Advertisement

ಗಾಂಧಿ ಕುಟುಂಬದ ನಿಯಂತ್ರಣ ಖಚಿತ; ಸಂಸದೀಯ ಮಂಡಳಿ ಅಧ್ಯಕ್ಷೆಯಾಗಿ ಸೋನಿಯಾ ಮುಂದುವರಿಕೆ ಖಚಿತ

11:24 PM Oct 19, 2022 | Team Udayavani |

ಎರಡು ದಶಕಗಳ ಅನಂತರ ಗಾಂಧಿ ಕುಟುಂಬದ ಹೊರತಾದ ವ್ಯಕ್ತಿ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಏರಿದ್ದಾರೆ. ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡು ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್‌ ಅಧ್ಯಕ್ಷರಾಗಿದ್ದಾರೆ. ಆದರೆ ಇಷ್ಟು ವರ್ಷಗಳು ನೆಹರೂ-ಗಾಂಧಿ ಕುಟುಂಬದ ಹಿಡಿತದಲ್ಲಿ ಪಕ್ಷ ಇತ್ತು. ಪಕ್ಷದ ಪ್ರಮುಖ ನಿರ್ಣಯಗಳನ್ನು ಗಾಂಧಿ ಕುಟುಂಬವೇ ತೆಗೆದುಕೊಳ್ಳುತ್ತಿತ್ತು. ಆದರೆ ನೂತನ ಅಧ್ಯಕ್ಷರ ಆಯ್ಕೆ ಅನಂತರ ಗಾಂಧಿ ಕುಟುಂಬದ ಮುಂದಿನ ಪಾತ್ರ ಏನಾಗಲಿದೆ ಎಂಬ ಚರ್ಚೆಗಳು ನಡೆದಿವೆ.

Advertisement

ಸದ್ಯ ಪಕ್ಷದ ಪರಿಸ್ಥಿತಿ ಮತ್ತು ಕಾಂಗ್ರೆಸ್‌ ಹಿರಿಯ ನಾಯಕರ ಇತ್ತೀಚಿನ ಹೇಳಿಕೆಗಳನ್ನು ಅವಲೋಕಿಸಿದರೆ ಭವಿಷ್ಯದಲ್ಲೂ ಪಕ್ಷದಲ್ಲಿ ಗಾಂಧಿ ಕುಟುಂಬದ ಹಿಡಿತ ಮುಂದುವರಿಯುವ ಸ್ಪಷ್ಟ ಲಕ್ಷಣಗಳಿವೆ. ಪಕ್ಷದ ಪ್ರಮುಖ ನಿರ್ಣಯಗಳನ್ನು ಗಾಂಧಿ ಕುಟುಂಬದ ಸಲಹೆ ಪಡೆಯದೇ ಮುಂದುವರಿಯುವ ಸಾಧ್ಯತೆಗಳು ತೀರಾ ಕಡಿಮೆ.

“ಕಾಂಗ್ರೆಸ್‌ ಸಂಸದೀಯ ಪಕ್ಷದ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಮುಂದುವರಿ ಯಲಿದ್ದಾರೆ. ಜತೆಗೆ ಪಕ್ಷದ ನಿರ್ಣಯಗಳಲ್ಲಿ ಅನುಭವಿ ಸೋನಿಯಾ ಗಾಂಧಿ ಅವರ ಸಲಹೆಗ ಳನ್ನು ಪಡೆಯಲಾಗುತ್ತದೆ.

ಚುನಾವಣೆ ಸಂದರ್ಭ ಗಳಲ್ಲಿ ಪಕ್ಷದ ಉಸ್ತುವಾರಿಯನ್ನು, ಪ್ರಚಾರ ರ್‍ಯಾಲಿ ಗಳಲ್ಲಿ ಪ್ರಮುಖ ಆಕರ್ಷಣೆಯಾಗಿ ರಾಹುಲ್‌ ಗಾಂಧಿ, ಪ್ರಿಯಾಂಕಾ ವಾದ್ರಾ ಅವರ ಸೇವೆಯನ್ನು ಮುಂದುವರಿಸಲಾಗುತ್ತದೆ. ಅಲ್ಲದೇ ಪಕ್ಷಕ್ಕೆ ಗಾಂಧಿ ಕುಟುಂಬದ ಮಾಗದರ್ಶನ ಮುಂದು ವರಿಯಲಿದ್ದು, ಮುಂದಿನ ದಿನಗಳಲ್ಲೂ ಪ್ರಮುಖ ಪಾತ್ರ ವಹಿಸಲಿದೆ,’ ಎಂದು ಪಕ್ಷದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next