ಗಂಗಾವತಿ: 2023 ರ ವಿಧಾನಸಭೆಯ ಚುನಾವಣೆಯಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರು ಹೆಚ್ಚಾಗಿ ಆತ್ಮೀಯ ಗೆಳೆಯ ಸಚಿವ ಬಿ.ಶ್ರೀರಾಮುಲು ಹೇಳಿದರೆ ಸ್ಪರ್ಧೆ ಮಾಡುವುದಾಗಿ ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ ಮರು ರಾಜಕಿಯ ಪ್ರವೇಶ ಮಾಡುವ ಸುಳಿವು ನೀಡಿದರು.
ಅವರು ಸೋಮವಾರ ಹನುಮನಹಳ್ಳಿಯ ಹತ್ತಿರ ಇರುವ ಶ್ರೀಚಂದ್ರಮೌಳೇಶ್ವರ ಮತ್ತು ಸುಗ್ರೀವಾ ದೇಗುಲಗಳನ್ನು ದರ್ಶನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ಅತ್ಯುತ್ತಮವಾಗಿ ಜನಮೆಚ್ಚಿವ ಆಡಳಿತ ನೀಡುತ್ತಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರಕಾರ ಬರುವುದು ಖಚಿತವಾಗಿದೆ. ಕಳೆದ 60 ವರ್ಷ ಕಾಂಗ್ರೆಸ್ ಮಾಡದೇ ಇರುವ ಅಭಿವೃದ್ಧಿ ಕಾರ್ಯಗಳು ದೇಶ ಮತ್ತು ರಾಜ್ಯದಲ್ಲಿ ನಡೆಯುತ್ತಿವೆ. ಸಚಿವ ಬಿ.ಶ್ರೀರಾಮುಲು ಕನ್ನಡ ನಾಡಿನ ಮಗನಾಗಿ ಸೇವೆ ಮಾಡುತ್ತಿದ್ದು ಸ್ವಂತ ಖರ್ಚಿನಲ್ಲಿ ಹಂಪಿಯಲ್ಲಿ ಹಾಗೂ ವಿಶ್ವ ವಿಖ್ಯಾತ ಪಂಪಸರೋವರದಲ್ಲಿ ಜೀರ್ಣೋದ್ಧಾರ ಕಾರ್ಯವನ್ನು ಮಾಡುತ್ತಿದ್ದಾರೆ.
ಇಡೀ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪ್ರತಿ ನಿತ್ಯವೂ ತಾವು ಹಾಗೂ ಶ್ರೀರಾಮುಲು ಕನಸು ಕಂಡು ನನಸು ಮಾಡುತ್ತಿದ್ದು ವಿಶ್ವ ವಿಖ್ಯಾತ ಕಿಷ್ಕಿಂದಾ ಅಂಜನಾದ್ರಿ, ಪಂಪಾಸರೋವರ ಆನೆಗೊಂದಿ ಪ್ರವಾಸೋದ್ಯಮ ಕೇಂದ್ರವಾಗಿ ಸಮಗ್ರ ಅಭಿವೃದ್ಧಿ ಹೊಂದಬೇಕು. ಈಗಾಗಲೇ ರಾಜ್ಯದ ಮುಖ್ಯಮಂತ್ರಿ ಪ್ರಧಾನ ಮಂತ್ರಿಗಳು ಈ ಭಾಗದ ಅಭಿವೃದ್ಧಿಗೆ ಪಣ ತೊಟ್ಟಿದ್ದು ಶಿಘ್ರ ಕಾರ್ಯಗತವಾಗಲಿದೆ ಎಂದರು.
ಇದನ್ನೂ ಓದಿ : ಪಾರ್ಸೆಲ್ ಕೊಟ್ಟು ಬರುವಷ್ಟರಲ್ಲಿ ಸ್ಕೂಟರನ್ನೇ ಎಗರಿಸಿದ ಕಳ್ಳ : ಕಳ್ಳತನದ ದೃಶ್ಯ ಸೆರೆ