Advertisement

ವರ್ಷಾಂತ್ಯಕ್ಕೆ ಗಗನಯಾನ : ಕೋವಿಡ್ ನಿಂದ ಯೋಜನೆ ಅನುಷ್ಠಾನ ವಿಳಂಬ : ಸಚಿವ ಜಿತೇಂದ್ರ ಸಿಂಗ್‌

07:54 PM Sep 15, 2021 | Team Udayavani |

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೋ) ಮಹತ್ವಾಕಾಂಕ್ಷಿ ಯೋಜನೆಯಾದ “ಮಾನವ ರಹಿತ ಬಾಹ್ಯಾಕಾಶ ಪ್ರಯಾಣ’ ಮಾದರಿಯ ಯೋಜನೆಯಾದ “ಗಗನಯಾನ’, 2020ರ ಅಂತ್ಯಕ್ಕೆ ಅಥವಾ 2023ರ ಆರಂಭದಲ್ಲಿ ಅನುಷ್ಠಾನಗೊಳ್ಳಲಿದೆ ಎಂದು ಬಾಹ್ಯಾಕಾಶ ಇಲಾಖೆಯ ಸಹಾಯಕ ಸಚಿವ ಜಿತೇಂದ್ರ ಸಿಂಗ್‌ ತಿಳಿಸಿದ್ದಾರೆ.

Advertisement

ನವದೆಹಲಿಯಲ್ಲಿ ಆಯೋಜಿಸಲಾಗಿದ್ದ “ಫ್ಯೂಚರ್‌ ಆಫ್ ಇಂಡಿಯಾ-ಓಷಿಯಾನಾ ಸ್ಪೇಸ್‌ ಟೆಕ್ನಾಲಜಿ ಪಾರ್ಟ್‌ನರ್‌ಶಿಪ್‌’ ಎಂಬ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, “”ಭಾರತದ 75ನೇ ಸ್ವಾತಂತ್ರ್ಯೋತ್ಸವ ವರ್ಷಾಚರಣೆ ನಿಮಿತ್ತ ಈ ಯೋಜನೆಯನ್ನು 2022ರಲ್ಲೇ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿತ್ತು. ಆದರೆ, ಕೊರೊನಾ ಸಾಂಕ್ರಾಮಿಕದಿಂದಾಗಿ ಯೋಜನೆಯು ವಿಳಂಬವಾಗಿದೆ. ಆದರೆ, ಮುಂದಿನ ವರ್ಷಾಂತ್ಯ ಅಥವಾ 2023ರ ಆರಂಭದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳುವುದು ನಿಶ್ಚಿತ” ಎಂದಿದ್ದಾರೆ.

ಇದೇ ವೇಳೆ, ಬಾಹ್ಯಾಕಾಶ ತಂತ್ರಜ್ಞಾನದ ಅಭಿವೃದ್ಧಿಗಾಗಿ ಹಲವಾರು ಸ್ಟಾರ್ಟ್‌ಪ್‌ಗ್ಳನ್ನು ಹಾಗೂ ಈ ಕ್ಷೇತ್ರದ ಧುರೀಣ ದೇಶಗಳನ್ನು ಸಂಪರ್ಕಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ಬಾಹ್ಯಾಕಾಶ ಕ್ಷೇತ್ರಕ್ಕೆ ಬೇಕಾಗುವ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈಗಾಗಲೇ ನ್ಯೂಜಿಲೆಂಡ್‌, ಆಸ್ಟ್ರೇಲಿಯಾ ದೇಶಗಳು ಮುಂಚೂಣಿಯಲ್ಲಿವೆ. ಆ ಎಲ್ಲಾ ದೇಶಗಳು ಭಾರತದೊಂದಿಗೆ ಕೈ ಜೋಡಿಸಿ, ತಂತ್ರಜ್ಞಾನ ಅಭಿವೃದ್ಧಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಉತ್ಸುಕವಾಗಿವೆ. ಆ ದೇಶಗಳೊಡನೆ ಭಾರತ, ಮುಂಬರುವ ದಿನಗಳಲ್ಲಿ ಬಾಹ್ಯಾಕಾಶ ವಿಜ್ಞಾನ ಕುರಿತ ತಂತ್ರಜ್ಞಾನಗಳನ್ನು ಜಂಟಿಯಾಗಿ ರೂಪಿಸಲು ಪ್ರಯತ್ನಿಸಲಾಗುತ್ತದೆ” ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ :ಕೋವಿಡ್: ಸೋಂಕಿನ ಪ್ರಮಾಣ ಹೆಚ್ಚಳ|ರಾಜ್ಯದಲ್ಲಿಂದು 1116 ಹೊಸ ಪ್ರಕರಣ  

Advertisement

Udayavani is now on Telegram. Click here to join our channel and stay updated with the latest news.

Next