Advertisement

“ಗೇಮ್‌ ಚೇಂಜರ್’ಪಟ್ಟಿ: ಮುಕೇಶ್‌ಗೆ ಅಗ್ರ ಸ್ಥಾನ

11:42 AM May 18, 2017 | Harsha Rao |

ನ್ಯೂಯಾರ್ಕ್‌: ವಿಶ್ವದ ಅತಿ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ರಿಲಯನ್ಸ್‌ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರು, ಇದೀಗ ಫೋಬ್ಸ್ì ನಿಯತಧಿಕಾಧಿಲಿಕೆ ಬಿಡುಗಡೆ ಮಾಡಿರುವ “ಗ್ಲೋಬಲ್‌ ಗೇಮ್‌ ಚೇಂಜರ್’ ಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ. 

Advertisement

ತಮ್ಮ ಉದ್ಯಮದ ಮೂಲಕ ಜಗತ್ತಿನಲ್ಲಿ ಕೋಟ್ಯಂತರ ಜನರಲ್ಲಿ ಬದಲಾವಣೆ ತಂದ ಉದ್ಯಮಿಗಳನ್ನು ಈ ಪಟ್ಟಿಯಲ್ಲಿ ಹೆಸರಿಸಲಾಗಿದೆ. ಭಾರತದಿಂದ ಅಂಬಾನಿ ಅವರನ್ನು ಮಾತ್ರ ಈ ಪಟ್ಟಿಯಲ್ಲಿ ಹೆಸರಿಸಲಾಗಿದೆ. ಫೋಬ್ಸ್ìನ ಎರಡನೇ ಗ್ಲೋಬಲ್‌ ಗೇಮ್‌ ಚೇಂಜರ್ ಪಟ್ಟಿ ಇದಾಗಿದೆ. ಇದರಲ್ಲಿ ಒಟ್ಟು 25 ಉದ್ಯಮಪತಿಗಳ ಹೆಸರನ್ನು ಪಟ್ಟಿಮಾಡಲಾಗಿದೆ. 

ರಿಲಯನ್ಸ್‌ ಜಿಯೋದಿಂದಾಗಿ ದೇಶದ ದೂರಸಂಪರ್ಕ ಕ್ಷೇತ್ರದಲ್ಲಿ ಮಾತ್ರವಲ್ಲದೆ, ಕೋಟ್ಯಂತರ ಮಂದಿಯ ಬದುಕಿಧಿನಲ್ಲೂ ಮಹತ್ವದ ಬದಲಾವಣೆ ಆಗಿದೆ. ಈ ಹಿನ್ನೆಲೆಯಲ್ಲಿ ಮುಖೇಶ್‌ ಅಂಬಾನಿ ಅವರನ್ನು ಜಾಗತಿಕ ಗೇಮ್‌ ಚೇಂಜರ್ಸ್‌ ಪಟ್ಟಿಯಲ್ಲಿ ಸೇರಿಸಲಾಗಿದೆ. ಭಾರತೀಯ ಜನಸಮುದಾಯಕ್ಕೆ ಇಂಟರ್ನೆಟ್‌ ತಲುಪಿಸುವಲ್ಲಿ ಅವರ ಕಾರ್ಯ ಮಹತ್ವದ್ದು ಎಂದು ಫೋಬ್ಸ್ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next