ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಗಗನ್ಯಾನ್ ಮಿಷನ್‌ನ ಅಭಿವೃದ್ಧಿ ಪರೀಕ್ಷಾ ಹಾರಾಟವನ್ನು ಉಡಾವಣೆ ಮಾಡುವ ಕೆಲವೇ ಸೆಕೆಂಡುಗಳು ಬಾಕಿಯಿರುವಾಗ ಸ್ಥಗಿತಗೊಳಿಸಿದೆ.
ಭಾರತೀಯ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮಹತ್ವಾಕಾಂಕ್ಷೆಯ ಮಿಷನ್ ನ ಮೊದಲ ಪರೀಕ್ಷಾರ್ಥ ಹಾರಾಟವನ್ನು ಇಂದು ನಡೆಸಲು ಇಸ್ರೋ ನಿರ್ಧರಿಸಿತ್ತು.
ನಿಗದಿಯಂತೆ ಇಂದು ಬೆಳಿಗ್ಗೆ ಎಂಟು ಗಂಟೆಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಗಗನಯಾನ ಯೋಜನೆಯ ಪರೀಕ್ಷಾರ್ಥ ಹಾರಾಟ ನಡೆಸಬೇಕಿತ್ತು ಕಾರಣಾಂತರಗಳಿಂದ ಮೂವತ್ತು ನಿಮಿಷಗಳ ಕಾಲ ಮುಂದೂಡಿತ್ತು ಆದರೆ ಮೂವತ್ತು ನಿಮಿಷಗಳ ಬಳಿಕ ಉಡಾವಣೆಗೆ ಸಜ್ಜಾಗಿದ್ದ ಮಿಷನ್ ಉಡಾವಣೆಗೆ ಇನ್ನೇನು ಐದು ಸೆಕುಂಡುಗಳು ಬಾಕಿ ಇರುವಾಗ ನೌಕೆ ಉಡಾವಣೆ ಸ್ಥಗಿತಗೊಂಡಿದೆ.
ಈ ಕುರಿತು ಮಾತನಾಡಿದ ಇಸ್ರೋ ಮುಖ್ಯಸ್ಥ ಸೋಮನಾಥನ್ ಹವಾಮಾನ ವೈಪರೀತ್ಯ ಹಾಗೂ ಇತರ ಕಾರಣಗಳಿಂದ ಗನಯಾನ ಯೋಜನೆಯ ಪರೀಕ್ಷಾರ್ಥ ಹಾರಾಟ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Australia vs Pakistan; ಪಂದ್ಯದ ವೇಳೆ ಪಾಕಿಸ್ಥಾನ್ ಜಿಂದಾಬಾದ್ ಘೋಷಣೆ; Video