಂದು ಜನರು ಮೂಢನಂಬಿಕೆಗಳನ್ನು ಪೋಷಿಸಿ ಹಣ ಪೋಲು ಮಾಡಿ ಅಕಾಲಿಕ ಮರಣಕ್ಕೆ ತುತ್ತಾಗುತ್ತಿ¨ªಾರೆ ಎಂದಿದ್ದರು. ಈಗಲೂ ಜ್ವರ, ಶೀತವೇ ಮೊದಲಾದ ಲಕ್ಷಣಗಳು ಕಂಡರೂ ಮನೆ ಯಲ್ಲಿಯೇ ಮಾತ್ರೆಗಳನ್ನು ನುಂಗಿ ಪರೀಕ್ಷೆ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಈಗ ಗಾಂಧೀಜಿ ಹೇಳಿದ ಮೂಢನಂಬಿಕೆ ವೈದ್ಯಕೀಯ ವಿಜ್ಞಾನದ ಪ್ರಧಾನ ಭಾಗವಾದ ಮಾತ್ರೆಗಳ ನುಂಗುವಿಕೆಯೂ ಆಗಿರುವುದು ವಿಪರ್ಯಾಸ. ಸೋಂಕು ತಗಲಿದೆ ಎಂದು ಹೇಳಿಕೊಳ್ಳಲು ಹಿಂದೇಟು ಹಾಕುವ ಮನಃಸ್ಥಿತಿ ಇದೆ. ಇದರಿಂದಾಗಿ ಗುಣಪಡಿಸಬಹುದಾದ ವ್ಯಕ್ತಿಗಳೂ ನಿರ್ಲಕ್ಷ್ಯದಿಂದ ಅಕಾಲಿಕ ಮರಣಕ್ಕೆ ತುತ್ತಾಗುತ್ತಿದ್ದಾರೆ. ವೆಂಟಿಲೇಟರ್, ಐಸಿಯು ಬೆಡ್‌ನಲ್ಲಿದ್ದು ಗುಣಮುಖರಾಗಿ ಬಂದವರ ಅನುಭವ ಕೇಳಿದರೆ ಯಾರೂ ಸೋಂಕನ್ನು ಮುಚ್ಚಿಡಲಾರರು.
ಗಾಂಧಿ ಕರೆ ಈಗ ಏಕೆ ಪ್ರಸ್ತುತ?: ವೆಂಟಿಲೇಟರ್, ಐಸಿಯು ಬೆಡ್‌ಗಳ ಕೊರತೆ ಎದುರಾಗುತ್ತಿರುವ ಹೊತ್ತಿನಲ್ಲಿಯೇ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಅಧ್ಯಯನ ನಡೆಸಿ ಇದೇ ಸ್ಥಿತಿ ಮುಂದುವರಿದು ಜನವರಿಯೊಳಗೆ ಲಸಿಕೆ ಲಭ್ಯವಾಗದಿದ್ದರೆ ಎಪ್ರಿಲ್‌ನಲ್ಲಿ ರಾಜ್ಯದಲ್ಲಿ 25 ಲಕ್ಷ ಜನರಿಗೆ ಸೋಂಕು ತಗಲಬಹುದು, 25,000 ಜನರು ಸಾವಿಗೀಡಾಗ ಬಹುದು ಎಂದು ಎಚ್ಚರಿಸಿದೆ. ಲಸಿಕೆ ಸಿಗುವ ವೇಳೆಗೆ ಜಗತ್ತಿನಲ್ಲಿ 20 ಲಕ್ಷ ಜನರು ಅಸುನೀಗ ಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಹಿಂದೆ ಈಗಿನಂತಹ ಶಿಕ್ಷಣದ ಅರಿವು ಇದ್ದಿರಲಿಲ್ಲ. ಈಗ ಶೈಕ್ಷಣಿಕವಾಗಿ ಮುಂದುವರಿದೂ ಅದೇ ಸ್ಥಿತಿಯನ್ನು ಎದುರಿಸುತ್ತಿರುವಾಗ ಗಾಂಧೀಜಿ ಮಾತು ಸಕಾಲಿಕವೆನಿಸುತ್ತದೆ.
ಸಾಂಕ್ರಾಮಿಕಗಳ ಸಂದರ್ಭದಲ್ಲಿ ಗಾಂಧೀಜಿ ಹೇಳಿಕೆಸಾಂಕ್ರಾಮಿಕ ರೋಗಗಳ ಸಂದರ್ಭ ರೋಗವನ್ನು ಮುಚ್ಚಿಡುವುದರಿಂದ ಏನನ್ನೂ ಸಾಧಿಸಿದಂತಾಗುವುದಿಲ್ಲ. ಇದರಿಂದ ಹಾನಿ ಹೆಚ್ಚು. ಮುಚ್ಚಿಟ್ಟ ವ್ಯಕ್ತಿ ನರಳುವುದಲ್ಲದೆ ದಂಡನೆಗೂ ಒಳಗಾಗಿ ಕಷ್ಟ ಅನುಭವಿಸಬೇಕಾಗುತ್ತದೆ. ಇದರಿಂದ ಇಡೀ ಸಮುದಾಯ ಕಷ್ಟ ಅನುಭವಿಸಬೇಕು. ರಸ್ತೆ ಬದಿ ಮಲಮೂತ್ರ ವಿಸರ್ಜಿಸುವುದು, ಮೂಗನ್ನು ಸುರಿಯುವುದು, ಉಗುಳುವುದು ದೇವರ ಹಾಗೂ ಮಾನವತೆ ವಿರುದ್ಧ ಎಸಗುವ ಪಾಪಗಳು. ಎಲ್ಲೆಂದರಲ್ಲಿ ಉಗುಳುವುದು ದಂಡನಾರ್ಹವಾದದ್ದು ಎಂದರೂ ತಪ್ಪಾಗದು. (ಈಗ ಕೇಂದ್ರ ಸರಕಾರ ಕಾನೂನು ಕ್ರಮ ಕೈಗೊಳ್ಳುತ್ತಿದೆ) ರೋಗಗಳನ್ನು ನಿವಾರಿಸಲು ರೋಗಿಗಳನ್ನು ಪ್ರೀತಿಸಿ. ಆರೈಕೆಯನ್ನು ದಯಾಪರತೆ, ಪ್ರೀತಿ, ಮಾನವೀಯ ಪ್ರಜ್ಞೆಯಿಂದ ಮಾಡಬೇಕು, ಆತ್ಮವಿಶ್ವಾಸ ತುಂಬಬೇಕು. ನಮ್ಮ ಹೋರಾಟ ರೋಗದ ವಿರುದ್ಧವೇ ಹೊರತು ರೋಗಿಯ ವಿರುದ್ಧವಲ್ಲ. (ಕೊನೆಯ ವಾಕ್ಯವನ್ನು ಈಗ ಮೊಬೈಲ್ ದೂರವಾಣಿಯ ಸಂದೇಶದಲ್ಲಿ ಬಳಕೆ ಮಾಡಲಾಗಿದೆ.) ಮಟಪಾಡಿ ಕುಮಾರಸ್ವಾಮಿ