Advertisement

ಕೇಂದ್ರದಿಂದ ಗಾಂಧೀಜಿಯವರ ವಿಚಾರ ಎಲ್ಲೆಡೆ ತಲುಪಿಸಲು ಸಾಧ್ಯವಾಗಿದೆ: ಪ್ರಮೋದ್ ಸಾವಂತ್

03:59 PM Oct 02, 2021 | Team Udayavani |

ಪಣಜಿ: ಸರ್ವಧರ್ಮ ಸಮಭಾವತಾ  ಎಂಬ ಗಾಂಧೀಜಿಯವರ ವಿಚಾರವನ್ನು ಎಲ್ಲೆಡೆ ತಲುಪಿಸಲು ನಮ್ಮ ಸರ್ಕಾರ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನುಡಿದರು.

Advertisement

ಓಲ್ಡ್ ಗೋವಾದಲ್ಲಿ ಗಾಂಧೀಜಯಂತಿಯ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಾಂಧೀಜಿಯವರ ಪುತ್ಥಳಿಗೆ ಪುಷ್ಪಹಾರ ಸಮರ್ಪಿಸಿ ಮುಖ್ಯಮಂತ್ರಿ ಸಾವಂತ್ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿಯವರು ಆರಂಭಿಸಿದ ಆತ್ಮನಿರ್ಭರ ಭಾರತ ಅದರಂತೆಯೇ ಗೋವಾದಲ್ಲಿ ನಾವು ಆರಂಭಿಸಿರುವ ಸ್ವಯಂಪೂರ್ಣ ಗೋವಾ ಇದರ ಅಡಿಯಲ್ಲಿ ಗೋವಾ ರಾಜ್ಯವನ್ನು ಸ್ವಯಂಪೂರ್ಣಗೊಳಿಸೋಣ ಎಂದು ಮುಖ್ಯಮಂತ್ರಿ ಸಾವಂತ್ ಕರೆ ನೀಡಿದರು.

ಈ ಸಂದರ್ಭದಲ್ಲಿ ಕೇಂದ್ರ ಸಚಿವ ಶ್ರೀಪಾದ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next