Advertisement

20 ಗಂಟೆ ಆಡಿ ಆಸ್ಪತ್ರೆ ಸೇರಿದ

11:45 AM Feb 03, 2018 | Team Udayavani |

ಬೀಜಿಂಗ್‌: ಈತ ವಿಡಿಯೋ ಗೇಮ್‌ ಆಡಿದ್ದು ಒಂದು ಅಥವಾ ಎರಡು ಗಂಟೆಯಲ್ಲ, ಬರೋಬ್ಬರಿ 20 ಗಂಟೆ. ಪರಿಣಾಮ ಏನು ಗೊತ್ತೇ? ಆತನ ಸೊಂಟದ ಕೆಳಗಿನ ಭಾಗಕ್ಕೆ ಪಾರ್ಶ್ವವಾಯು ಉಂಟಾಗಿದೆ.  ಸ್ಮಾರ್ಟ್‌ಫೋನ್‌, ಇಂಟರ್ನೆಟ್‌ ಕೆಫೆಗಳಲ್ಲಿ ಗಂಟೆಗಟ್ಟಲೆ ವಿಡಿಯೋಗೇಮ್‌ ಆಡುವವರಿಗೆ ಈ ಘಟನೆಯು ಎಚ್ಚರಿಕೆಯ ಸಂದೇಶ ರವಾನಿಸಿದೆ.

Advertisement

ಅಂದ ಹಾಗೆ ಈ ಘಟನೆ ನಡೆದದ್ದು ಚೀನದ ಝೆಝಿಯಾಂಗ್‌ ಪ್ರಾಂತ್ಯದ ಜಿಯಾಕ್ಸಿಂಗ್‌ನಲ್ಲಿ. ಇದು ಅಲ್ಲಿನ ಮಾಧ್ಯಮಗಳಲ್ಲಿ ವರದಿಯಾಗಿದ್ದು, ವಿಡಿಯೋ ಕೂಡ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಜ.27ರ ಸಂಜೆ ಕಂಪ್ಯೂಟರ್‌ ಮುಂದೆ ಕುಳಿತು ವಿಡಿಯೋ ಗೇಮ್‌ ಆಡಲು ಶುರು ಮಾಡಿದಾತ ಜ.28ರ ಮಧ್ಯಾಹ್ನದ ವರೆಗೆ ಆಟ ಮುಂದುವರಿಸಿದ್ದ. ಆತ ಶೌಚಾಲಯಕ್ಕೆ ಹೋಗಬೇಕೆಂದು ನಿರ್ಧರಿಸಿ ಕುರ್ಚಿಯಿಂದ ಏಳಲು ಯತ್ನಿಸಿದ. ಅಷ್ಟರಲ್ಲಿ ಆತನ ಸೊಂಟದ ಕೆಳಭಾಗ ಸಂಪೂರ್ಣ ಶಕ್ತಿ ಕಳೆದುಕೊಂಡಿತ್ತು. ಅಲ್ಲಿದ್ದ ಆತನ ಸ್ನೇಹಿತ ನೆರವಾದರೂ ಸಾಧ್ಯವಾಗಲಿಲ್ಲ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ಸಂದರ್ಭದಲ್ಲಿ ಕೆಲವರು ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದು, ಅದು ವೈರಲ್‌ ಆಗಿದೆ. ಸದ್ಯ ಆತ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ.

ಹೆಚ್ಚುತ್ತಿರುವ ಪಿಡುಗು: ಚೀನದ ಯುವ ಜನರಲ್ಲಿ ವಿಡಿಯೋ ಗೇಮ್‌ ಖಯಾಲಿ ಹೆಚ್ಚಾಗುತ್ತಿದೆ. ಅವರು ವಿದ್ಯಾಭ್ಯಾಸ ತೊರೆದು ಗೇಮ್‌ನತ್ತವೇ ಆಕರ್ಷಿತರಾಗುತ್ತಿದ್ದಾರೆ. ಕಳೆದ ವಾರ ಹತ್ತು ವರ್ಷದ ಬಾಲಕ ತನ್ನ ತಾಯಿಯ ಬ್ಯಾಂಕ್‌ ಖಾತೆಯಿಂದ 17 ಸಾವಿರ ಪೌಂಡ್‌ ಅನ್ನು ಗೇಮ್‌ಗಾಗಿ ವಿಥ್‌ಡ್ರಾ ಮಾಡಿಕೊಂಡ ಘಟನೆಯೂ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next