Advertisement
ಪಿತ್ತಕೋಶವನ್ನು ಆರೋಗ್ಯಯುತವಾಗಿ ಕಾಪಾಡಿಕೊಳ್ಳಲು ಸಲಹೆಗಳು ಪಿತ್ತಕೋಶವನ್ನು ಆರೋಗ್ಯಪೂರ್ಣವಾಗಿ ಕಾಪಾಡಿಕೊಳ್ಳುವುದು ಉತ್ತಮ ಆರೋಗ್ಯದ ರಹಸ್ಯವಾಗಿದೆ. ಪಿತ್ತಕೋಶವನ್ನು ಆರೋಗ್ಯಪೂರ್ಣವಾಗಿ ಇರಿಸಿಕೊಳ್ಳಲು ಆರೋಗ್ಯಯುತ ಜೀವನ ಶೈಲಿಯನ್ನು ರೂಢಿಸಿಕೊಳ್ಳುವುದು ಅಗತ್ಯ. ಪಿತ್ತಕೋಶವನ್ನು ಆರೋಗ್ಯವಾಗಿ ಇರಿಸಿಕೊಳ್ಳುವುದಕ್ಕಾಗಿ ಆರೋಗ್ಯಯುತ ಜೀವನಶೈಲಿಗಾಗಿ ಕೆಲವು ಸಲಹೆಗಳು ಇಲ್ಲಿವೆ.
ಆರೋಗ್ಯಪೂರ್ಣ ಆಹಾರ, ನಿಯಮಿತ ವ್ಯಾಯಾಮ ಮತ್ತು ಅನವಶ್ಯಕ ಔಷಧ, ಪೂರಕ ಆಹಾರ ಸೇವನೆಯನ್ನು ವರ್ಜಿಸುವ ಮೂಲಕ ಬಿಎಂಐ (ಬಾಡಿ ಮಾಸ್ ಇಂಡೆಕ್ಸ್) ಯನ್ನು 18-25ರ ನಡುವೆ ಕಾಪಾಡಿಕೊಳ್ಳಿ. 2. ಸಮತೋಲಿನ ಆಹಾರ ಸೇವಿಸಿ
ಹೆಚ್ಚು ಕ್ಯಾಲೊರಿ ಇರುವ ಆಹಾರ, ಸಂಸ್ಕರಿತ ಕಾಬೊìಹೈಡ್ರೇಟ್ (ಬಿಳಿ ಬ್ರೆಡ್) ಮತ್ತು ಸಕ್ಕರೆಗಳನ್ನು ವರ್ಜಿಸಿ. ಸಂಸ್ಕರಿತ ಮತ್ತು ಜಂಕ್ ಆಹಾರಗಳನ್ನು ಅತಿಯಾಗಿ ಸೇವಿಸಬೇಡಿ. ಉಪ್ಪು ಮತ್ತು ಕೊಬ್ಬಿನ ಸೇವನೆಯನ್ನು ಕಡಿಮೆ ಮಾಡಿ. ನೈಸರ್ಗಿಕ ಆಹಾರಗಳು, ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚು ಹೆಚ್ಚು ಸೇವಿಸಿ.
Related Articles
ಬಿರುಸಾದ ನಡಿಗೆ, ಸೈಕಲ್ ಸವಾರಿ, ಈಜು ಅಥವಾ ಹೊರಾಂಗಣ ಆಟಗಳಲ್ಲಿ ನಿಯಮಿತವಾಗಿ ತೊಡಗಿಕೊಳ್ಳುವುದರಿಂದ ಪಿತ್ತಕೋಶದಲ್ಲಿ ಕೊಬ್ಬು ಸಂಗ್ರಹವಾಗುವುದನ್ನು ತಡೆಯಬಹುದು. ದಿನಕ್ಕೆ 20-30 ನಿಮಿಷಗಳ ಕಾಲ ವಾರಕ್ಕೆ ಐದು ದಿನ ದೈಹಿಕ ಚಟುವಟಿಕೆಗಳಲ್ಲಿ ತೊಡಗುವುದು ಆರೋಗ್ಯಯುತ ದೇಹತೂಕ ಕಾಪಾಡಿಕೊಳ್ಳುವುದಕ್ಕೆ ಅಗತ್ಯ.
Advertisement
4. ಮದ್ಯಪಾನವನ್ನು ವರ್ಜಿಸಿಪಿತ್ತಕೋಶದ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ಮದ್ಯಪಾನವನ್ನು ವರ್ಜಿಸಿ. ಧೂಮಪಾನವೂ ಪಿತ್ತಕೋಶ ಕಾಯಿಲೆಗಳ ಸಹಿತ ಅನೇಕ ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿಸಬಹುದಾದ್ದರಿಂದ ಅದನ್ನೂ ನಿಲ್ಲಿಸಿ. 5. ಮಾದಕವಸ್ತು/ ವಿಷಕಾರಿಗಳನ್ನು ದೂರ ಇರಿಸಿ
ಮಾದಕ ದ್ರವ್ಯಗಳು ಸೋಂಕುಗಳಿಗೆ ಕಾರಣವಾಗುವ ಮೂಲಕ ಪಿತ್ತಕೋಶಕ್ಕೆ ನೇರವಾಗಿ ಅಥವಾ ಪರೋಕ್ಷವಾಗಿ ಹಾನಿ ಉಂಟು ಮಾಡಬಹುದಾದ್ದರಿಂದ ಅವುಗಳನ್ನು ದೂರ ಇರಿಸಿ. ಅನವಶ್ಯವಾಗಿ ಔಷಧಗಳು, ಹೆಲ್ತ್ ಸಪ್ಲಿಮೆಂಟ್‌ಗಳು, ಡಿ ಟಾಕ್ಸಿಫಯಿಂಗ್ ಏಜೆಂಟ್‌ಗಳ ಉಪಯೋಗವನ್ನು ದೂರ ಇರಿಸಿ; ಇವು ಪಿತ್ತಕೋಶಕ್ಕೆ ಗಂಭೀರ ಹಾನಿ ಉಂಟು ಮಾಡಬಹುದಾಗಿವೆ. 6. ಲಸಿಕೆ ಹಾಕಿಸಿಕೊಳ್ಳಿ
ಹೆಪಟೈಟಿಸ್ ಬಿ ವಿರುದ್ಧ ಲಸಿಕೆ ಹಾಕಿಸಿಕೊಳ್ಳಿ. ರೇಜರ್‌ಗಳು, ಹಲ್ಲುಜ್ಜುವ ಬ್ರಶ್‌ಗಳಂತಹ ವೈಯಕ್ತಿಕ ನೈರ್ಮಲ್ಯ ಸಾಧನಗಳನ್ನು ಇತರರ ಜತೆಗೆ ಹಂಚಿಕೊಳ್ಳದಿರಿ. ಸುರಕ್ಷಿತ ಲೈಂಗಿಕ ಜೀವನವನ್ನು ನಡೆಸಿ, ರಕ್ತ ಅಥವಾ ರಕ್ತ ಉತ್ಪನ್ನಗಳಿಗೆ ತೆರೆದುಕೊಂಡರೆ ವೈದ್ಯಕೀಯ ನೆರವು ಪಡೆಯಿರಿ.ನಿಮ್ಮ ಪಿತ್ತಕೋಶ ಸಹಿತ ಎಲ್ಲ ಅಂಗಾಂಗಗಳು ಆರೋಗ್ಯಪೂರ್ಣವಾಗಿದ್ದು, ಆರೋಗ್ಯಯುತ ಜೀವನ ನಡೆಸುವುದು ನಿಮ್ಮ ಗುರಿಯಾಗಿದ್ದರೆ ಮೇಲೆ ಹೇಳಿರುವ ಸಲಹೆಗಳನ್ನು ಪಾಲಿಸಿ ಸಮಸ್ಯೆಗಳಿಂದ ದೂರವುಳಿಯಿರಿ. ಪಿತ್ತಕೋಶ ಕಾಯಿಲೆಗಳ ಚಿಹ್ನೆಗಳು
ಹಠಾತ್ ಪಿತ್ತಕೋಶ ಕಾಯಿಲೆಯ ಸಾಮಾನ್ಯ ಚಿಹ್ನೆಯೆಂದರೆ, ಜಾಂಡಿಸ್ ಅಥವಾ ಅರಸಿನ ಕಾಮಾಲೆ. ದೀರ್ಘಕಾಲಿಕ ಪಿತ್ತಕೋಶ ಕಾಯಿಲೆಗಳಲ್ಲಿ ಸಾಮಾನ್ಯವಾಗಿ ಯಾವುದೇ ಚಿಹ್ನೆಗಳು ಕಂಡುಬರದೆ ಅವು ರೂಢಿಗತ ಆರೋಗ್ಯ ತಪಾಸಣೆಯ ವೇಳೆ ಪತ್ತೆಯಾಗುತ್ತವೆ. ಆದರೆ ಮುಂದುವರಿದ ಹಂತಗಳಲ್ಲಿ ಕಾಲು-ಪಾದಗಳು ಊದಿಕೊಳ್ಳುವುದು, ಹೊಟ್ಟೆ ಊದಿಕೊಳ್ಳುವುದು, ಹೆಮಾಟೆಮೆಸಿಸ್ ಮತ್ತು ಸೆನ್ಸೋರಿಯಂ ಬದಲಾವಣೆಯಂತಹ ಚಿಹ್ನೆಗಳು ಸಾಮಾನ್ಯವಾಗಿರುತ್ತವೆ. ಪಿತ್ತಕೋಶದ ಕಾಯಿಲೆಗಳನ್ನು ಪತ್ತೆ ಹಚ್ಚಲು ಪರೀಕ್ಷೆಗಳು
ಪಿತ್ತಕೋಶದ ಕಾಯಿಲೆಗಳನ್ನು ಪತ್ತೆ ಮಾಡಲು ಸಾಮಾನ್ಯ ಪರೀಕ್ಷೆಗಳೆಂದರೆ ರಕ್ತ ಪರೀಕ್ಷೆಗಳು (ಪಿತ್ತಕೋಶದ ಕಾರ್ಯಚಟುವಟಿಕೆ ತಪಾಸಣೆಗೆ), ಪಿತ್ತಕೋಶದ ಇಮೇಜಿಂಗ್ (ಹೊಟ್ಟೆಯ ಅಲ್ಟ್ರಾಸೌಂಡ್, ಸಿಟಿ ಸ್ಕ್ಯಾನಿಂಗ್). ಈ ಪರೀಕ್ಷೆಗಳಿಂದ ಪಿತ್ತಕೋಶದ ಕಾಯಿಲೆಗಳು ಇರುವುದು ಗೊತ್ತಾದರೆ ಕಾರಣಗಳನ್ನು ಮತ್ತು ಖಚಿತ ಸ್ಥಿತಿಯನ್ನು ತಿಳಿದುಕೊಳ್ಳಲು ಇನ್ನಷ್ಟು ಪರೀಕ್ಷೆಗಳು ಅಗತ್ಯವಾಗುತ್ತವೆ. ಚಿಕಿತ್ಸೆ
ಹಠಾತ್ ಪಿತ್ತಕೋಶ ಕಾಯಿಲೆಗಳು ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲದೆ ತಾವಾಗಿಯೇ ಗುಣ ಹೊಂದುತ್ತವೆ. ಆದರೆ ಕೆಲವು ಪ್ರಕರಣಗಳಲ್ಲಿ ಅವು ಪಿತ್ತಕೋಶದ ಹಠಾತ್ ವೈಫಲ್ಯಕ್ಕೆ ದಾರಿ ಮಾಡಿಕೊಟ್ಟು ಆಸ್ಪತ್ರೆ ವಾಸ, ಪೂರಕ ಚಿಕಿತ್ಸೆ ಮತ್ತು ಅಪರೂಪಕ್ಕೆ ಪಿತ್ತಕೋಶದ ಕಸಿಯನ್ನು ಅಗತ್ಯವಾಗಿಸಬಹುದು. ದೀರ್ಘಕಾಲಿಕ ಪಿತ್ತಕೋಶ ಕಾಯಿಲೆಗಳಲ್ಲಿ, ಕಾಯಿಲೆಯ ಹಂತವನ್ನು ಆಧರಿಸಿ ಚಿಕಿತ್ಸೆ ನೀಡಬೇಕಾಗುತ್ತದೆ. ಪ್ರಾಥಮಿಕ ಹಂತಗಳಲ್ಲಿ (ಪೂರಕ ಪಿತ್ತಕೋಶ ಕಾಯಿಲೆ/ ಸಿರೋಸಿಸ್) ಪಿತ್ತಕೋಶ ಕಾಯಿಲೆಯನ್ನು ಶಮನಿಸುವುದು ಚಿಕಿತ್ಸೆಯ ಗುರಿಯಾಗಿರುತ್ತದೆ. ಮುಂದುವರಿದ ಹಂತಗಳಲ್ಲಿ ಶಮನಕಾರಿ ಚಿಕಿತ್ಸೆಯ ಜತೆಗೆ ಪೂರಕ ಚಿಕಿತ್ಸೆ, ಅಪರೂಪದ ಪ್ರಕರಣಗಳಲ್ಲಿ ಕಸಿ ಅಗತ್ಯವಾಗಿರುತ್ತದೆ. ಪಿತ್ತಕೋಶದ ಸಾಮಾನ್ಯ ಕಾಯಿಲೆಗಳು
ಹೆಪಟೈಟಿಸ್ (ಪಿತ್ತಕೋಶದ ಉರಿಯೂತ) ಪಿತ್ತಕೋಶದ ಉರಿಯೂತವು ದೀರ್ಘಕಾಲಿಕವಾಗಿರಬಹುದು ಅಥವಾ ಹಠಾತ್ ಉಂಟಾಗಬಹುದು.
ಎ. ಹಠಾತ್ ಉರಿಯೂತ- ಇದು ಉಂಟಾಗುವುದಕ್ಕೆ ಸಂಭಾವ್ಯ ಕಾರಣ
1. ವೈರಸ್‌ಗಳು (ಎ, ಇ, ಬಿಯಂತಹ ಹೆಪೆಟ್ರೊಟ್ರೋಪಿಕ್ ವೈರಸ್‌ಗಳು)
2. ವಿಷಕಾರಿಗಳು – ಮದ್ಯ, ಔಷಧಗಳು
ಬಿ. ದೀರ್ಘಕಾಲಿಕ ಹೆಪಟೈಟಿಸ್ – ಮದ್ಯಪಾನ, ಹೆಪಟೈಟಿಸ್ ಬಿ ಮತ್ತು ಸಿ, ಔಷಧಗಳು, ಫ್ಯಾಟಿ ಲಿವರ್
3. ಪಿತ್ತರಸ ಹರಿವಿಗೆ ತಡೆ – ಪಿತ್ತಕೋಶದ ಕಲ್ಲಿನಂತಹ ಕಾಯಿಲೆಗಳು. ಪಿತ್ತರಸ ಹರಿಯುವ ಜಾಲದಲ್ಲಿ ಹಾನಿ
4. ಪಿತ್ತಕೋಶದ ಹಾನಿಕಾರಕ ಬೆಳವಣಿಗೆ ಕಾಯಿಲೆಗಳು – ಹೆಪಟೊಸೆಲ್ಯುಲಾರ್ ಕಾರ್ಸಿನೊಮಾ, ಮೆಟಾಸ್ಟೇಸಿಸ್
5. ಪಿತ್ತಕೋಶದ ದ್ವಿತೀಯಕ ಒಳಗೊಳ್ಳುವಿಕೆಯನ್ನು ಹೊಂದಿರುವ ದೈಹಿಕ ವ್ಯವಸ್ಥೆಯ ಕಾಯಿಲೆಗಳು ಡಾ| ಗಣೇಶ್ ಭಟ್,
ಅಡಿಶನಲ್ ಪ್ರೊಫೆಸರ್
ಗ್ಯಾಸ್ಟ್ರೊಎಂಟರಾಲಜಿ ವಿಭಾಗ
ಕೆಎಂಸಿ, ಮಣಿಪಾಲ.