ಕೊಲಂಬೊ: ಏಷ್ಯಾ ಕಪ್ ಕೂಟದ ಸೂಪರ್ ಫೋರ್ ಸುತ್ತಿನ ಪಾಕ್ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ ಭಾರತೀಯ ಬ್ಯಾಟರ್ ಗಳು ಮುಂದಿನ ಲಂಕಾ ವಿರುದ್ಧ ಪರದಾಡಿದರು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಗ್ರ ಕ್ರಮಾಂಕದ ನಾಲ್ವರು 50ಕ್ಕಿಂತ ಹೆಚ್ಚಿನ ರನ್ ಮಾಡಿ ಮೆರೆದಿದ್ದರು. ಆದರೆ ಲಂಕಾ ವಿರುದ್ಧದ ಮುಖಾಮುಖಿಯಲ್ಲಿ ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರು ಯುವ ಸ್ಪಿನ್ನರ್ ದುನಿತ್ ವೆಲ್ಲಲಗೆ ಅವರ ಸ್ಪಿನ್ ಜಾಲಕ್ಕೆ ಒಳಗಾಗಿದ್ದರು.
20 ವರ್ಷದ ವೆಲ್ಲಲಗೆ ಅವರು ಪ್ರಮುಖ ಐವರು ಬ್ಯಾಟರ್ ಗಳನ್ನು ಔಟ್ ಮಾಡಿ ಟೀಂ ಇಂಡಿಯಾಗೆ ಕಡಿವಾಣ ಹಾಕಿದ್ದರು. ಟೀಂ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ಅವರು ಇದರ ಬಗ್ಗೆ ಮಾತನಾಡಿದ್ದು, ಅಗ್ರ ಕ್ರಮಾಂಕದ ಆಟಗಾರರು ಔಟಾದ ರೀತಿಯನ್ನು ಖಂಡಿಸಿದ್ದಾರೆ.
ಪಂದ್ಯದ ನಂತರ ಸ್ಟಾರ್ ಸ್ಪೋರ್ಟ್ಸ್ ಜತೆ ಮಾತನಾಡಿದ ಅವರು, ಭಾರತೀಯ ತಂಡದಲ್ಲಿ ವಿಶೇಷವಾಗಿ ಸ್ಪಿನ್ನರ್ ಗಳ ವಿರುದ್ಧ ಔಟಾಗುತ್ತಿರುವ ಆತಂಕಕಾರಿ ಮಾದರಿಯನ್ನು ಎತ್ತಿ ತೋರಿಸಿದರು. ಅಲ್ಲದೆ ಅವರು ಈ ಹಿಂದಿನ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದ ಉದಾಹರಣೆಯನ್ನು ನೀಡಿದರು.
ಇದನ್ನೂ ಓದಿ:Bollywood: ನಸೀರುದ್ದೀನ್ ಶಾ ಭಯೋತ್ಪಾದಕರನ್ನು ಇಷ್ಟಪಡುವವರು.. ವಿವೇಕ್ ಅಗ್ನಿಹೋತ್ರಿ
“ಇದು ಒಂದು ಮಾದರಿಯಾಗುತ್ತಿದೆ. ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ನಡೆದ ಆ ಪಂದ್ಯದಲ್ಲಿ ಚೆಂಡು ಸ್ವಲ್ಪ ಗ್ರಿಪ್ ಆಗುತ್ತಿದ್ದಾಗ ಭಾರತವು ಆ್ಯಡಂ ಜಂಪಾ ಮತ್ತು ಆಶ್ಟನ್ ಅಗರ್ ಅವರಂತಹ ಸ್ಪಿನ್ನರ್‌ಗಳ ವಿರುದ್ಧ ಸುಮಾರು 260 ರನ್ ಗಳನ್ನು ಬೆನ್ನಟ್ಟಲು ಪರದಾಡಿತ್ತು. ಯಾವಾಗ ಬಾಲ್ ಗ್ರಿಪ್ ಆಗುತ್ತವೆಯೋ ಆಗ ನಾವು (ಟೀಂ ಇಂಡಿಯಾ) ಕಷ್ಟಪಡುತ್ತೇವೆ. ನಾವು ಆಟವನ್ನು ಆಳವಾಗಿ ತೆಗೆದುಕೊಳ್ಳಬಹುದೇ ಎಂದು ನಮಗೆ ತಿಳಿದಿಲ್ಲ. ಈ ಪಿಚ್ 350-ರನ್ ಗಳ ವಿಕೆಟ್ ಅಲ್ಲ…ಇದು 270 ರನ್ ಪಿಚ್. ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಸಾಫ್ಟ್ ಡಿಸ್ಮಿಸಲ್ ಮೂಲಕ ಔಟಾದರು, ಆದರೆ ಉಳಿದವರು ಫ್ರಂಟ್ ಫೂಟ್ ನಿಂದ ಔಟಾದರು” ಎಂದು ಗಂಭೀರ್ ಹೇಳಿದರು.
ತಾಂತ್ರಿಕತೆಯ ಬಗ್ಗೆ ಮಾತನಾಡಿದ ಗಂಭೀರ್, ಕೆಲವು ಎಸೆತಗಳನ್ನು ಬ್ಯಾಕ್‌ಫೂಟ್‌ನಲ್ಲಿ ಆಡುವುದು ಏಕೆ ಅಗತ್ಯ ಎಂದು ವಿವರಿಸಿದರು.