Advertisement

ಜು.31ಕ್ಕೆ ಬರುತ್ತಿದೆ ಯೋಗರಾಜ್ ಭಟ್ರ ‘ಗಾಳಿಪಟ 2’ ಟ್ರೇಲರ್‌

01:27 PM Jul 29, 2022 | Team Udayavani |

ಗೋಲ್ಡನ್‌ ಸ್ಟಾರ್‌ ಗಣೇಶ್‌, ದಿಗಂತ್‌ ಮತ್ತು ಪವನ್‌ ನಾಯಕರಾಗಿ ಅಭಿನಯಿಸಿರುವ, ಯೋಗರಾಜ್‌ ಭಟ್‌ ನಿರ್ದೇಶನದ “ಗಾಳಿಪಟ-2′ ಚಿತ್ರ ಇದೇ ಆಗಸ್ಟ್‌ 12ಕ್ಕೆ ಬಿಡುಗಡೆಯಾಗುತ್ತಿದೆ. ಈ ವರ್ಷದ ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿರುವ ಈ ಚಿತ್ರದ ಮತ್ತೂಂದು ಅಪ್‌ಡೇಟ್‌ ಅನ್ನು ಚಿತ್ರತಂಡ ಬಿಟ್ಟಿದೆ. ಅದು ಚಿತ್ರದ ಟ್ರೇಲರ್‌ ಬಿಡುಗಡೆ ದಿನಾಂಕ.

Advertisement

ಹೌದು, ಚಿತ್ರದ ಟ್ರೇಲರ್‌ ಜು.31 ರಂದು ರಿಲೀಸ್‌ ಆಗುತ್ತಿದೆ. ಇದಕ್ಕೂ ಮುನ್ನ ನಾಯಕರಾದ ಗಣೇಶ್‌ ಹಾಗೂ ದಿಗಂತ್‌ ಅವರ ಕ್ಯಾರೆಕ್ಟರ್‌ ಇಂಟ್ರೋಡಕ್ಷನ್‌ ಟೀಸರ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಗಣೇಶ್‌ ಅವರ ಪಾತ್ರದ ಕಿರುಪರಿಚಯವಿರುವ ಈ ಟೀಸರ್‌ ಸಿನಿಮಾದೊಳಗಿನ ಫ‌ನ್‌ರೈಡ್‌ ಬಗ್ಗೆ ಸೂಚನೆ ನೀಡಿದೆ.

ಇನ್ನು, “ಗಾಳಿಪಟ-2′ ಚಿತ್ರದ ನಾಲ್ಕು ಹಾಡುಗಳು ಹಿಟ್‌ಲಿಸ್ಟ್‌ ಸೇರಿದ್ದು, ಮೊನ್ನೆಯಷ್ಟೇ ಬಿಡುಗಡೆಯಾದ “ನೀನು ಬಗೆಹರಿಯದ ಹಾಡು… ನೋಡು ಹದಿಹರೆಯದ ಪಾಡು…’ ಎಂಬ ಹಾಡಿಗೂ ಕೇಳುಗ ಧ್ವನಿಗೂಡಿಸಿದ್ದಾನೆ. ಹದಿಹರೆಯದ ಹುಡುಗರ ಎದೆಬಡಿತವನ್ನು ವಿವರಿಸುವಂತಿರುವ ಈ ಹಾಡಿಗೆ ನಿಹಾಲ್‌ ತೌರೋ ಧ್ವನಿಯಾಗಿದ್ದು, ಜಯಂತ್‌ ಕಾಯ್ಕಿಣಿ ಹಾಡಿಗೆ ಸಾಲುಗಳನ್ನು ಬರೆದಿದ್ದಾರೆ. ಇನ್ನು ಅರ್ಜುನ್‌ ಜನ್ಯ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಹಾಡಿನಲ್ಲಿ ನಟ ಪವನ್‌ ಕುಮಾರ್‌ ಮತ್ತು ಶರ್ಮಿಳಾ ಮಾಂಡ್ರೆ ಕಾಣಿಸಿಕೊಂಡಿದ್ದು, ಈ ರೊಮ್ಯಾಂಟಿಕ್‌ ಗೀತೆಗೆ ಬಿ. ಧನಂಜಯ್‌ ನೃತ್ಯ ಸಂಯೋಜಿಸಿದ್ದಾರೆ.

ಇದನ್ನೂ ಓದಿ:ಗುಡಿವಾಡ: 8ನೇ ತರಗತಿ ವಿದ್ಯಾರ್ಥಿ ಜತೆ ಎರಡು ಮಕ್ಕಳ ತಾಯಿ ಪರಾರಿ…

“ಸೂರಜ್‌ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ರಮೇಶ್‌ ರೆಡ್ಡಿ ನಿರ್ಮಿಸುತ್ತಿರುವ “ಗಾಳಿಪಟ-2′ ಚಿತ್ರಕ್ಕೆ ಯೋಗರಾಜ್‌ ಭಟ್‌ ನಿರ್ದೇಶನವಿದೆ. ಚಿತ್ರದಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್‌, ದಿಗಂತ್‌ ಮತ್ತು ಪವನ್‌ ಅವರಿಗೆ ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ನಿಶ್ವಿ‌ಕಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಹಿರಿಯ ನಟ ಅನಂತ ನಾಗ್‌, ಸುಧಾ ಬೆಳವಾಡಿ, ಬುಲೆಟ್‌ ಪ್ರಕಾಶ್‌ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next