Advertisement

ಶ್ರೀನಿವಾಸಸಂದ್ರ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ

04:44 PM Nov 27, 2020 | Suhan S |

ಬೇತಮಂಗಲ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಕಾರ್ಯಕ್ರಮಗಳನ್ನು ಪರಿಣಾ ಮಕಾರಿಯಾಗಿ ಅನುಷ್ಠಾನಗೊಳಿಸಿರುವ ಕೆಜಿಎಫ್ ತಾಲೂಕಿನ ಕ್ಯಾಸಂಬಳ್ಳಿ ಹೋಬಳಿಯ ಶ್ರೀನಿವಾಸ ಸಂದ್ರ ಗ್ರಾಪಂಗೆ 2019-20ನೇ ಸಾಲಿನ ತಾಲೂಕು ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ. ಕೆಜಿಎಫ್ ಪ್ರತ್ಯೇಕ ತಾಲೂಕಾಗಿ ಘೋಷಣೆ

Advertisement

ನಂತರ ಮೊದಲ ಬಾರಿಗೆ ಶ್ರೀನಿವಾಸಸಂದ್ರ ಗ್ರಾಪಂಗೆ ಲಭಿಸಿರುವುದು ಈ ಭಾಗದ ಜನತೆಯಲ್ಲಿ ಸಂತಸ ತಂದಿದೆ. ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಸ್ವಚ್ಛತೆ, ಗ್ರಾಮ ನೈರ್ಮಲ್ಯ ಕಾಪಾಡುವುದರೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ. ಶ್ರೀನಿವಾಸಸಂದ್ರ ಗ್ರಾಪಂ ಆಂಧ್ರದ ಗಡಿಗೆ ಹೊಂದಿಕೊಂಡಿದ್ದು,ಮುಖ್ಯಮಂತ್ರಿ ಗ್ರಾಮವಿಕಾಸಯೋಜನೆಯಲ್ಲಿ ಹೆಚ್ಚಿನ ಅನುದಾನ ದೊರೆಯುವ ಹಿನ್ನೆಲೆ ಗಡಿ ಗ್ರಾಮ ರಾಜಪೇಟೆ ರಸ್ತೆ ಹಳ್ಳಿಗೆ ವಿಶೇಷ ಒತ್ತು ನೀಡಿ ಅಭಿವೃದ್ಧಿಗೆ ಮುನ್ನುಡಿ ಬರೆದಿದೆ.

ನೀರಿನ ಸಮಸ್ಯೆ ನಿವಾರಣೆ: ಹಳ್ಳಿಗಳಲ್ಲಿ ಸ್ವಚ್ಛತೆ ಕಾಪಾಡಲು ಒಳ ಚರಂಡಿಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ಪ್ಲಾಸ್ಟಿಕ್‌ ಮುಕ್ತ ಪ್ರದೇಶವಾಗಲು ಸ್ವಚ್ಛತಾಗಾರರ ಮೂಲಕವೂ ದುಷ್ಪರಿಣಾಮಗಳ ಬಗ್ಗೆ ಹಳ್ಳಿಗಳಲ್ಲಿ ಅರಿವು ಮೂಡಿಸಲಾಗಿದೆ. ಕುಡಿ ಯುವ ನೀರಿನ ಸಮಸ್ಯೆ ನೀಗಿಸಲು ಮನೆ- ಮನೆಗೂ ನಲ್ಲಿ ಅಳವಡಿಸಿ ನೀರಿನ ಸಮಸ್ಯೆ ನಿವಾರಣೆಗೆಕ್ರಮಕೈಗೊಳ್ಳಲಾಗಿದೆ.

ಅತ್ಯುತ್ತಮ ಸಾಧನೆ: ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಡಿಒ ಲೋಕೇಶ್‌ 2017-18 ನೇ ಸಾಲಿನ ಬ್ಯಾಚ್‌ ನಲ್ಲಿ ಪಿಡಿಒ ಆಗಿ ಇದೇ ಗ್ರಾಪಂಗೆ ಮೊದಲು ಕರ್ತವ್ಯಕ್ಕೆ ಹಾಜರಾಗಿದ್ದು, ಕೇವಲ ಎರಡೂವರೆ ವರ್ಷದಲ್ಲಿ ಅತ್ಯುತ್ತಮ ಸಾಧನೆ ಮಾಡಿ ಗ್ರಾಪಂಗೆ ಗಾಂಧಿಗ್ರಾಮ ಪುರಸ್ಕಾರ ಪಡೆದುಕೊಂಡಿರುವುದು ವಿಶೇಷ. ಗ್ರಾಪಂ ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ಬಯಲುಮುಕ್ತ ಬಹಿರ್ದೆಸೆ ಗ್ರಾಪಂ ಆಗಿ ನಿರ್ಮಿಸಿದ್ದಾರೆ. ಬಾಕಿ ಇರುವ ಕಡೆಯೂ ಕಟ್ಟಿಕೊಳ್ಳಲು ಸಾರ್ವಜನಿಕರಿಗೆ ಅರಿವು ಮೂಡಿಸಿ ಶೇ.100 ಸಾಧನೆಗೆ ಸವಾಲಾಗಿ ಸ್ವೀಕರಿಸಿ ಸೌಲಭ್ಯ ಒದಗಿಸಿದ್ದಾರೆ. ಗ್ರಾಪಂ ವ್ಯಾಪ್ತಿಯಲ್ಲಿ ಬಡ ಕುಟುಂಬಗಳು ವಸತಿಹೀನರಾಗಿರುವ ಅವರಿಗೆ ಸೈಟ್‌ ಹಂಚಿಕೆ ಮಾಡಲು ಪೀಲಾವರ ಬಳಿ 2 ಎಕರೆ ಪ್ರದೇಶ ಮೀಸಲಿಟ್ಟಿದ್ದಾರೆ. ಗ್ರಾಪಂನಿಂದ ಅಭಿವೃದ್ಧಿಗಾಗಿ ಕಂದಾಯವನ್ನು ಜನರ ಮನೆಗಳ ಬಳಿಗೆ ವಸೂಲಿ ಮಾಡುತ್ತಿರುವ ಹಿನ್ನೆಲೆ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ.

ಕಸ ವಿಲೇವಾರಿ ಘಟಕಕ್ಕೆ 4 ಎಕರೆ ಭೂಮಿ ಮಂಜೂರು :  ಹೆಚ್ಚಾಗಿ ಜನರು ಸೇರುವ ರಾಜಪೇಟೆ ರಸ್ತೆಯಲ್ಲಿ ಸಮುದಾಯ ಶೌಚಾಲಯ ನಿರ್ಮಾಣ ಕಾಮಗಾರಿ ಮಂಜೂರಾಗಿದೆ. ಗ್ರಾಪಂನಕಸ ವಿಲೇವಾರಿಗೆ 4 ಎಕರೆ ಪ್ರದೇಶ ಗುರುತಿಸಿ ಘನ ತ್ಯಾಜ್ಯ ಮತ್ತು ದ್ರವ ತ್ಯಾಜ್ಯ ನಿರ್ಮೂಲನ ಘಟಕ ಸ್ಥಾಪನೆಗೆ ಮಂಜೂರಾಗಿದೆ.

Advertisement

ಕೋಟಿರೂ.ವೆಚ್ಚದಲ್ಲಿ ರಾಜಪೇಟೆ ರಸ್ತೆ ಗ್ರಾಮ ಅಭಿವೃದ್ಧಿ :  ಗ್ರಾಪಂ ನಿಕಟ ಪೂರ್ವ ಅಧ್ಯಕ್ಷ ಪುಷ್ಪಲತಾ ಜಯಪ್ರಕಾಶ್‌ ನಾಯ್ಡು ಅವರು ಸಹ ತಮ್ಮ5 ವರ್ಷಗಳ ಆಡಳಿತಾವಧಿಯಲ್ಲಿ ಗ್ರಾಪಂನ ಎಲ್ಲಾ ಹಳ್ಳಿಗಳ ಅಭಿವೃದ್ಧಿಗಾಗಿ ಮತ್ತು ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಹಿನ್ನೆಲೆ ಎಲ್ಲಾ ಸದಸ್ಯರ ಸಹಕಾರದಿಂದ ಈ ಬಾರಿ ಗಾಂಧಿ ಗ್ರಾಮ ಪುರಸ್ಕಾರ ನೀಡಲಾಗಿದೆ. ತಮ್ಮ5 ವರ್ಷಗಳ ಆಡಳಿತಾವಧಿಯಲ್ಲಿಕೆಜಿಎಫ್ ತಾಲೂಕಿನಲ್ಲೇ ಹೆಚ್ಚಿನ ಮನೆಗಳ ನಿರ್ಮಾಣ, ಸ್ವತ್ಛತೆ, ನರೇಗಾ ಯೋಜನೆಯ ಕಾಮಗಾರಿ ನಡೆಸಿದ್ದು, ಈ ಪುರಸ್ಕಾರ ದೊರೆಯಲುಕಾರಣವಾಗಿದೆ. ಮುಖ್ಯಮಂತ್ರಿ ಗ್ರಾಮ ವಿಕಾಸದಲ್ಲಿ ರಾಜಪೇಟೆ ರಸ್ತೆ ಗ್ರಾಮವನ್ನು1 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಗ್ರಾಮ ಪುರಸ್ಕಾರ ಸರ್ಕಾರಿ ಸೌಲಭ್ಯಗಳನ್ನು ಗ್ರಾಮ ಮಟ್ಟದಲ್ಲಿ ರೂಪಿಸುವುದು ನಮ್ಮಕರ್ತವ್ಯವಾಗಿದ್ದು, ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಇನ್ನೂ ಹೆಚ್ಚಿನಕಾರ್ಯಗಳನ್ನು ಮಾಡುವುದು ನಮ್ಮ ಜವಾಬ್ದಾರಿಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನಕೆಲಸ ಮಾಡುತ್ತೇನೆ. -ಪುಷ್ಪಲತಾ ಜಯಪ್ರಕಾಶ್‌ ನಾಯ್ಡು, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ

ಗಾಂಧಿ ಗಾಮ ಪುರಸ್ಕಾರ ಪಡೆದ ಗ್ರಾಪಂಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಿಂದ ಹೆಚ್ಚುವರಿಯಾಗಿ (5 ಲಕ್ಷ ರೂ.,) ಪ್ರೋತ್ಸಾಹ ಧನ ನೀಡಲಿದ್ದು, ಗ್ರಾಪಂ ಮತ್ತಷ್ಟು ಅಭಿವೃದ್ಧಿ ಪಥದತ್ತಕೊಂಡೊಯ್ಯಲು ಅನುಕೂಲವಾಗಲಿದೆ. ಲೋಕೇಶ್‌, ಪಿಡಿಒ, ಶ್ರೀನಿವಾಸಸಂದ್ರ ಗ್ರಾಪಂ

 

ಆರ್‌.ಪುರುಷೋತ್ತಮ ರೆಡ್ಡಿ

Advertisement

Udayavani is now on Telegram. Click here to join our channel and stay updated with the latest news.

Next