ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಇಂದು ಹುಣಸೂರಿನ ವೀರನಹೊಸಹಳ್ಳಿಯಲ್ಲಿ ಗಜಪಯಣಕ್ಕೆ ಚಾಲನೆ ನೀಡಲಾಯಿತು. ಸಂಸದ ಪ್ರತಾಪ್ ಸಿಂಹ, ಶಾಸಕ ಮಂಜುನಾಥ್, ಮೇಯರ್ ಸುನಂದಾ ಪಾಲನೇತ್ರ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಡಿಸಿ ಗೌತಮ್ ಬಗಾದಿ ಭಾಗಿಯಾಗಿದ್ದರು.
ದಸರಾ ಮೆರವಣಿಗೆಗಾಗಿ ಐದು ಗಂಡಾನೆ, ಮೂರು ಹೆಣ್ಣಾನೆಗಳು ಇಂದು ಕಾಡಿನಿಂದ ನಾಡಿಗೆ ಬರಲಿವೆ. ವೀರನಹೊಸಹಳ್ಳಿಯಲ್ಲಿ ಬೆಳಗ್ಗೆ 9:30 ಕ್ಕೆ ಗಜಪಡೆಗೆ ಪೂಜೆ ಸಲ್ಲಿಸಲಾಯಿತು.
ಇದನ್ನೂ ಓದಿ:ಈ ವ್ಯಕ್ತಿ ಪ್ರತಿದಿನ 6 ಕೆಜಿ ಚಿನ್ನ ಧರಿಸ್ತಾನೆ : 3 ಕೆಜಿ ಚಿನ್ನದ ಶರ್ಟ್ ಖರೀದಿಸಿದ್ದಾನೆ
56 ವರ್ಷದ ಅಭಿಮನ್ಯು ಈ ಬಾರಿಯೂ ಗಜಪಡೆಯ ನೇತೃತ್ವ ವಹಿಸಿಕೊಂಡಿದ್ದು, ಅಂಬಾರಿ ಹೊರಲಿದೆ. 34 ವರ್ಷದ ಅಶ್ವತ್ಥಾಮ ಇದೇ ಮೊದಲ ಬಾರಿಗೆ ದಸರಾ ಉತ್ಸವಕ್ಕೆ ಎಂಟ್ರಿ ಕೊಡುತ್ತಿದೆ. 58 ವರ್ಷದ ವಿಕ್ರಮ, 43 ವರ್ಷದ ಧನಂಜಯ, 44 ವರ್ಷದ ಕಾವೇರಿ, 48 ವರ್ಷದ ಚೈತ್ರ, 20 ವರ್ಷದ ಲಕ್ಷ್ಮಿ, 38 ವರ್ಷದ ಗೋಪಾಲಸ್ವಾಮಿ ಆನೆಗಳು ಕಾಡಿನಿಂದ ದಸರಾ ಹಬ್ಬಕ್ಕಾಗಿ ಆಗಮಿಸಿದೆ.
ಇಂದು ಸಂಜೆ ಲಾರಿ ಮೂಲಕ ಮೈಸೂರಿನ ಅಶೋಕಪುರಂ ಅರಣ್ಯ ಭವನಕ್ಕೆ ಆನೆಗಳು ಆಗಮಿಸಲಿದ್ದು, ಅಕ್ಟೋಬರ್ 16 ರಂದು ಅರಮನೆಗೆ ಬರಲಿದೆ.