ಕೊಡಿಯಾಲ್‌ಬೈಲ್: ತುಳುವರಿಗೆ ಆಟಿ ಬಹಳ ಕಷ್ಟದ ತಿಂಗಳಾಗಿದ್ದು, ಇದನ್ನು ಆಡಂಬರದಿಂದ ಆಚರಿಸಿದಾಗ ಮುಂದಿನ ಪೀಳಿಗೆಗೆ ತಪ್ಪು ಸಂದೇಶ ಹೋಗುವ ಸಾಧ್ಯತೆ ಇರುತ್ತದೆ. ಹೀಗಾಗಿ ನಾವು ಎಚ್ಚರಿಕೆಯಿಂದ ಆಟಿ ತಿಂಗಳ ಕಾರ್ಯಕ್ರಮವನ್ನು ಆಚರಿಸಬೇಕು ಎಂದು ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯೆ ರೂಪಕಲಾ ಆಳ್ವ ಹೇಳಿದರು. ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಜಾನಪದ ಸಾಹಿತ್ಯಿಕ ಸಂಘದ ವತಿಯಿಂದ ಬುಧವಾರ ಜರಗಿದ “ಬೆಸೆಂಟ್‌ಡ್ ಆಟಿದ ಆಚರಣೆ’ಯಲ್ಲಿ ಮಾತನಾಡಿದರು.
ತುಳುನಾಡಿನ ರೈತಾಪಿ ವರ್ಗಕ್ಕೆ ಆಟಿ ತಿಂಗಳು ಬಿಡುವಿನ ತಿಂಗಳಾಗಿರುತ್ತದೆ. ಹೀಗಾಗಿ ಹೆಣ್ಣುಮಕ್ಕಳನ್ನು ತಾಯಿ ಮನೆಗೆ ಕಳುಹಿಸುವ ಸಂಪ್ರದಾಯ ಬೆಳೆದುಬಂದಿದೆ. ಜತೆಗೆ ಜನರು ಬಹಳ ಕಷ್ಟದಿಂದ ಇದ್ದು, ಪ್ರಕೃತಿಯಲ್ಲಿ ಸಿಗುವ ಸೊಪ್ಪು ತರಕಾರಿಗಳನ್ನು ತಿಂದು ಬದುಕುವ ಸ್ಥಿತಿ ಇತ್ತು. ಇಂತಹ ಆಚರಣೆಗಳನ್ನು ನಾವು ಪ್ರತಿ ತಿಂಗಳಲ್ಲಿಯೂ ನಡೆಸು ವಂತಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ| ಸತೀಶ್‌ಕುಮಾರ್ ಶೆಟ್ಟಿ ಮಾತನಾಡಿ, ತುಳುನಾಡಿನ ಪ್ರತಿ ಯೊಂದು ಸಾಂಪ್ರದಾಯಿಕ ತಿಂಡಿ ತಿನಸು ಗಳಲ್ಲೂ ರೋಗ ನಿರೋಧಕ ಶಕ್ತಿ ಇರುತ್ತದೆ. ಹೀಗಾಗಿಯೇ ನಮ್ಮ ಪೂರ್ವಜರು ಅದನ್ನು ಕಾಲಕ್ಕೆ ಅನು ಗುಣವಾಗಿ ಬಳಕೆ ಮಾಡುತ್ತಿದ್ದರು ಎಂದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರ ವಿವಿಧ ತಂಡಗಳನ್ನು ರಚಿಸಿ ಅವರಿಗೆ ಆಟಿಯ ತಿಂಗಳ ತಿಂಡಿ ಗಳನ್ನು ತಯಾರಿ ಸುವ ಸ್ಪರ್ಧೆ ಏರ್ಪಡಿಸಲಾಗಿತ್ತು.
ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಶ್ಯಾಮ್‌ಸುಂದರ್ ಕಾಮತ್, ಸಂಚಾಲಕ ದೇವಾನಂದ ಪೈ, ಜಾನಪದ ಸಾಹಿತ್ಯಿಕ ಸಂಘದ ಸಂಚಾಲಕಿ ಸುಮಂಗಳಾ, ಕಾರ್ಯದರ್ಶಿ ಲಕ್ಷಿ$¾à ಉಪಸ್ಥಿತರಿದ್ದರು. ವಿದ್ಯಾರ್ಥಿನಿ ನಿಶ್ಮಿತಾ ಕಾರ್ಯಕ್ರಮ ನಿರ್ವಹಿಸಿದರು.