Advertisement

ಗಗನಯಾನಕ್ಕೆ ಇಸ್ರೋಗೆ ನೇವಿ ಸಾಥ್‌

08:46 PM Feb 09, 2023 | Team Udayavani |

ನವದೆಹಲಿ: ಬಾಹ್ಯಾಕಾಶಕ್ಕೆ ಗಗನಯಾತ್ರಿಗಳನ್ನು ಕಳುಹಿಸುವ ಇಸ್ರೋದ “ಗಗನಯಾನ’ ಯೋಜನೆಗೆ ಭಾರತೀಯ ನೌಕಾಪಡೆಯೂ ಕೈಜೋಡಿಸಿದೆ.

Advertisement

ಬಾಹ್ಯಾಕಾಶದಿಂದ ಭೂಮಿಯ ವಾತಾವರಣಕ್ಕೆ ಮರಳಿದ ಬಳಿಕ ಸಮುದ್ರದಲ್ಲಿ ಪತನಗೊಳ್ಳುವ ಕ್ರ್ಯೂ ಮಾಡ್ಯೂಲ್‌ ನ ರಿಕವರಿ ಪ್ರಯೋಗವನ್ನು ಇಸ್ರೋ ಮತ್ತು ನೌಕಾಪಡೆ ಜಂಟಿಯಾಗಿ ನಡೆಸಿವೆ.

ಕೊಚ್ಚಿಯಲ್ಲಿರುವ ನೌಕಾಪಡೆಯ ವಾಟರ್‌ ಸರ್ವೈವಲ್‌ ಟೆಸ್ಟ್‌ ಫೆಸಿಲಿಟಿ(ಡಬ್ಲ್ಯುಎಸ್‌ಟಿಎಫ್)ಯಲ್ಲಿ ಈ ಪ್ರಯೋಗ ನಡೆಸಲಾಗಿದೆ. ಡಬ್ಲ್ಯುಎಸ್‌ಟಿಎಫ್ ಎನ್ನುವುದು ಅತ್ಯಾಧುನಿಕ ಪರೀಕ್ಷೆಯಾಗಿದ್ದು, ಇಲ್ಲಿ ಗಗನಯಾತ್ರಿಗಳು ಅಥವಾ ಬಾಹ್ಯಾಕಾಶ ನೌಕೆಯಲ್ಲಿರುವವರು¬ ಬೇರೆ ಬೇರೆ ಸನ್ನಿವೇಶಗಳಲ್ಲಿ, ಅಪಘಾತ ಅಥವಾ ಪತನಗೊಳ್ಳುವ ಪರಿಸ್ಥಿತಿ ಎದುರಾದಾಗ ಹೇಗೆ ತಪ್ಪಿಸಿಕೊಳ್ಳಬೇಕು ಎಂಬ ಬಗ್ಗೆ ತರಬೇತಿ ನೀಡಲಾಗುತ್ತದೆ. ಅಂದರೆ, ಈ ಪರೀಕ್ಷೆ ವೇಳೆ ಸಮುದ್ರದಲ್ಲಿನ ಬೇರೆ ಬೇರೆ ರೀತಿಯ ಪರಿಸ್ಥಿತಿಗಳು, ಪರಿಸರೀಯ ಸನ್ನಿವೇಶ, ಹಗಲು/ರಾತ್ರಿ ಸ್ಥಿತಿ ಸೇರಿದಂತೆ ವಿವಿಧ ರೀತಿಯ ಸನ್ನಿವೇಶಗಳ ಮಾದರಿಯನ್ನು ಸೃಷ್ಟಿಸಿರಲಾಗುತ್ತದೆ.

ಸಮಾನ ದ್ರವ್ಯರಾಶಿ, ಗುರುತ್ವ ಕೇಂದ್ರ, ಬಾಹ್ಯ ಆಯಾಮಗಳು ಮತ್ತು ನೈಜ ಕ್ರ್ಯೂ ಮಾಡ್ಯೂಲ್‌ ನ ಬಾಹ್ಯಗೋಚರತೆಯಿರುವಂಥ ಕ್ರ್ಯೂ ಮಾಡ್ಯೂಲ್‌ ರಿಕವರಿ ಮಾಡೆಲ್‌(ಸಿಎಂಆರ್‌ಎಂ) ಅನ್ನು ರೂಪಿಸಲಾಗುತ್ತದೆ. ಯಾವುದೇ ಮಾನವಸಹಿತ ಬಾಹ್ಯಾಕಾಶ ಯೋಜನೆ ಯಶಸ್ವಿಯಾಗಬೇಕೆಂದರೆ ಸಿಬ್ಬಂದಿಯು ಸುರಕ್ಷಿತವಾಗಿ ವಾಪಸಾಗುವುದು ಬಹಳ ಮುಖ್ಯ. ಹೀಗಾಗಿ, ಈ ಕುರಿತು ಸಾಕಷ್ಟು ಸಂಖ್ಯೆಯಲ್ಲಿ ಪ್ರಯೋಗಗಳನ್ನು ನಡೆಸಬೇಕಾಗುತ್ತದೆ ಎಂದು ಇಸ್ರೋ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next