Advertisement

ಗಂಗಾವತಿ ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ: ತಾ.ಪಂ ಸುತ್ತ ಬಿಗುವಿನ ವಾತಾವರಣ

01:41 PM Nov 02, 2020 | keerthan |

ಗಂಗಾವತಿ: ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಹಿನ್ನೆಲೆಯಲ್ಲಿ ನಗರದ ತಾಲೂಕು ಪಂಚಾಯತ್ ಹಾಗೂ ಜಗಜೀವನರಾಂ‌ಮ್ ವೃತ್ತದ ಸುತ್ತ ಬಿಗುವಿನ‌ ವಾತಾವರಣ ಸೃಷ್ಟಿಯಾಗಿದೆ.

Advertisement

ತಾ.ಪಂ ಸುತ್ತ ಹೆಚ್ಚು ಜನ ಸೇರಿದಂತೆ ತಡೆಯಲು ಪೊಲೀಸರು ಕ್ರಮಕೈಗೊಂಡಿದ್ದು ದಾರಿಯಲ್ಲಿ ಬರುವ ಜನರನ್ನು ವಾಪಸ್ ಕಳುಹಿಸುತ್ತಿದ್ದಾರೆ. ಚುನಾವಣೆ ನಡೆಯುವ ತಾ.ಪಂ ಸಭಾಂಗಣದ ಹತ್ತಿರ ಹೋಗಲು ಪತ್ರಕರ್ತರು ಮತ್ತು ಟಿವಿ ಮಾಧ್ಯಮದವರಿಗೆ ಪೊಲೀಸರು ಅವಕಾಶ ನಿರಾಕರಿಸಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಮೊದಲು ಬಿಜೆಪಿ ಅಭ್ಯರ್ಥಿ ಜಯಶ್ರೀ ಸಿದ್ದಾಪೂರ ಹಾಗೂ ಕಾಂಗ್ರೆಸ್ ವತಿಯಿಂದ ಮಾಲಾಶ್ರೀ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಪಕ್ಷದ ತಲಾ ಐವರಿಗೆ ಉಪಸ್ಥಿತರಿರಲು ಅವಕಾಶ ಮಾಡಿಕೊಡಲಾಗಿದೆ.

ಇದನ್ನೂ ಓದಿ:ಪಕ್ಷ ಕಟ್ಟಿದ ಯಡಿಯೂರಪ್ಪರನ್ನು ಚೆನ್ನಾಗಿ ನೋಡಿಕೊಳ್ಳಿ: ನಳಿನ್ ಕಟೀಲ್ ಗೆ ಕಾಂಗ್ರೆಸ್ ಸಲಹೆ!

ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಹೀರಾಸಿಂಗ್ ನಾಗರಾಜ ಕಾಂಗ್ರೆಸ್ ನಿಂದ ಸುಧಾ ಸೋಮನಾಥ ನಾಮಪತ್ರ ಸಲ್ಲಿಸಿದ್ದಾರೆ.

Advertisement

ನಾಮಪತ್ರ ಸಲ್ಲಿಸಲು ಆಗಮಿಸಿದ್ದ ಕಾಂಗ್ರೆಸ್ ಬಿಜೆಪಿ ನಗರಸಭೆ ಸದಸ್ಯರು ಹಾಗೂ ಅವರ ಬೆಂಬಲಿಗರು ವಿಕ್ಟರಿ ಚಿಹ್ನೆ ತೋರಿಸಿ ತಮದೇ ಗೆಲುವು ಎಂಬ ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next