Advertisement

2.7 ಮಿಲಿಯನ್ ವೀಕ್ಷಣೆ ಪಡೆದ ಕೆಜಿಎಫ್ 2 ಚಿತ್ರದ ‘ಗಗನ ನೀ..’ ಹಾಡು

11:38 AM Apr 07, 2022 | Team Udayavani |

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್ ಚಾಪ್ಟರ್ 2’ ಚಿತ್ರದ ಟ್ರೇಲರ್ ಸೂಪರ್ ಹಿಟ್ ಆಗಿದ್ದು ಗೊತ್ತೇ ಇದೆ. ಇದರ ಬೆನ್ನಲ್ಲೇ ಚಿತ್ರ ತಂಡ ಮತ್ತೊಂದು ಹಾಡನ್ನು ಬಿಡುಗಡೆ ಮಾಡಿದೆ. ಮಾತೃ ಪ್ರೇಮದ ‘ ಗಗನ ನೀ..’ ಹಾಡು ಬುಧವಾರ ಬಿಡುಗಡೆಯಾಗಿದ್ದು, 22 ಗಂಟೆಯಲ್ಲಿ 2.7 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದಿದೆ.

Advertisement

ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ ಚಾಪ್ಟರ್ 2’ ಚಿತ್ರದ ಈ ಹಾಡಿನಲ್ಲಿ ಅರ್ಚನಾ ಜೋಯಿಸ್ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಯಶ್ ತಾಯಿಯ ಪಾತ್ರದಲ್ಲಿ ನಟಿಸಿರುವ ಅರ್ಚನಾ ಜೋಯಿಸ್ ಅವರ ಸುತ್ತ ಈ ಹಾಡು ಚಿತ್ರಿತವಾಗಿದೆ.

ಇದನ್ನೂ ಓದಿ:‘ಆಚಾರ್‌ & ಕೋ’; ಇದು ಪಿಆರ್‌ಕೆ ಹೊಸ ಚಿತ್ರ

ಗಗನ ನೀ ಹಾಡನ್ನು ಕಿನ್ನಲ್ ರಾಜ್ ಬರೆದಿದ್ದಾರೆ. ರವಿ ಬಸ್ರೂರು ಸಂಗೀತದ ಹಾಡನ್ನು ಸುಚೇತಾ ಬಸ್ರೂರು ಹಾಡಿದ್ದಾರೆ. ಹಿಂದಿ ಭಾಷೆಯ ‘ಫಲಕ್ ತು’ ಹಾಡನ್ನು ಕುಡಾ ಸುಚೇತಾ ಬಸ್ರೂರು ಹಾಡಿದ್ದು, ತಮಿಳು ಭಾಷೆಯಲ್ಲಿನ ಹಾಡನ್ನು ಅನನ್ಯಾ ಭಟ್ ಹಾಡಿದ್ದಾರೆ. ತೆಲುಗು ಮತ್ತು ಮಲಯಾಳಂ ವರ್ಶನ್ ನಲ್ಲೂ ಈ ಹಾಡು ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

ವಿಜಯ್ ಕಿರಗಂದೂರು ಅವರು ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ನಿರ್ಮಿಸಿರುವ ‘ಕೆಜಿಎಫ್ ಚಾಪ್ಟರ್ 2’ ಚಿತ್ರವು ಏಪ್ರಿಲ್ 14ರಂದು ಬಿಡುಗಡೆಯಾಗಲಿದೆ. ರಾಕಿಂಗ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ ಮುಂತಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next